deshadoothanews

ಸಾರ್ಥಕ ಸೇವೆಯಲ್ಲಿ ಹಳ್ಳಿಕೇರಿಮಠ ದಂಪತಿಗಳು

ಡಿ ಡಿ ನ್ಯೂಸ್. ಗದಗ

0

ಡಿ ಡಿ ನ್ಯೂಸ್. ಗದಗ :

ಬದುಕು ಸಾರ್ಥಕ ಸೇವೆಗಳಿಗೆ ಕಾದು ಕುಳಿತಿರುವ ಅವಕಾಶದ ವೇದಿಕೆ ,ಬಳಸಿಕೊಂಡು ಸಾಧಿಸಿದರೇ ಅದುವೇ ಜೀವನ.

ಸಂಸಾರ ಹಾಗು ಸಮಾಜ ಎರಡು ಕಣ್ಣುಗಳು ಎಂಬುದನ್ನರಿತು ಮೌಲ್ಯಯುತ ದಾರಿ ನೆಡೆದರೇ  ಅದುವೇ ಯಶಸ್ವಿನ ಗುಟ್ಟು ಇದಕ್ಕೆ ನಿದರ್ಶನವೆಂಬತೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ  ಹಳ್ಳಿಕೇರಿಮಠ ದಂಪತಿಗಳು  ಸಾಕ್ಷಿಯಾಗಿದ್ಧಾರೆ.

ಕೊರೋನ ಸಂದಿಗ್ಧ ಸ್ಥಿತಿಯಲ್ಲಿ ಜನರನ್ನು ಗುಂಪುಗಾರಿಕೆಯಿಂದ ದೂರ ಮಾಡಿ ಆರೋಗ್ಯಕ್ಕಾಗಿ ಬದುಕಲು ತಮ್ಮ ಸರಳ ವಿವಾಹದ ಮೂಲಕ ನಾಡಿನ  ಪ್ರೀತಿಗೆ ಪಾತ್ರರಾದ ಹಳ್ಳಿಕೇರಿಮಠ ದಂಪತಿಗಳು ಮುಂದೆಯೂ ತಮ್ಮ ಜೀವನವನ್ನು ಸಮಾಜದ ಹಿತಕ್ಕಾಗಿ ಮುಡುಪಾಗಿಡಲು ಇಂದಿಗೂ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಮುಂದಾಗಿ ನಾಡ ರಕ್ಷಣೆಯಲ್ಲಿ  ತೊಡಗಿಸಿಕೊಂಡಿದ್ಧಾರೆ.

ಹೌದು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪದ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಶ್ರೀ ಗವಿಶಿದ್ಧಯ್ಯ ಧರ್ಮಪತ್ನಿ  ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದಿರುವ ಚುಟುಕು ಕವಯಿತ್ರಿ ಭಾಗ್ಯ ಶ್ರೀ ಇರ್ವರ ಜೋಡಿ ಸಾಹಿತ್ಯ ಸಂಗೀತದ ಸಂಗಮ.

ಕೊರೋನ ಸಮಯದಲ್ಲಿ ಕವಿತೆ ರಚನೆ,ಹಾಡುಗಳ ಮೂಲಕ ಜನರಿಗ ಆತ್ಮಸ್ಥರ್ಯ ತುಂಬಿದ ಇವರು ಸ್ವತಃ ಕ್ವಾರೆಂಟೈನ್ ಕೇಂದ್ರಗಳಿಗೆ ಬೇಟಿ ನೀಡಿ ಸಾಂತ್ವನ ಹೇಳಿ  ಮೂಲಭೂತ ಸೌಲಭ್ಯಗಳನ್ನು ಒದಗಿಸಿ ನಗಿಸಿ ಮಾನವೀಯತೆ ಮೆರದಿದ್ಧು ಎಲ್ಲರ ಗಮನಸೆಳೆಯಿತು.

ಜಗತ್ತು ಸಂಕಷ್ಟಕ್ಕೆ ಸಿಲುಕಿದಾಗ ಅಂದಿನ ದಿನಮಾನದಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಆರೋಗ್ಯ ಸ್ವಾಸ್ಥ್ಯ ಸಂಕಲ್ಪಕ್ಕೆ  ಕರೆ ನೀಡಿದರಲ್ಲದೇ ಪ್ರಾಣವನ್ನು ಲೆಕ್ಕಿಸದೇ ಸಮಾಜದ ಪ್ರಗತಿಗಾಗಿ ಶ್ರಮಿಸಿದರು.

