ಯಲಬುರ್ಗಾ, ಕುಕನೂರ ಠಾಣೆ: ವಿವಿಧ ಸ್ವತ್ತಿನ ಕಳ್ಳತನ ಪ್ರಕರಣ: ರೂ. 13,30,500/- ಮೌಲ್ಯದ ನಗದು ಹಣ, ವಸ್ತುಗಳ ಸೇರಿ 6 ಜನ ಆರೋಪಿತರ ವಶಕ್ಕೆ : ಎಸ್ಪಿ ಡಾ. ರಾಮ್ ಎಲ್ ಅರಸಿದ್ಧಿ
ಡಿ.ಡಿ. ನ್ಯೂಸ್. ಕೊಪ್ಪಳ
ಡಿ.ಡಿ. ನ್ಯೂಸ್. ಕೊಪ್ಪಳ :
ಜಿಲ್ಲೆಯ ಯಲಬುರ್ಗಾ ವೃತ್ತ ವ್ಯಾಪ್ತಿಯ ಯಲಬುರ್ಗಾ, ಕುಕನೂರ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ವಿವಿಧ ಸ್ವತ್ತಿನ ಕಳ್ಳತನ ಆರು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಆರು ಜನ ಆರೋಪಿತರನ್ನು ಬಂಧಿಸಿ ಅವರಿಂದ
ರೂ. . 13,30,500/- ಮೌಲ್ಯದ ನಗದು ಹಣ, ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ಕುರಿತು ಬುಧವಾರ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ರಾಮ್ ಎಲ್ ಅರಸಿದ್ಧಿ ಅವರು,ಯಲಬುರ್ಗಾ ವೃತ್ತ ವ್ಯಾಪ್ತಿಯ ಒಟ್ಟು 06 ಸ್ವತ್ತಿನ ಪ್ರಕರಣಗಳಲ್ಲಿ 06 ಜನ ಆಪಾದಿತರನ್ನು ಪತ್ತೆ ಮಾಡಿ ಅವರಿಂದ ಒಟ್ಟು 4,70,000/- ರೂ ನಗದು ಹಣ, 3,10,500/- ಮೌಲ್ಯದ ಟ್ರಾಲಿ, ಶ್ರೀಗಂದದ ವಸ್ತು ಮತ್ತು ಎತ್ತುಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ 5,50,000/- ರೂ ಮೌಲ್ಯದ ಎರಡು ವಾಹನಗಳನ್ನು ವಶಪಡಿಸಿಕೊಂಡು 06 ಸ್ವತ್ತಿನ ಪ್ರಕರಣಗಳನ್ನು ಭೇದಿಸಿ ಒಟ್ಟಾರೆ 13,30,500/- ಮೌಲ್ಯದ ನಗದು ಹಣ ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಕುಕನೂರು ಎಪಿಎಂಸಿ ಆವರಣದಲ್ಲಿಯ ರಾಜು ಟ್ರೇಡಿಂಗ್ ಕಂಪನಿ ಆಫೀಸ್ ಹಿಂದುಗಡೆ ನಿಲ್ಲಿಸಿದ್ದ ಅಂದಾಜು 1,90,000/- ರೂ. ಬೆಲೆಬಾಳುವ ನೂರಿಯಾ ಅಗೋ ಇಂಡಸ್ಟ್ರೀಜ್ ಗಿಣಿಗೇರಾ ಕಂಪನಿಯ ಟ್ರ್ಯಾಕ್ಟರ್ ಟ್ರೇಲರ್ ನಂ.ಕೆ.ಎ-37/ಟಿ.ಸಿ-2081 ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಘಟನೆ
ಶಿರೂರು ಸೀಮಾದ ತೋಟದಲ್ಲಿ ಬೆಳೆದಿರುವ ಆಂ.ಕಿ.1,32,000/- ರೂ ಮೌಲ್ಯದ 11 ಶ್ರೀಗಂಧದ ಗಿಡವನ್ನು ಕಡಿದು ತುಂಡುಗಳನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆ,
ಕೋನಸಾಗರ ಸೀಮಾದ ಜಮೀನಿನಲ್ಲಿನ ಬದುವಿಗೆ ಹಾಕಿದ ಬೇವಿನ ಬಡ್ಡಿಗೆ ಕಟ್ಟಿದ ಎರಡು ಎತ್ತುಗಳು ಅಂ.ಕಿ 70,000/- ರೂ ಬೆಲೆಬಾಳುವುಗಳನ್ನು ಯಾರೋ ಕಳ್ಳರು ಕಳ್ಳತನಗಳ ಪ್ರಕರಣಗಳನ್ನು ಪತ್ತೆ ಹಚ್ಚಿ, ಆರೋಪಿತರನ್ನು ಬಂಧಿಸಿ ಅವರಿಂದ ಕಳುವಾದ ಸ್ವತ್ತಿನ ಹಣ, ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಪ್ರಕರಣದ ಪತ್ತೆ ಕುರಿತು ಹೆಚ್ಚುವರಿ ಎಸ್.ಪಿ
