deshadoothanews

ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅವರಿಗೆ ಶ್ರೀ ಪುಟ್ಟರಾಜ ಗವಾಯಿ ಸೇವಾ ರತ್ನ ಪ್ರಶಸ್ತಿ ಪ್ರದಾನ

ಡಿ ಡಿ ನ್ಯೂಸ್. ಗದಗ

0

ಡಿ ಡಿ ನ್ಯೂಸ್. ಗದಗ :

ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಾಧಕರ ಮಾತಾ ಪ್ರಕಾಶನ ಕಡಲಬಾಳು (ರಿ)ಕರ್ನಾಟಕ ಹಾಗೂ ದೀ ಜರ್ನಿ ಆಪ್ ಸೂಸೈಟಿ(ರಿ)ನವದೇಹಲಿ ಇವರು ಕೊಡಮಾಡುವ 2023ನೇ ಸಾಲಿನ ಶ್ರೀ ಪುಟ್ಟರಾಜ ಗವಾಯಿ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಧಾರವಾಡದ ರಂಗಾಯಣದಲ್ಲಿ ಜರುಗಿದ ರಾಷ್ಟ್ರೀಯ ಕಲಾ ಸಮ್ಮೇಳನದಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಜನಪದ ಕಲಾವಿದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅವರಿಗೆ ಪ್ರದಾನ ಮಾಡಲಾಯಿತು.

ಇ ಸಂದರ್ಭದಲ್ಲಿ ಎಸ್ ಸಿ ಎಸ್ ಟಿ ಸೇಲ್ ವಿಶ್ವ ಮಾನವ ಹಕ್ಕುಗಳ ಆಯೋಗ ನವದೇಹಲಿ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಪಡದಯ್ಯ ರೇ.ಹೀರೆಮಠ ,ಸುಜ್ಞಾನ ವಿದ್ಯಾಪೀಠದ ಡಾ.ನಾಗರಾಜ ತಂಭ್ರಳ್ಳಿ,
ಬೆಂಗಳೂರು ವಿಶ್ವವಿದ್ಯಾಲಯದ ಪ್ರೋ. ರಾಮಕೃಷ್ಣ ,ಶಾಲಾ ಮತ್ತು ಸಾಕ್ಷರತ ಇಲಾಖೆಯ ಶ್ರೀ ಎಸ್ ಎಸ್ ಕೆಳದಿಮಠ,ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಉಮೇಶ ಬೊಮ್ಮಕ್ಕನ್ನವರ್ ಸೇರಿದಂತೆ ಕವಿಗಳು ಕಲಾವಿದರು ಪಾಲ್ಗೊಂಡಿದ್ದರು.

Leave A Reply

Your email address will not be published.