deshadoothanews

ಸಾಹಿತಿ , ಕನ್ನಡಪರ ಚಿಂತಕ ಡಾ.ಭೇರ್ಯ ರಾಮಕುಮಾರ್ ಅವರಿಗೆ ಸುವರ್ಣ ಮಹೋತ್ಸವ ಪುರಸ್ಕಾರ

0

ಡಿ.ಡಿ.ನ್ಯೂಸ್. ಮೈಸೂರಿನ

ಮೈಸೂರಿನ ಹಿರಿಯ ಸಾಹಿತಿ , ಪತ್ರಕರ್ತ, ಕನ್ನಡಪರ ಚಿಂತಕ ಹಾಗೂ ಪರಿಸರ ಪ್ರೇಮಿ ಡಾ.ಭೇರ್ಯ ರಾಮಕುಮಾರ್ ಅವರು ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆಯು ನೀಡುವ ಸುವರ್ಣ ಮಹೋತ್ಸವ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆ.

ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ಅಧ್ಯಕ್ಷರಾಗಿ 354 ಸಾಹಿತ್ಯ ಕಾರ್ಯಕ್ರಮಗಳ ಸಂಘಟನೆ , ಉದಯೋನ್ಮುಖ ಬರಹಗಾರರ 303 ಸಾಹಿತ್ಯ ಕೃತಿಗಳ ಪ್ರಕಟಣೆ, ಸಾಮೂಹಿಕ ನೇತ್ರದಾನ ಕಾರ್ಯಕ್ರಮದ ಮೂಲಕ ನೇತ್ರದಾನ ಮಾಡಲು ಎಂಟು ಸಾವಿರಕ್ಕೂ ಹೆಚ್ಚು ಜನರ ಮನ ಒಲಿಸುವಿಕೆ , ಐದು ನೂರಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ಹಾಗೂ ಹತ್ತು ಸಾವಿರಕ್ಕೂ ಹೆಚ್ಚು ಸಸಿಗಳ ಉಚಿತ ವಿತರಣೆ …ಈ ಸಾಧನೆಗಳನ್ನು ಪರಿಗಣಿಸಿ ಸುವರ್ಣ ಮಹೋತ್ಸವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ಕನ್ನಡ ಭಾಷೆ ಬಳಸದ ಐದು ನೂರಕ್ಕೂ ಹೆಚ್ಚು ಅನ್ಯ ಭಾಷಾ ಫಲಕಗಳ ಬಗ್ಗೆ ದೂರು ಸಲ್ಲಿಕೆ, ಕನ್ನಡ ಭಾಷೆ ಬಳಸದ ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ದೂರು , ಐದು ನೂರಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಕನ್ನಡ ನಾಡು – ನುಡಿಯ ಮಹತ್ವ ಕುರಿತು ಉಪನ್ಯಾಸ ,ಆಯ್ದ ಶಾಲಾ ಕಾಲೇಜುಗಳಿಗೆ ಜ್ಞಾನ ಪೀಠ ಪ್ರಶಸ್ತಿ ವಿಜೇತ ಕನ್ನಡ ಭಾವ ಚಿತ್ರಗಳ ನೀಡಿಕೆ ಮಾಡುವ ಮೂಲಕ ಸಾಹಿತಿ ಭೇರ್ಯ ರಾಮಕುಮಾರ್ ಸುವರ್ಣ ಕರ್ನಾಟಕಕ್ಕೆ ತಮ್ಮದೇ ಅದ ಮಹತ್ವದ ಕೊಡುಗೆ ನೀಡಿದ್ದಾರೆ.ಈ ಕೊಡುಗೆಗಳನ್ನು ಪರಿಗಣಿಸಿ ಭೇರ್ಯ ರಾಮಕುಮಾರ್ ಅವರನ್ನು ಸುವರ್ಣ ಮಹೋತ್ಸವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಕಸ್ತೂರಿ ಸಿರಿಗನ್ನಡ ವೇದಿಕೆಯ ಪ್ರಕಟಣೆ ತಿಳಿಸಿದೆ.

 

ಮುಂಬರುವ ನವಂಬರ್ 17 ರಂದು ನಡೆಯುವ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ಪ್ರದಾನ ಮಾಡಲಾಗುವುದು.

Leave A Reply

Your email address will not be published.