deshadoothanews

ಪಿ.ಬಿ.ಧುತ್ತರಗಿ ಹಾಗೂ ಸರೋಜಮ್ಮ ಧುತ್ತರಗಿ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಹನುಮಸಾಗರ:

ನಿಸರ್ಗ ಸಂಗೀತ ವಿದ್ಯಾಲಯ ಹಾಗೂ ರಂಗ ಕಲಾವಿದರ ಸಂಘದ ಆಶ್ರಯದಲ್ಲಿ:

ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕøತರಾದ ಪಿ.ಬಿ.ಧುತ್ತರಗಿ ಹಾಗೂ ರಂಗ ಕಲಾವಿದೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಸರೋಜಮ್ಮ ಧುತ್ತರಗಿ ಅವರ ಸ್ಮರಣಾರ್ಥವಾಗಿ ಇಲ್ಲಿನ ನಿಸರ್ಗ ಸಂಗೀತ ವಿದ್ಯಾಲಯ ಹಾಗೂ ರಂಗ ಕಲಾವಿದರ ಸಂಘದ ಆಶ್ರಯದಲ್ಲಿ ಆ.20 ರಂದು ಹನುಮಸಾಗರದ ಕರಿಸಿದ್ದೇಶ್ವರ ಬಸವ ಮಂಟಪದಲ್ಲಿ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಲ್ಲಯ್ಯ ಕೋಮಾರಿ ಹಾಗೂ ಕಾರ್ಯದರ್ಶಿ ಶ್ರೀದೇವಿ ಕೋಮಾರಿ ತಿಳಿಸಿದ್ದಾರೆ.

ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ 185 ಸಾಧಕರನ್ನು ಗುರುತಿಸಿ ಅವರಿಗೆ ರಾಜ್ಯಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ, ನೃತ್ಯ ಕಲಾವಿದರಾದ ನಿಸರ್ಗ ಹಾಗೂ ಅವನಿಯವರಿಂದ ಭರತನಾಟ್ಯ, ಸುಗಮ ಸಂಗೀತ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಇಡೀ ದಿನ ನಡೆಯಲಿವೆ.

ಮೂರು ದಶಕಗಳಿಂದ ನಿಸರ್ಗ ಸಂಗೀತ ವಿದ್ಯಾಲಯ ಹಾಗೂ ರಂಗ ಕಲಾವಿದರ ಸಂಘ ಯಾವುದೇ ಫಲಾಪೇಕ್ಷೆ ಇಲ್ಲದ ಸಂಗೀತ ಹಾಗೂ ರಂಗ ಕ್ಷೇತ್ರದ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿದೆ, ಈ ಸಂಗೀತ ಶಾಲೆಯಲ್ಲಿ ಉಚಿತ ಅಭ್ಯಾಸ ಮಾಡಿದ ಅನೇಕ ಕಲಾವಿದರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಬೆಳಕು ಕಂಡಿರುವುದು ಕಂಡು ಬರುತ್ತಿದೆ. ಜನಮಾನಸದಿಂದ ಮರೆಯಾಗುತ್ತಿರುವ ರಂಗ ಕ್ಷೇತ್ರಕ್ಕೆ ಜೀವಂತಿಕೆ ತುಂಬಿ ಪ್ರತಿವರ್ಷ ಪ್ರೇಕ್ಷಕರಿಗೆ ಉಚಿತ ಸರಣಿ ನಾಟಕಗಳ ಪ್ರದರ್ಶನ ನಡೆಸುತ್ತಾ ಬಂದಿರುವ ಕಾರಣ ಈ ಭಾಗದಲ್ಲಿ ರಂಗ ಕಲಾವಿದರು ಹಾಗೂ ರಂಗ ಅಪೇಕ್ಷಿತರ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

