ಕುಷ್ಟಗಿ : ನನಗೆ ಜೆಡಿಎಸ್ ಪಕ್ಷದಿಂದ ಮತ್ತು ಹೆಚ್. ಡಿ . ಕುಮಾರಸ್ವಾಮಿ ಯವರಿಂದ ಅನ್ಯಾಯವಾಗಿದೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ತುಕರಾಮ ಸೂರ್ವೆ ಹೇಳಿದರು.
ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಕುಷ್ಟಗಿ
ತಾವರಗೇರಾ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜಿಲ್ಲಾ ಅಧ್ಯಕ್ಷ ದೊಡ್ಡನಗೌಡ ಪಾಟೀಲ್ ರು ನನ್ನ ಮನಗೆ ಬಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗು ಎಂದು ಹೇಳಿದರು, ಆಗಾಗಿ ನಾನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವೆ. ಯಾವುದೇ ಆಮಿಷಕ್ಕೆ ಒಳಗಾಗಿಲ್ಲ. ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಸಾಧಿಸಲಿದೆ. ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ಎಲ್ಲಾ ಕಡೆ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಅತಿ ಹೆಚ್ಚಿನ ಬಹುಮತದಿಂದ ಆಯ್ಕೆಯಾಗುತ್ತಾರೆ. ಜಿಲ್ಲೆಯ ಜನರ ಆಸೆಯಂತೆ ಜಿಲ್ಲೆಯಲ್ಲಿ ಕಮಲ ಅರಳಿದೆ ಎಂದರು.
ಈ ಸಂದರ್ಭದಲ್ಲಿ ಮಹಿಬೂನ ನಾಡಗೌಡ, ಬಸವರಾಜ ಮಾಲಿಗೌಡ್ರು ಗೋನಾಳ, ಪರಶುರಾಮ ಭೋಮಿ, ಅಶೋಕ ನವಲಹಳ್ಳಿ, ರವಿಕುಮಾರ ಹೊಸಮನಿ ಸೇರಿದಂತೆ ಇನ್ನಿತರರಿದ್ದರು.