deshadoothanews

ರೈತರು ಇ – ಕೆವೈಸಿ ಮಾಡಿಸುವುದು ಕಡ್ಡಾಯ : ಕೃಷಿ ಅಧಿಕಾರಿ ವೀರಣ್ಣ ಗಡಾದ

ಡಿ ಡಿ ನ್ಯೂಸ್. ಗದಗ

0

ಡಿ ಡಿ ನ್ಯೂಸ್. ಗದಗ :

ಕೇಂದ್ರ ಸರ್ಕಾರದ ಪುರಸ್ಕೃತ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ 6 ಸಾವಿರ ರೂಪಾಯಿ ಪ್ರೋತ್ಸಾಹ ಧನ ಪಡೆಯಲು ಇ-ಕೆ ವೈ ಸಿ ಮಾಡುವುದನ್ನು ಸರಕಾರ ಕಡ್ಡಾಯಗೊಳಿಸಿದೆ .

ತಾಂತ್ರಿಕ ಕಾರಣದಿಂದ ಹಾಗೂ ಜನರು ವಲಸೆ ಹೋಗಿರುವುದು ಮತ್ತು ಜಮೀನಿನ ಮಾಲೀಕತ್ವ ಬದಲಾವಣೆ ಆಗಿರುವುದು ಹಾಗೂ ಮರಣ ಸೇರಿ ಹಲವು ಕಾರಣಗಳಿಂದ ಗದಗ ತಾಲೂಕಿನಲ್ಲಿ ಇನ್ನೂ 6600 ರೈತರು ಇ-ಕೆವೈಸಿ ಮಾಡಿಸಿಕೊಳ್ಳುವುದು ಬಾಕಿ ಇರುತ್ತದೆ.

ಹೀಗೆ ಬಾಕಿ ಇರುವ ಯೋಜನೆಯ ಅರ್ಹ ಫಲಾನುಭವಿಗಳು ರೈತ ಸಂಪರ್ಕ ಕೇಂದ್ರ , ನಾಗರಿಕ ಸೇವಾ ಕೇಂದ್ರ,ಗ್ರಾಮ ಒನ್, ಖಾಸಗಿ ಕಂಪ್ಯೂಟರ್ ಕೇಂದ್ರಗಳಲ್ಲಿ ಸಹಿತ ಮೊಬೈಲ್ ಸಂಖ್ಯೆ ಜೋಡಣೆಯಾದ ಆಧಾರ್ ಕಾರ್ಡ ತೆಗೆದುಕೊಂಡು ಹೋಗಿ ಇ-ಕೆವೈಸಿ ಮಾಡಿಸಿಕೊಳ್ಳುಬಹುದು.


ಬೆಟಗೇರಿ ಹೋಬಳಿಯ 29 ಗ್ರಾಮಗಳ 3321 ರೈತರು ಇನ್ನೂ ಇ – ಕೆವೈಸಿ ಮಾಡಿಸಬೇಕಿದೆ.

ಅರ್ಹತೆ ಹೊಂದಿದ ರೈತರ ಬ್ಯಾಂಕ್ ಖಾತೆಗೆ ಈಗಾಗಲೇ 13 ನೇ ಕಂತಿನ ಹಣ ವರ್ಗಾವಣೆಯಾಗಿದ್ದು, 14 ನೇ ಕಂತು ಬರಬೇಕಿದೆ. ಈ ಬಗ್ಗೆ ಕೃಷಿ ಇಲಾಖೆಯಿಂದ ಸಾಕಷ್ಟು ಪ್ರಚಾರ ಮತ್ತು ತಿಳುವಳಿಕೆ ನೀಡಲಾಗಿದೆ. ರೈತರಿಗೆ ಗ್ರೂಪ್ ಕಾಲ್ ಮಾಡುವುದು, ಎಸ್ಎಂಎಸ್ ಮುಖಾಂತರ ಹಾಗೂ ರೈತರ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗಿದೆ. ಸಿ ಎಸ್ ಸಿ ‌ಸೇವಾ ಕೇಂದ್ರ , ಗ್ರಾಮ ಒನ್, ನಾಗರಿಕ ಸೇವಾ ಕೇಂದ್ರಗಳು ಹಾಗೂ ಸಹಕಾರಿ ಸಂಘಗಳಿಗೂ ಸಹ ಈ ಬಗ್ಗೆ ತಿಳುವಳಿಕೆಯನ್ನು ನೀಡಲಾಗಿದೆ.

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಸದುಪಯೋಗಕ್ಕೆ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಕೃಷಿ ಅಧಿಕಾರಿ ವೀರಣ್ಣ ಗಡಾದ ಅವರು ರೈತರಲ್ಲಿ ಮನವಿ ಮಾಡಿದರು.

Leave A Reply

Your email address will not be published.