250 ವಾರದ ಸಂಗೀತ ಕಾರ್ಯಕ್ರಮದ ಮೂಲಕ ಎಲೆಮರೆಕಾಯಿಯಂತಿದ್ದ ರಾಜ್ಯದ ವಿವಿಧ ಭಾಗಗಳ ಸಂಗೀತ ಕಲಾವಿದರನ್ನು ಕರೆಯಿಸಿ ಅವರಿಗೆ ವೇದಿಕೆ ನೀಡುವ ಮೂಲಕ, ಅವರ ಆರ್ಥಿಕ ಬದುಕಿಗೂ ನೆರವಾಗಿರುವುದು ಸಂಘದ ಸಾಧನೆಯಾಗಿದೆ ಎಂದು ಅಧ್ಯಕ್ಷ ಮಲ್ಲಯ್ಯ ಕೋಮಾರಿ ಅಭಿಮಾನದಿಂದ ಹೇಳುತ್ತಾರೆ.

ಸಂಸ್ಥೆಯ ರಂಗ ಕಲಾವಿದರ ಮೂಲಕ ಆರ್ಥಿಕ ನಷ್ಟ ಅನುಭವಿಸುತ್ತಿರುವ ವಿವಿಧ ನಾಟಕ ಕಂಪನಿಗಳಲ್ಲಿ ಅಭಿನಯಿಸುವುದು ಸೇರಿದಂತೆ ವಿವಿಧ ಕಲಾವಿದರ ಹಾಗೂ ಕಲಾ ಸಂಸ್ಥೆಗಳ ಬದುಕಿಗೆ ನೆರವಾಗಿರುವುದು ಅಭಿಮಾನ ಮೂಡಿಸುತ್ತದೆ ಎಂದು ಗದಗ ಪುಟ್ಟರಾಜ ಗಮಾಯಿಗಳ ಕಂಪನಿಯಲ್ಲಿ ಅಭಿನಯಿಸುತ್ತಿರುವ ಕಲಾವಿದ ಮಹಾಂತಯ್ಯ ಶಶಿಮಠ
ಹೇಳುತ್ತಾರೆ.

ಧುತ್ತರಗಿ ದಂಪತಿಗಳು ವೃತ್ತಿ ರಂಗಭೂಮಿಯಲ್ಲಿ ಮೆರೆದು, ಕಟ್ಟಿ ಬೆಳೆಸಿದ ಈ ಸಂಸ್ಥೆಯನ್ನು ಬೆಳೆಸಿಕೊಂಡು ಹೋಗುವುದರ ಜೊತೆಗೆ ಅವರ ಉದ್ದೇಶಗಳನ್ನು ಫಲಪ್ರದಗೊಳಿಸುವ ಮುಖ್ಯ ಗುರಿ ನಾವು ಹೊಂದಿದ್ದೇವೆ.
– ಮಲ್ಲಯ್ಯ ಕೋಮಾರಿ, ಅಧ್ಯಕ್ಷರು, ನಿಸರ್ಗ ಸಂಗೀತ ವಿದ್ಯಾಲಯ ಹಾಗೂ ರಂಗ ಕಲಾವಿದರ ಸಂಘ, ಹನುಮಸಾಗರ

ಗ್ರಾಮ ಪಂಚಾಯಿತಿಯವರು ನಿಸರ್ಗ ಸಂಗೀತ ಶಾಲೆಗೆ ರಂಗಭೂಮಿ ನಿರ್ಮಾಣಕ್ಕೆ ಎರಡು ನಿವೇಶನಗಳನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಧುತ್ತರಗಿ ದಂಪತಿಗಳ ಹೆಸರಿನಲ್ಲಿ ರಂಗ ವೇದಿಕೆ ನಿರ್ಮಾಣವಾಗಿ ಕಲಾವಿದರಿಗೆ ತರಬೇತಿ ನೀಡಲು ಅನುಕೂಲವಾಗುತ್ತದೆ.

– ಶ್ರೀದೇವಿ ಕೋಮಾರಿ, ಕಾರ್ಯದರ್ಶಿಗಳು

Leave A Reply

Your email address will not be published.