deshadoothanews

ಅದ್ದೂರಿಯಾಗಿ ನಡೆದ ಸಾಮ್ರಾಜ್ಯ ಪತ್ರಿಕೆಯ ಪ್ರಥಮ ವಾರ್ಷಿಕೋತ್ಸವ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕೊಪ್ಪಳ :

ಕೊಪ್ಪಳ ಕನಸು ಪತ್ರಿಕೆ ವತಿಯಿಂದ ಆಯೋಜಿಸಿದ ನಗರದ ಶೋಬಾ’ಸ್ ರೆಸ್ಟೋರೆಂಟ್ ನಲ್ಲಿ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿಯ ಯುವ ಮಹಿಳಾ ಮುಖಂಡರಾದ ಶ್ರೀಮತಿ ಮಂಜುಳಾ ಅಮರೇಶ ಕರಡಿ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಪ್ಪಳದ ಹಿರಿಯ ಸಾಹಿತಿಗಳು ಹಾಗೂ ದಿಟ್ಟ ಪತ್ರಕರ್ತೆ ಆಗಿರುವ ಶ್ರೀಮತಿ ಸಾವಿತ್ರಿ ಮುಜುಂದಾರ ವಯಿಸಿದ್ದರು. ಕಾರ್ಯಕ್ರಮದಲ್ಲಿ ವಿಶೇಷ ಅನಿಸಿದ್ದು ಸೇನೆಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡು ತಾಯ್ನಾಡಿಗೆ ಮರಳಿದ ಬಿಎಸ್ಎಫ್ ಯೋಧ ನಾಗಬಸಯ್ಯ ಹಿರೇಮಠ ಗುಡಿಗೇರಿ ಇವರಿಗೆ ವಿಶೇಷವಾಗಿ ಸನ್ಮಾನ್ಯ ಗೌರವಿಸಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದು ಕೊಟ್ಟಿತು.
ಈ ಕಾರ್ಯಕ್ರಮದ ಗಮನ ಸೆಳೆದಿದ್ದು “ಸಾಧಕ” ಎಂಬ ಕಿರು ಚಿತ್ರದ ಪ್ರದರ್ಶನ ಹಾಗೂ ಕನಸು ತಂಡದಿಂದ ತುಂಬಾ ಅದ್ಭುತವಾಗಿ ಮೂಡಿ ಬಂದಿರುವ” ಗೊತ್ತು ಗೊತ್ತಿಲ್ಲದೆ ಈ ಹೃದಯ ನಿನ್ನ ಪ್ರೀತಿಸಿದೆ ” ಎಂಬ ಸಾಹಿತ್ಯವುಳ್ಳ ಹಾಡಿನ ಟೀಸರ್ ಕೂಡ ಬಿಡುಗಡೆಗೊಂಡಿತು.

” ಗೊತ್ತು ಗೊತ್ತಿಲ್ಲದೆ ಈ ಹೃದಯ ನಿನ್ನ ಪ್ರೀತಿಸಿದೆ ” ಎಂಬ ಸಾಹಿತ್ಯವುಳ್ಳ ಹಾಡಿನ ಟೀಸರ್ ಕೂಡ ಬಿಡುಗಡೆ

ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತುಕೊಂಡು ತುಂಬಾ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಸಾಮ್ರಾಜ್ಯ ಪತ್ರಿಕೆಯ ಸಹ ಸಂಪಾದಕರಾದ ಮುದ್ದಣ್ಣ ಜಿ ಗೊಂದಿಹೊಸಳ್ಳಿ ಅವರು ನಡೆಸಿಕೊಟ್ಟರು.

ಅನೇಕ ಮುಖ್ಯ ಅತಿಥಿಗಳು ಪತ್ರಿಕೆಗಳ ಮಹತ್ವ, ಜವಾಬ್ದಾರಿ, ಮತ್ತು ಪತ್ರಿಕೋದ್ಯಮಕ್ಕೆ ಎದುರಾಗುವ ಸವಾಲುಗಳ ಕಾರ್ಯಕ್ರಮದಲ್ಲಿ ಹಂಚಿಕೊಂಡರು ಮತ್ತು ಕನಸು ಹಾಗೂ ಸಾಮ್ರಾಜ್ಯ ಪತ್ರಿಕೆ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಂತ ಶ್ರೀಮತಿ ಸಾವಿತ್ರಿ ಮುಜಂದಾರ್ ಅವರು ಸತ್ಯಾಗ್ರವಾಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಪತ್ರಿಕೋದ್ಯಮ ಪ್ರಶಸ್ತ ವಿದ್ಯಮಾನಗಳ ಬಗ್ಗೆ ಮತ್ತು ತಮ್ಮ ಜೀವನದ ಅವಧಿಯಲ್ಲಿ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದಂತಹ ಸೇವೆಯನ್ನು ಹಂಚಿಕೊಳ್ಳುತ್ತಾ ತಮ್ಮ ಅದ್ಭುತ ಮಾತುಗಳಿಂದ ಎಲ್ಲರನ್ನ ಹಿಡಿದಿಟ್ಟುಕೊಂಡು ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ಅರ್ಥಪೂರ್ಣವಾಗುವಂತೆ ನಡೆಸಿದರು.
ಕಾರ್ಯಕ್ರಮದಲ್ಲಿ ಗಮನ ಸೆಳೆದಿದ್ದು ಡ್ಯಾನ್ಸರ್ ಹರಿಪ್ರಸಾದ್ ನೃತ್ಯ ಹಾಗೂ ಕರಾಟೆ ಪ್ರದರ್ಶನ, ಭರತನಾಟ್ಯ, ಎಲ್ಲರನ್ನ ಗಮನ ಸೆಳೆದಿದ್ದು ನಟಿ ಶಿವಗಂಗಾ ಡ್ಯಾನ್ಸ್ ಮಾಡುವ ಮೂಲಕ ಎಲ್ಲರಿಗೂ ಮನರಂಜನೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕಿ ಕೀರ್ತಿ ಪಾಟೀಲ್, ಪತ್ರಕರ್ತರಾದ ಸಾದಿಕ್ ಅಲಿ, ಜಿಎಸ್ ಗೋನಾಳ, ಕೋಮಲಾ ಕುದುರೆಮೋತಿ, ಸುಮಂಗಲ ಹಂಚಿನಾಳ, ಹಿರಿಯ ಸಾಹಿತಿಗಳಾದ ಮಾಹಾಂತೇಶ ಮಲ್ಲನಗೌಡ, ಹನುಮಂತಪ್ಪ ಅಂಡಗಿ, ಸಿದ್ದಲಿಂಗಪ್ಪ ಕೊಟ್ನೇಕಲ್, ಮಹಾಂತೇಶ್ ಸಿಂದೋಗಿಮಠ, ಅನ್ವರ್ ಗಡಾದ, ಪ್ರಭುರಾಜ್ ಕರ್ಲಿ ಮಹೇಶ್ ಹಳ್ಳಿಕೇರಿ, ದಸ್ತಗಿರಿ, ಬಸವರಾಜ್ ಕೊಪ್ಪಳ ಮತ್ತಿತರರು ಗಣ್ಯ ವ್ಯಕ್ತಿಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು

Leave A Reply

Your email address will not be published.