ದಾನಗಳಲ್ಲಿ ಶ್ರೇಷ್ಠವಾದ ದಾನ ನೇತ್ರದಾನ ಎಷ್ಟೋ ಮಂದಿಗೆ ಇಲ್ಲಿ ಕಣ್ಗಳು ಇರುವದಿಲ್ಲಾ ಮರಣಾನಂತರ ನಾವು ಜಗತ್ತನ್ನು ನೋಡಬಹುದು ಅಲ್ಲದೇ ಶಾಸ್ವತವಲ್ಲದ ಇ ಜೀವನ ಏನನ್ನು ಒಯ್ಯಲಾರದೆಂಬ ಸತ್ಯವನರಿತ ದಂಪತಿಗಳು ಮದುವೆಯಾದ ಮೊದಲನೇ ವರ್ಷವೇ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಗದಗ ಲಯನ್ಸ ಕ್ಲಬ್ ಎಸ್ ಜಿ ಎಂ ನೇತ್ರಬಂಡಾರ ಸಂಶೋಧನ ಪ್ರತಿಷ್ಠಾನ  ಟ್ರಸ್ಟ್ ಗದಗ ಅಯ್ ಎಮ್ ಎ ಆಶ್ರಯದೊಂದಿಗೆ   ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ  ಜಯಂತ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ಧ   ನೇತ್ರದಾನ ಶಿಬಿರದಲ್ಲಿ ಪೀಠಾಧಿಪತಿಗಳಾದ ಪರಮ ಪೂಜ್ಯ ಕಲ್ಲಯಜ್ಜನವರ ಸಾನಿಧ್ಯದಲ್ಲಿ ನೇತ್ರದಾನದ ವಾಗ್ಧಾನ ಮಾಡಿ ಮರಣಾನಂತರ ತಮ್ಮ ಕಣ್ಗಳನ್ನು ನೀಡಲು ಒಪ್ಪಿಕೊಂಡಿದ್ಧು  ಮೆಚ್ಚುಗಿಗೆ ಪಾತ್ರವಾಯಿತು.

ನಾಡು ನುಡಿಗಾಗಿ  ನಿರಂತರ ದುಡಿಯುತ್ತಿರುವ ದಂಪತಿಗಳು ಕಲೆ,ಕ್ರೀಡೆ  ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಸಮಾಜಮುಖಿ ಸೇವೆಗಾಗಿ ಶ್ರೀ ಗವಿಶಿದ್ಧಯ್ಯ ಜನಪದ ಕಲಾ ತಂಡ,ಹಾಗೂ ಭಾಗ್ಯಶ್ರೀ ವಿವಿಧ್ಧೋಶಗಳ ಸೇವಾ ಸಂಘ ಇತರೆ ಸಮಿತಿಗಳನ್ನು ತೆರೆದು ಅಲ್ಪ ಅವಧಿಯಲ್ಲೆ ಅನೇಕ ಸಂಘ ಸಂಸ್ಥೆಗಳೋಂದಿಗೆ ಬೆರೆತುಕೊಂಡು ಕಾರ್ಯ ಮಾಡಿದ್ಧರಲ್ಲದೇ ಅನೇಕ ವೇದಿಕೆಗಳಲ್ಲಿ ದಂಪತಿಗಳು ಅಧ್ಯಕ್ಷರಾಗಿ, ಕಾರ್ಯದರ್ಶಿಗಳಾಗಿ ಸಾಮಾನ್ಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ಧಾರೆ.

ದಂಪತಿಗಳ ಸಮಾಜಮುಖಿ ಸೇವೆಯನ್ನು ಪರಿಗಣಿಸಿ ನಾಡಿನ ಅನೇಕ ಸಂಘ ಸಂಸ್ಥೆಗಳು ಕನ್ನಡ ಭೂಷನ,ನಮ್ಮ ಸ್ಟಾರ್ಸ್ ,ಸ್ಟಾರ್ ಜೋಡಿ ಆದರ್ಶ ದಂಪತಿಗಳು ಪ್ರಶಸ್ತಿಗಳನ್ನು ನೀಡಿದಲ್ಲದೇ ಹಲುವಾರು ಮಠ ಮಾನ್ಯಗಳು ,ಶಿಕ್ಷಣ ಸಂಸ್ಥೆಗಳು ವಿಶಿಷ್ಟ ಕಾರ್ಯಕ್ರಮಗಳಿಗೆ ಆಮಂತ್ರಿಸಿ ಗೌರವ ಸನ್ಮಾನ ನೀಡಿವೆ.

ಕೃಷಿ ಕಾರ್ಯದೊಂದಿಗೆ ನಾಡು ನುಡಿ ಸೇವೆ ಮಾಡುತ್ತಿರುವ ಹಳ್ಳಿಕೇರಿಮಠ ದಂಪತಿಗಳು ಗುರುತರವಾದ ಸಾಧನೆ ಮಾಡುವದರೊಂದಿಗೆ ಆದರ್ಶರಾಗಿದ್ಧಾರೆ ದಂಪತಿಗಳ ಸಮಾಜಿಕ ಕಳಕಳಿಯ ಕಾರ್ಯಗಳು ಹೀಗೆ ನಿರಂತರವಾಗಿ ಸಾಗಲಿ

 

Leave A Reply

Your email address will not be published.