Deshadootha Kannada Daily Newspaper | ದೇಶದೂತ ಕನ್ನಡ ದಿನಪತ್ರಿಕೆ | ಕೊಪ್ಪಳ ಜಿಲ್ಲೆ ದಿನಪತ್ರಿಕೆ ಸುದ್ದಿ | Latest koppal News

ಪಿಯುಸಿ ಮೊರಾರ್ಜಿ ದೇಸಾಯಿ ಉತ್ತಮ ಫಲಿತಾಂಶ

ಡಿ ಡಿ ನ್ಯೂಸ್

ಕುಕನೂರು

ಪಟ್ಟಣದ ಸರಕಾರಿ ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿಭಾಗದಲ್ಲಿ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

೧ ಶಿಲ್ಪಾ ವಡಗೇರಿ

೨ ಕಳಕಮ್ಮ

೩ ಶಕೀಲಾಬಾನು

ವಿಜ್ಞಾನ ವಿಭಾಗದಲ್ಲಿ ಶಿಲ್ಪಾ ವಡಗೇರಿ ೬೦೦ಕ್ಕೆ ೫೪೬(೯೧%) ಅಂಕಪಡೆದು ಪ್ರಥಮ, ಸಮ್ರೀನ್ ರಾಟೆ ೫೨೭(೮೮%), ದ್ವೀತಿಯ, ಸವಿತಾ ಮೆಣಸಗೇರಿ ೫೧೯(೮೬%) ತೃತಿಯಾ ಅಂಕಗಳನ್ನು ಪಡೆದಿದ್ದಾರೆ. ಪರೀಕ್ಷೆಗೆ ೪೯ ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ ೪೫ ವಿದ್ಯಾರ್ಥಿಗಳು ಉತ್ತರ್ಣಿರಾಗಿ ಕಾಲೇಜಿನ ಒಟ್ಟು ೯೨ % ಫಲಿತಾಂಶ ಬಂದಿದೆ.

ವಾಣಿಜ್ಯ ವಿಭಾಗ: ಕಳಕಮ್ಮ ಮತ್ತು ಶಕೀಲಾಬಾನು ೫೫೫ (೯೨%) ಅಂಕ ಪಡೆದಿದ್ದಾರೆ. ಫರೀದಾ ೫೫೧ (೯೧%) ಪ್ರಥಮ, ಫರೀದಾ ೫೫೧(೯೨%) ದ್ವೀತಿಯ ಹಾಗೂ ರಂಜಿತಾ ೫೪೭ (೯೧ %) ಅಂಕಪಡೆದಿದ್ದಾರೆ. ೩೫ ವಿದ್ಯಾರ್ಥಿಗಳಲ್ಲಿ ೩೪ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇಗರ್ಡೆ ಹೊಂದಿದ್ದಾರೆ ೯೭ % ರಷ್ಟು ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ ಗಾದಾರಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.