Deshadootha Kannada Daily Newspaper | ದೇಶದೂತ ಕನ್ನಡ ದಿನಪತ್ರಿಕೆ | ಕೊಪ್ಪಳ ಜಿಲ್ಲೆ ದಿನಪತ್ರಿಕೆ ಸುದ್ದಿ | Latest koppal News

ಗದಗ ವಿಧಾನಸಭಾ ಚುನಾವಣೆ ಅಂಗವಾಗಿ ಹಿರೇಹಂದಿಗೋಳ, ಹೊಸಳ್ಳಿ ಗ್ರಾಮಗಳಲ್ಲಿ ಮಂಗಳವಾರ ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನೀಲ್ ಮೆಣಸಿನಕಾಯಿ ಭರ್ಜರಿ ರೋಡ್ ಶೋ ನಡೆಸಿದರು.

ಡಿ ಡಿ ನ್ಯೂಸ್. ಗದಗ

 

ಡಿ ಡಿ ನ್ಯೂಸ್. ಗದಗ

ರೋಡ್ ಶೋ ಮೂಲಕ ಮತಯಾಚನೆಗೆ ಆಗಮಿಸಿದ ಅನೀಲ್ ಮೆಣಸಿನಕಾಯಿ ಅವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಬೆಳಿಗ್ಗೆ ಹಿರೇಹಂದಿಗೋಳದಲ್ಲಿ ರೋಡ್ ಶೋ ನಡೆಸಿ ಮನೆ ಮನೆಗೆ ಭೇಟಿ ನೀಡಿ, ಮತಯಾಚಿಸಿದರು. ಬೂದೀಶ್ವರ ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನಾಶೀರ್ವಾದ ಪಡೆದರು.

ಮಧ್ಯಾಹ್ನ ಹೊಸಳ್ಳಿ ಗ್ರಾಮಕ್ಕೆ ಬಂದಿಳಿದ ಅನೀಲ್ ಮೆಣಸಿನಕಾಯಿ ಅವರನ್ನು ಪಕ್ಷದ ಕಾರ್ಯಕರ್ತರು ಅತ್ಯಂತ ವೈಭವಪೇರಿತವಾಗಿ ಬರಮಾಡಿಕೊಂಡರು. ಪಟಾಕಿ ಸಿಡಿಸಿ, ಬಿಜೆಪಿ ಪರ ಜಯಘೋಷಿಸಿ ಸಂಭ್ರಮಿಸಿದರು. ವಾದ್ಯಗಳ ನಾದಕ್ಕೆ ಕುಣಿದು ಕಾರ್ಯಕರ್ತರು ಕುಪ್ಪಳಿಸಿದರು. ಒಂದು ಕಿಲೋ ಮೀಟರ್ ವರೆಗೂ ನಡೆದ ರೋಡ್ ಶೋ ಉದ್ದಕ್ಕೂ ಹೂವಿನ ಸುರಿಮಳೆಗೈದು ಅಭಿಮಾನ ಮೆರೆದರು.

ಗದಗ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಸಾದ್ ಲಾಡ್, ಬಿಜೆಪಿ ಮುಖಂಡ ರಾಜು ಕುರುಡಗಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ಗದಗ ಶಹರ ಘಟಕ ಅಧ್ಯಕ್ಷ ಅನೀಲ್ ಅಬ್ಬಿಗೇರಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಗಮೇಶ್ ದುಂದೂರ, ಕರ್ನಾಟಕ ದ್ರಾಕ್ಷಾರಸ‌‌ ಮಂಡಳಿ ಮಾಜಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ, ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ದ್ಯಾಮಣ್ಣ ನೀಲಗುಂದ, ಗದಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಧವ್ ಗಣಾಚಾರಿ, ಸಹೋದರ ಸಿದ್ಧಲಿಂಗೇಶ್ವರ ಮೆಣಸಿನಕಾಯಿ, ಜಗನ್ನಾಥ್ ರಜಪೂತ ಸೇರಿದಂತೆ ಹಿರೇಹಂದಿಗೋಳ, ಹೊಸಳ್ಳಿ ಗ್ರಾಮಗಳ ಪಕ್ಷದ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು.

Leave A Reply

Your email address will not be published.