ಹೇಮಂತಕುಮಾರ ಡಿಎಸ್ಪಿ ಮುತ್ತಣ್ಣ ಸರವಗೋಳ, ಮಾರ್ಗದರ್ಶನದಲ್ಲಿ ಸಿಪಿಐ ಮೌನೇಶ್ವರ ಮಾಲಿಪಾಟೀಲ ರವರ ನೇತೃತ್ವದಲ್ಲಿ ಪ್ರಕರಣದ ತನಿಖಾಧಿಕಾರಿಗಳಾದ ಗುರುರಾಜ ಟಿ. ಪಿ.ಎಸ್.ಐ ಕುಕನೂರು ಠಾಣೆ, ವಿಜಯ ಪ್ರತಾಪ್, ಪಿ.ಎಸ್.ಐ ಯಲಬುರ್ಗಾ ಠಾಣೆ, ಹಾಗೂ ಗುಲಾಂ ಅಹ್ಮದ್ ಪಿ.ಎಸ್.ಐ (ತನಿಖೆ) ನೇತೃತ್ವದಲ್ಲಿ ಯಲಬುರ್ಗಾ ಠಾಣೆ, ಶ್ರೀ ಪ್ರಶಾಂತ ಪಿ.ಎಸ್.ಐ ಬೇವೂರು ಠಾಣೆ ಹಾಗೂ ಸಿಬ್ಬಂದಿಗಳಾದ ಯಲಬುರ್ಗಾ ಠಾಣೆಯ ದೇವೇಂದ್ರಪ್ಪ, ಛತ್ರಪ್ಪ, ವಿನೋದ, ಸದ್ದಾಂ ಹುಸೇನ, ಗುರುರಾಜ,
ಕುಕನೂರು ಠಾಣೆಯ ಎ.ಎಸ್.ಐ ಶರಣಪ್ಪ, ಸಿಬ್ಬಂದಿಯವರಾದ ಮೆಹೆಬೂಬ, ಸರ್ವಶ, ವೆಂಕಟೇಶ, ಬಸಯ್ಯ, ಮಾರುತಿ, ಮಂಜುನಾಥ, ಹನುಮಪ್ಪ, ರವಿಶಂಕರ, ವಿಶ್ವನಾಥ, ಶಿವಾನಂದ, ಬೇವೂರು ಪೊಲೀಸ್ ಠಾಣೆಯ ಬಸವರಾಜ, ಹನುಮಪ್ಪ, ವೀರಬಸಪ್ಪ, ಪ್ರಕಾಶ, ಯಲಬುರ್ಗಾ ವೃತ್ತ ಕಛೇರಿಯ ಹೆಚ್.ಎಸ್ ತಹಶೀಲ್ದಾರ, ಮಹಾಂತೇಶ, ಬಕ್ಷೀದಸಾಬ, ಮಹಾಂತಗೌಡ, ರಿಯಾಜ್ ಡಿಪಿಓ ತಾಂತ್ರಿಕ ವಿಭಾಗದ ಪ್ರಸಾದ, ಮಂಜುನಾಥ, ಎಹೆಚ್‌ಸಿ ಆಶ್ರಫ್, ಬಸಯ್ಯ ಶರಣಪ್ಪ ರವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು ಎಂದು ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್.ಪಿ
ಹೇಮಂತಕುಮಾರ ಡಿಎಸ್ಪಿ ಮುತ್ತಣ್ಣ ಸರವಗೋಳ, ಮಾರ್ಗದರ್ಶನದಲ್ಲಿ ಸಿಪಿಐ ಮೌನೇಶ್ವರ ಮಾಲಿಪಾಟೀಲ ರವರ ನೇತೃತ್ವದಲ್ಲಿ ಪ್ರಕರಣದ ತನಿಖಾಧಿಕಾರಿಗಳಾದ ಗುರುರಾಜ ಟಿ. ಪಿ.ಎಸ್.ಐ ಕುಕನೂರು ಠಾಣೆ, ವಿಜಯ ಪ್ರತಾಪ್, ಪಿ.ಎಸ್.ಐ ಯಲಬುರ್ಗಾ ಠಾಣೆ, ಹಾಗೂ ಗುಲಾಂ ಅಹ್ಮದ್ ಇತರ ಪೊಲೀಸ್ ಅಧಿಕಾರಿಗಳು ಇದ್ದರು.
ಬಂಧಿತ ಆರೋಪಿತರಾದ
ಬಸವರಾಜ ತಂದೆ ಸುರೇಶ ಹೊಸಮನಿ , ಲಕ್ಷಣ ತಂದೆ ಗೋವಿಂದಪ್ಪ ಹರಣಶಿಕಾರಿ, ಕುಮಾರ ತಂದೆ ದೊಡ್ಡಬಸಪ್ಪ ಭೋವಿ, ಕೆ.ಎಸ್. ರೂಪ ನಾಯಕ್ ತಂದೆ ಆರ್. ಶಂಕರನಾಯಕ್, ಪರಸಪ್ಪ ತಂದೆ ಕೈಗಪ್ಪ ಭಜಂತ್ರಿ ಶಿವಾನಂದ ತಂದೆ ಹನಮಂತಪ್ಪ ಭಜಂತ್ರಿ ಇವರುಗಳು ವಿವಿಧ ಪ್ರಕರಣಗಳಲ್ಲಿ ಕಳ್ಳತನ ಮಾಡಿರುವದಾಗಿ ಒಪ್ಪಿಕೊಂಡಿದ್ದು , ಆಪಾದಿತರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲಾಗಿರುತ್ತದೆ ಹಾಗೂ ಪತ್ತೆ ಕಾರ್ಯ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡಕ್ಕೆ ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದೆ :ಡಾ.ರಾಮ್ ಎಲ್ ಅರಸಿದ್ದಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೊಪ್ಪಳ