ಡಿ ಡಿ ನ್ಯೂಸ್. ಗದಗ
ಜಿಲ್ಲೆ ನರಗುಂದ ಮತಕ್ಷೇತ್ರದಲ್ಲಿ ಸಚಿವ ಸಿ.ಸಿ ಪಾಟೀಲ ಭರ್ಜರಿ ಕ್ಯಾಂಪೇನ್ ಮಾಡಿದರು. ಕ್ಷೇತ್ರದ ದುಂದೂರು, ಶ್ಯಾಗೋಟಿ ಹಾಗೂ ಚಿಕ್ಕ ಹಂದಿಗೋಳ ಗ್ರಾಮದಲ್ಲಿ ಪ್ರಚಾರಮಾಡಿದರು. ಚಿಕ್ಕಹಂದಿಗೋಳ ಗ್ರಾಮದಲ್ಲಿ ತೆರೆದ ವಾಹನದಲ್ಲಿ ಸಚಿವ ಸಿಸಿ ಪಾಟೀಲ ರೋಡ್ ಶೋ ಮಾಡಿದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಕ್ಯಾಂಪೇನ್ ನಡೆಸಿದರು. ಮಾರ್ಗದುದ್ದಕ್ಕೂ ನೆರೆದ ಕಾರ್ಯಕರ್ತರ, ಗ್ರಾಮಸ್ಥರು ಜೈಘೋಷದೊಂದಿಗೆ ಹೂವಿನ ಸುರಿಮಳೆ ಗೈದರು. ಜನರತ್ತ ಕೈ ಬೀಸುತ್ತಾ, ರೋಡ್ ಶೋ ಮಧ್ಯೆ ಮನೆ ಮನೆ ತೆರಳಿ ಕತಪತ್ರ ಹಂಚಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಮೂಲಕ ಅಬ್ಬರದ ಪ್ರಚಾರಕ್ಕೆ ಮುಂದಾದರು.
ಪ್ರಧಾನಿಗಳ ರೋಡ್ ಶೋ, ಸಾರ್ವಜನಿಕ ಸಭೆಗಳ ಬಗ್ಗೆ ಕುಮಾರಸ್ವಾಮಿ ಲೇವಡಿ ಮಾಡಿದ್ದು ಸರಿಯಲ್ಲ ಅಂತ ಸಚಿವ ಸಿ.ಸಿ ಪಾಟೀಲ ಮಾತಿನ ತಿರುಗೇಟು ನೀಡಿದ್ದಾರೆ. ಗದಗ ಜಿಲ್ಲೆ ನರಗುಂದ ಮತ ಕ್ಷೇತ್ರದ ಶ್ಯಾಗೋಟಿ ಗ್ರಾಮದ ಪ್ರಚಾರ ವೇಳೆ ಮಾತನಾಡಿದರು. ಕುಮಾರಸ್ವಾಮಿ ಯಾವುದಕ್ಕೆ ಗುದ್ದಾಡುತ್ತಿದ್ದಾರೆ ಅಂತ ಗೊತ್ತಿದೆ. ಕರ್ನಾಟಕ ವಿಧಾನಸಭಾ ಅತಂತ್ರ ಆಗಲಿ ಅಂತ ಕಾಯುತ್ತಿದ್ದಾರೆ. ಇದನ್ನು ಬಿಟ್ಟರೆ ಕುಮಾರಸ್ವಾಮಿ ಉದ್ದೇಶ ಬೇರೆ ಏನಿಲ್ಲ ಅಂತ ಮಾತಿನಿಂದ ತಿವಿದರು. ಮೋದಿ ಅವರ ರೋಡ್ ಶೋಗೆ ಎಷ್ಟು ಜನರು ಸೇರುತ್ತಾರೆ. ಇವರ ರೋಡ್ ಶೋ ಗೆ ಎಷ್ಟು ಜನ ಸೇರ್ತಾರೆ. ಮೋದಿ ಅವರ ಜನ ಬೆಂಬಲ ಏನು ಅಂತ ಮೇ 13 ಕ್ಕೆ ಗೊತ್ತಾಗಲಿದೆ ಎಂದರು. ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತ ಅಥವಾ ಲಿಂಗಾಯತ ಸಿ ಎಂ ಬಗ್ಗೆ ಚುನಾಯಿತ ಪ್ರತಿನಿಧಿಗಳು ಹೈಕಮಾಂಡ್ ಚರ್ಚೆ ಮಾಡುತ್ತೇವೆ ಎಂಬ ಹೇಳಿಕೆ ಕುರಿತು ವ್ಯಂಗ್ಯ ವಾಡಿದರು. ಒಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಆಸೆಗೆ ತಲೆ ಮೇಲೆ ಖರ್ಗೆ ಅವರು ತಣ್ಣೀರು ಪಟ್ಟಿ ಹಾಕಿದ್ದಾರೆ. 2023 ಮೇ 13 ಕ್ಕೆ ಚುನಾವಣೆ ಫಲಿತಾಂಶ ಬಂದ ಮೇಲೆ ಮಲ್ಲಿಕಾರ್ಜುನ ಖರ್ಗೆ ಅವರೂ ಸಹ ತಣ್ಣೀರು ಪಟ್ಟಿ ಹಾಕಿಕೊಂಡು ಮಲಗುತ್ತಾರೆ. ಮೇ 20 ರ ಒಳಗೆ ಬಿಜೆಪಿ ಹೊಸ ಸರ್ಕಾರ ರಚನೆ ಮಾಡುತ್ತೇವೆ ಎಂದರು. ಯಾರ ಹಣೆಯ ಬರಹ ಇದೆ ಅವರು ಬಿಜೆಪಿನಲ್ಲಿ ಸಿಎಂ ಆಗುತ್ತಾರೆ. ಪಕ್ಷದ ಹೈಕಮಾಂಡ್ ಯಾರು ಅಂತ ತೀರ್ಮಾನ ಮಾಡುತ್ತಾರೆ. ನಾವು ಹೈಕಮಾಂಡ್ ಹಾಕಿದ ಲಕ್ಷ್ಮಣ ರೇಖೆ ದಾಟುವುದಿಲ್ಲ ಅಂತ ಸಚಿವ ಸಿ.ಸಿ ಪಾಟೀಲ ಹೇಳಿದರು.