ಅಖಿಲಭಾರತ ವಚನ ಸಾಹಿತ್ಯ ಪರಿಷತ್ ಗೆ ಈರಯ್ಯ ಕುರ್ತಕೋಟಿ ನೇಮಕ.
ಡಿ. ಡಿ. ನ್ಯೂಸ್. ಕೊಪ್ಪಳ
ಡಿ.ಡಿ. ನ್ಯೂಸ್. ಕುಕನೂರು :
ಅಖಿಲಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ನ ಕುಕನೂರು ತಾಲೂಕಿಗೆ ನೂತನ ಅಧ್ಯಕ್ಷರಾಗಿ ಪತ್ರಕರ್ತ ಈರಯ್ಯ ಕುರ್ತಕೋಟಿ ಅವರನ್ನು ನೇಮಕ ಮಾಡಲಾಗಿದೆ.
ಜಿಲ್ಲಾಧ್ಯಕ್ಷ ಜೀ ಎಸ್ ಗೋನಾಳ್ ಅವರು ನೂತನ ಕುಕನೂರು ತಾಲೂಕಿಗೆ ಪತ್ರಕರ್ತ ಈರಯ್ಯ ಕುರ್ತಕೋಟಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ.
ನೂತನ ಪದಾಧಿಕಾರಿಗಳ ನೇಮಕ ಮತ್ತು ಪರಿಷತ್ ನ ಕಾರ್ಯ ಚಟುವಟಿಕೆಗಳ ಮೂಲಕ ಶರಣರು, ಸಂತರ ವಚನ ಸಾಹಿತ್ಯ ಸಂಭ್ರಮವು ಜನಮಾನಸದಲ್ಲಿ ನೆಲೆಸುವಂತೆ ಮಾಡುವ ಪರಿಷತ್ ನ ಆಶಯವನ್ನು ಸಾಕಾರಗೊಳಿಸಲು ಕಾರ್ಯಪ್ರವೃತ್ತರಾಗುವಂತೆ ನೇಮಕಾತಿ ಪತ್ರದಲ್ಲಿ ತಿಳಿಸಲಾಗಿದೆ.