deshadoothanews

ಕ್ಷೇತ್ರದ ಸಮಗ್ರ ಅಭಿವೃದ್ಧಿ ರಾಯರೆಡ್ಡಿಯಿಂದ ಮಾತ್ರ ಸಾಧ್ಯ: ಶಂಕರ್ ಬಿದರಿ

ಡಿ. ಡಿ. ನ್ಯೂಸ್. ಕೊಪ್ಪಳ

0

ಡಿ.ಡಿ.ನ್ಯೂಸ್. ಯಲಬುರ್ಗಾ: 

ಮಾಜಿ ಮಂತ್ರಿ, ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಯಿಂದ ಮಾತ್ರ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ನಿವೃತ್ತ ಡಿಜಿಪಿ ಹಾಗೂ ವೀರಶೈವ ಮಹಾಸಭಾ ಅಧ್ಯಕ್ಷ ಶಂಕರ ಬಿದರಿ ಹೇಳಿದರು.

ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಸೋಮವಾರ ತಾಲೂಕಾ ಡಳಿತ, ಶಾಸಕರ ಕಾರ್ಯಾಲಯ, ಯಲಬುರ್ಗಾ ವಿಧಾನಸಭಾ ಅಭಿವೃದ್ಧಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಯಲಬುರ್ಗಾ-ಅಭಿವೃದ್ಧಿ ಸುವರ್ಣ ಯುಗ’ ಪುಸ್ತಕ ಲೋಕಾರ್ಪಣೆ ಗೊಳಿಸಿ ಅವರು ಮಾತನಾಡಿದರು. ಕಳೆದ 40 ವರ್ಷ ಯಲಬುರ್ಗಾ ಅಭಿವೃದ್ಧಿಪಡಿಸಿದ ಮಾದರಿಯಲ್ಲಿ ಮುಂದಿನ ದಿನ ಮಾನಗಳಲ್ಲಿ ರಾಯರೆಡ್ಡಿಯವರು ರಾಜ್ಯದ ಕೆಲಸವನ್ನು ಮಾಡಲಿ. ರಾಜ್ಯದ ಶಾಸಕರಿಗೆ ರಾಯರಡ್ಡಿ ಮಾದರಿಯಾಗಿದ್ದಾರೆ. ಅವರ ಶಕ್ತಿ ಸದುಪಯೋಗವಾಗಬೇಕು ಎಂದರು.

ನಮ್ಮ ರಾಜ್ಯದ ಜಲವನ್ನು ನಾವೇ ಉಪಯೋಗಿಸಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಾವರಿ ವಿಷಯದಲ್ಲಿ ರಾಯರಡ್ಡಿ ನೇತೃತ್ವ ವಹಿಸಿ ಉತ್ತರ ಕರ್ನಾಟಕದಲ್ಲಿರುವ ನೀರಾವರಿ ವಾಜ್ಯಗಳನ್ನು ಬಗೆಹರಿಸಲಿ. ಕೊಪ್ಪಳ ಏತ ನೀರಾವರಿ ಯೋಜನೆ ಪೂರ್ಣಗೊಂಡು

ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಯಲಬುರ್ಗಾ-ಅಭಿವೃದ್ಧಿ ಸುವರ್ಣಯುಗ ಪುಸ್ತಕವನ್ನು ಮಾಜಿ ಸಚಿವ ಪಿ.ಜಿ.ಆರ.ಸಿಂಧ್ಯಾ ಲೋಕಾರ್ಪಣೆಗೊಳಿಸಿ ಮಾತನಾಡಿದ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ರಾಯರಡ್ಡಿ ನಾಡಿನ ಧೀಮಂತ ವ್ಯಕ್ತಿಗಳ ನೆರಳಿನಲ್ಲಿ ಕೆಲಸ ಮಾಡಿದ ವ್ಯಕ್ತಿ. ಕ್ಷೇತ್ರವನ್ನು ಸುವರ್ಣ ಸ್ಥಳವನ್ನಾಗಿಸಿದ್ದಾರೆ. ರಾಯರಡ್ಡಿ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿ ನಾನು ರಾಜ್ಯಕ್ಕೆ ಇಂತಹವರ ಅವಶ್ಯಕತೆ ಇದೆ ಎಂದರು.

ತ್ರಿಚಕ್ರವಾಹನಗಳ ವಿತರಣೆ, ಪೊಲೀಸ್ ಇಲಾಖೆಗೆ ನೂತನ ವಾಹನಗಳ ವಿತರಣೆ, ಬನ್ನಿಕೊಪ್ಪ, ಚಿಕ್ಕಬನ್ನಿಗೋಳ, ಮದ್ಲೂರು ಗ್ರಾಮದ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ ಹಾಗೂ ವಡ್ರಕಲ್ ಗ್ರಾಮದ ಜಮೀನುಗಳ ಪಹಣಿ ಪತ್ರಿಕೆ ವಿತರಣೆ ಮಾಡಲಾಯಿತು.

53 ಸಾವಿರ ಪುಸ್ತಕ ವಿತರಣೆ

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ತಾಲೂಕಿನಲ್ಲಿ 53 ಸಾವಿರ ಪುಸ್ತಕಗಳ ವಿತರಣೆ ಮಾಡಲಾಗುತ್ತದೆ. ತಾಲೂಕಿನ ಅಭಿವೃದ್ಧಿ ಪರಿಚಯಿಸುವ ಉದ್ದೇಶದಿಂದ ಪುಸ್ತಕ ತಯಾರಿಸಲಾಗಿದೆ. ಪುಸ್ತಕ ಓದಿದ ನಂತರ ಸಲಹೆ ನೀಡಬೇಕು. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸಲ್ಲ, ಅದಕ್ಕೆ ನಾನೇ ವಾರಂಟಿ. ರಾಜ್ಯದಲ್ಲಿ ಆಡಳಿತ ಸುಧಾರಣೆಯಾಗಲಿದೆ ಎಂದು ಹೇಳಿದರು.

ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ಭೂದಾಖಲೆಗಳ ಜಂಟಿ ನಿರ್ದೇಶಕಿ ನಜ್ಮಾ, ಎಸ್ಪಿ ಡಾ. ಎಲ್. ರಾಮ್ ಅರಸಿದ್ವಿ ಉಪ ವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ಮಹಾ ವೀರಶೈವ ಮಹಸಭಾ ಉಪಾಧ್ಯಕ್ಷ ಶ್ರೀನಿವಾಸರಡ್ಡಿ ಡಿವೈಎಸ್ಪಿ ಮುತ್ತಣ್ಣ ಸವರಗೋಳ, ತಹಶೀಲ್ದಾರರಾದ ಬಸವರಾಜ ತನ್ನಳ್ಳಿ, ಎಚ್.ಪ್ರಾಣೇಶ, ಇಓ ಸಂತೋಷಪಾಟೀಲ ಬಿರಾದರ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಪಪಂ ಮುಖ್ಯಾಧಿಕಾರಿ ನಾಗೇಶ ಮುಖಂಡರಾದ ಬಸವರಾಜ ಉಳ್ಳಾಗಡ್ಡಿ, ಅಡಿವೆಪ್ಪ ಭಾವಿಮನಿ, ಡಾ. ಶಿವನಗೌಡ ದಾನರೆಡ್ಡಿ, ಶರಣಪ್ಪ ಗಾಂಜಿ, ಸಾವಿತ್ರಿ ಗೊಲ್ಲರ, ಸೇರಿದಂತೆ ಇತರರಿದ್ದರು.

 

Leave A Reply

Your email address will not be published.