deshadoothanews

ಶಾಲಾ-ಕಾಲೇಜಿಗೆ ತೆರಳಲು ಬಸ್ ಗಾಗಿ ಕಾದು ಕಾದು ಸುಸ್ತಾದ ವಿದ್ಯಾರ್ಥಿಗಳು.

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್.

ಕೊಪ್ಪಳ: ಎಂದಿನಂತೆ ಶಾಲಾ-ಕಾಲೇಜಿಗೆ ತೆರಳು ಬಸ್ ನಿಲ್ದಾಣಕ್ಕೆ ಆಗಮಿಸಿದರು ಸಹ ನಿಗದಿತ ಸಮಯಕ್ಕೆ ಶಾಲಾ-ಕಾಲೇಜಿಗೆ ತೆರಳದೇ ವಿದ್ಯಾರ್ಥಿಗಳು ಬಸ್ ಗಾಗಿ ಕಾದು ಕಾದು ಸುಸ್ತಾಗಿರುವ ದೃಶ್ಯ ಕಂಡಬಂದವು.

ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಕ್ರಾಸ್ ನಲ್ಲಿ ಸೋಮವಾರ ವಿದ್ಯಾರ್ಥಿಗಳು ಬಸ್ ಗಾಗಿ ಬೆಳಗ್ಗೆಯಿಂದ 7 ರಿಂದ 11 ಗಂಟೆಯವರೆಗೂ ಬಸ್ ಗಾಗಿ ಕಾಯುತ್ತಿದ್ದರು. ವಣಗೇರಿ, ಹುಣಸಿಹಾಳ, ಕೋಳಿಹಾಳ, ಲಕಮನಗುಳೆ ಸೇರಿದಂತೆ ಇನ್ನಿತರ ಗ್ರಾಮಗಳಿಂದ ಬೇವೂರು ಕ್ರಾಸ್ ಗೆ ಆಗಮಿಸಿ, ಕುಷ್ಟಗಿ ಹಾಗೂ ಕೊಪ್ಪಳ ನಗರ ಪ್ರದೇಶಗಳಲ್ಲಿನ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು ನಿತ್ಯವು ತೆರಳುತ್ತಾರೆ.

ಆದರೆ, ರಾಜ್ಯದಲ್ಲಿ ನಿನ್ನೆಯಿಂದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಪ್ರಾರಂಭಿಸಲಾಯಿತು. ಇದರಿಂದಾಗಿ ಕೊಪ್ಪಳ ಮತ್ತು ಕುಷ್ಟಗಿ ಯಿಂದ ಆಗಮಿಸುವ ಎಲ್ಲಾ ಬಸ್ ಗಳಲ್ಲಿ ಕಿಕ್ಕಿರಿದು ಜನ ತುಂಬಿಕೊಂಡಿದ್ದಾರೆ. ಬೇವೂರು ಕ್ರಾಸ್ ನಲ್ಲಿ ಇಳಿಯುವವರಿಗಾಗಿ ಮಾತ್ರ ಬಸ್ ನಿಲುಗಡೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಬಸ್ ನಲ್ಲಿ ಹತ್ತಲು ಸ್ಥಳಾವಕಾಶವಿಲ್ಲದೇ ಖಾಸಗಿ ವಾಹನಗಳಾದ ಆಟೋ, ಟಂಟಂ ಸೇರಿದಂತೆ ಇನ್ನಿತರ ವಾಹನಗಳಲ್ಲಿ ಶಾಲಾ-ಕಾಲೇಜುಗಳಿಗೆ ತೆರಳಿತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬಂದವು.

ಶಕ್ತಿ ಯೋಜನೆ ಪ್ರಾರಂಭಕ್ಕೂ ಮುನ್ನ ಶಾಲಾ-ಕಾಲೇಜುಗಳಿಗೆ ತೆರಳು ವಿದ್ಯಾರ್ಥಿನಿಯರು ಸೇರಿದಂತೆ ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸಿಕೊಂಡಿದ್ದಾರೆ. ಸರ್ಕಾರಿ ಬಸ್ ಗಳಲ್ಲಿ ತೆರಳು ವಿದ್ಯಾರ್ಥಿಗಳಿಗೆ ಅವಕಾಶವಿದ್ದರು ಸಹ ಶಕ್ತಿ ಯೋಜನೆ ಪ್ರಾರಂಭಸಿದ ಹಿನ್ನೆಲೆಯಲ್ಲಿ ಬಸ್ ತುಂಬೆಲ್ಲ ಜನವೋ ಜನ. ಇದರಿಂದಾಗಿ ವಾಹನ ಚಾಲಕ ಮತ್ತು ನಿರ್ವಾಹಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಅಲ್ಲದೇ ನಿಗದಿತ ಅವಧಿಯೊಳಗೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳು ಹರ ಸಾಹಸ ಪಡುತ್ತಿರುವುದನ್ನು ಕಂಡು ಮಮ್ಮಲ ಮರಗುವಂತಾಗಿದೆ.

ಕೋಟ್-1

ಶಾಲಾ-ಕಾಲೇಜಿಗೆ ತೆರಳಲು ಬೆಳಗ್ಗೆ ಯಿಂದ ಬಂದು ಬಸ್ ಗಾಗಿ ಕಾಯುತ್ತಾ ಇದ್ದೇವೆ. ಕುಷ್ಟಗಿಯಿಂದ ಬರುವ ಎಲ್ಲಾ ಬಸ್ ಗಳಲ್ಲಿ ಜನ ತುಂಬಿಕೊಂಡು ಬರುತ್ತಿವೆ. ನಮಗೆ ಬಸ್ ನಲ್ಲಿ ಹೋಗಲು ಜಾಗವಿಲ್ಲದೇ ಬೆಳಗ್ಗೆಯಿಂದ ಬೇವೂರು ಕ್ರಾಸ್ ನಲ್ಲಿ ಕಾಯುತ್ತಾ ಇದ್ದೇವೆ. | ಸಾವಿತ್ರಿ, ಮಲ್ಲಮ್ಮ, ಗಿರಿಜಾ, ಅಶ್ವಿನಿ, ಹುಣಸಿಹಾಳ ಗ್ರಾಮದ ವಿದ್ಯಾರ್ಥಿನಿಯರು.

ಕೋಟ್-2

ನಿತ್ಯ ಇದೇ ಬಸ್ ನಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಹಲವು ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಬರುತ್ತಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಸ್ ನಲ್ಲಿ ಪ್ರಯಾಣಿಸುತ್ತಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ನಲ್ಲಿ ಹತ್ತಲು ಅವಕಾಶವಿಲ್ಲದಂತಾಗಿದೆ. | ಹೆಸರು ಹೇಳಲಿಚ್ಛೆಯಿಸಿದ ಚಾಲಕ ಹಾಗೂ ನಿರ್ವಾಹಕ.

Leave A Reply

Your email address will not be published.