ಡಿ.ಡಿ. ನ್ಯೂಸ್. ಯಲಬುರ್ಗಾ :
ಪಟ್ಟಣದ ಎಲ್ಲಾ ವಾರ್ಡುಗಳಲ್ಲಿ ಸ್ವಚ್ಚತೆಗೆ ಪಟ್ಟಣ ಪಂಚಾಯಿತಿ ವತಿಯಿಂದ ಕ್ರಮಕೈಗೊಳ್ಳಲಾಗಿದೆ ಎಂದು ಪಪಂ ಮುಖ್ಯಾಧಿಕಾತಿ ನಾಗೇಶ ಹೇಳಿದರು.
ಪಟ್ಟಣದಲ್ಲಿ ಭಾನುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರತಿ ವಾರ ಶನಿವಾರಕ್ಕೊಮ್ಮೆ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಚ ಮಾಡಿಸುತ್ತಿದ್ದೇವೆ, ಪ್ರತಿ ಸೋಮವಾರಕ್ಕೊಮ್ಮೆ ಬಸ್ ನಿಲ್ದಾಣಗಳನ್ನು ಸ್ವಚ್ಚ ಮಾಡಲಾಗುತ್ತದೆ, ಪ್ರತಿ ಮನೆಯಲ್ಲಿಯೂ ಶೌಚಗೃಹಗಳು ಇರುವದರಿಂದ ಬಯಲು ಬಹಿರ್ದಸೆ ಪ್ರಶ್ನೆ ಉದ್ಬವಿಸುವುದಿಲ್ಲ ಎಂದರು.
ಪಪಂನಲ್ಲಿ ಅನುಧಾನ ಇಲ್ಲ, ಪಪಂನ ವಾಹನಗಳು ದುರಸ್ಥಿ ಇದ್ದ ಕಾರಣಕ್ಕೆ ಪಯಾರ್ಯ ವ್ಯವಸ್ಥೆಯಿಂದ ಟ್ರಾಕ್ಟರ್ ತೆಗದುಕೊಳ್ಳಲಾಗಿದೆ, ಪಪಂನಲ್ಲಿ ಯಾವುದೇ ಬೋಗಸ್ ಬಿಲ್ ನಡೆದಿಲ್ಲ ಪಪಂ ಅಧ್ಯಕ್ಷರ ಆರೋಪ ಶುದ್ದ ಸುಳ್ಳಾಗಿದೆ ಎಂದರು.
ಪಪಂನ ಆಡಳಿತ ಮಂಡಳಿ ಗಮನಕ್ಕೆ ತಂದು ಎಲ್ಲಾ ಬಿಲ್ ಗಳಿಗೆ ಅನುಮೋದನೆ ಪಡೆಯಲಾಗಿದೆ.ಏಕಾಏಕಿ ಏನು ಮಾಡಲು ಸಾಧ್ಯವಿಲ್ಲ ಎಂದರು.
ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಅವರು ಅನಧಿಕೃತ ಬಡವಾಣೆಯಲ್ಲಿ ಕಟ್ಟಡ ಕಟ್ಟಿದ್ದಾರೆ, ನೋಟಿಸ್ ನೀಡಿದ್ದರಿಂದ ಸುಖಾಸುಮ್ಮನೆ ಸುಳ್ಳು ಆರೋಪ ಮಾಡುವುದು ಅಧ್ಯಕ್ಷರ ಘನತೆಗೆ ತಕ್ಕುದಾದಲ್ಲ ಎಂದರು.
ಕರವಸೂಲಿ ಬಗ್ಗೆ ವ್ಯಾಪಕ ಅಭಿಯಾನ ಮಾಡಿದರೂ, ನಿರೀಕ್ಷಿತ ಮಟ್ಟದಲ್ಲಿ ವಸೂಲಿಯಾಗಿಲ್ಲ, ಎಲ್ಲಾ ಕಾರ್ಮಿಕರಿಗೂ ವೇತನ ಪಾವತಿಸಲಾಗಿದೆ. ವೇತನ ವಿಳಂಬವಾದರೂ ಕಾರ್ಮಿಕರಿಗೆ ವೈಯಕ್ತಿಕ ಹಣ ಸಹಾಯ ಮಾಡಿರುವೆ ಸಿಬ್ಬಂದಿಗಳ ಜೊತೆ ಉತ್ತಮ ಭಾಂದವ್ಯ ಹೊಂದಿ ಪಟ್ಟಣದ ಕೆಲಸಗಳನ್ನು ಮಾಡಿಸುತ್ತಿರುವೆ ಎಂದರು.
ಕಚೇರಿ ಸಭೆ ನಿಮಿತ್ಯ ಜಿಲ್ಲಾ ಕೇಂದ್ರಕ್ಕೆ ಹೋಗುತ್ತಿರುವೆ, ಪ್ರತಿ ದಿನ ಬೆಳಿಗ್ಗೆ ವಾರ್ಡುಗಳಿಗೆ ಭೇಟಿ ನೀಡಿ ಸ್ವಚ್ಚತೆ ಮಾಡಿಸಿರುತ್ತೇನೆ, ಪಪಂ ಅಧ್ಯಕ್ಷರ ಆರೋಪ ಶುದ್ದ ಸುಳ್ಳಾಗಿದೆ, ನನ್ನಿಂದ ತಪ್ಪಾಗಿದ್ದರೇ ತನಿಖೆಯಾಗಲಿ ಇದು ಬಿಟ್ಟು ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳನೀಡುತ್ತಿರುವುದು ಬೇಸರ ತರಿಸಿದೆ.
ಪಪಂ ಅಕೌಂಟೆಟ್ ಚೆನ್ನಯ್ಯ ಸಂಕಿನಮಠ ಅವರು ಅಧ್ಯಕ್ಷರ ಸ್ವಜಾತಿ ವ್ಯಾಮೋಹದಿಂದ ಅಧ್ಯಕ್ಷರು ಹೇಳಿದ ಹಾಗೆ ಚೆಕ್ಕು ತೆಗೆಯುತ್ತಿದ್ದಾರೆ ಇವರ ವಿರುದ್ದ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತಿದ್ದೆನೆ ಎಂದರು. ಪಪಂನ ಅಭಿವೃದ್ದಿಗೆ ಎಲ್ಲಾ ಸದಸ್ಯರು ಸಹಕಾರ ನೀಡಿದ್ದಾರೆ ಎಂದರು.