ದೀನ ದಲಿತರ ಬಾಳಿಗೆ ಬೆಳಕಾದ ಅಂಬೇಡ್ಕರ್ – ಡಾ.ಜಯಸಿಂಹ ಎಸ್.
ಡಿ.ಡಿ. ನ್ಯೂಸ್. ಕೊಪ್ಪಳ
ಡಿ.ಡಿ. ನ್ಯೂಸ್. ಬೆಂಗಳೂರು :
ಭಾರತ ಕಂಡ ಸರ್ವ ಶ್ರೇಷ್ಠ ಮಾನವತಾವಾದಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರು ದೀನದಲಿತರ ಬಾಳಿಗೆ ಬೆಳಕಾದವರು ಎಂದು ಖ್ಯಾತ ಕಲಾವಿದ ಡಾ.ಜಯಸಿಂಹ.ಎಸ್ ಹೇಳಿದರು
ಬೆಂಗಳೂರಿನ ನಯನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಾಂಸ್ಕೃತಿಕ ಕಲಾವಿದರ ಒಕ್ಕೂಟ ಮತ್ತು ಬೆಂಗಳೂರು ಕರ್ನಾಟಕ ಮೀಡಿಯಾ ನ್ಯೂಸ್ ಸೆಂಟರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರು ಇವರುಗಳ ಆಶ್ರಯದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮಹಾ ಪರಿ ನಿರ್ವಾಣ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು, ಅಂಬೇಡ್ಕರ್ ಅವರ ಬದುಕು ಮತ್ತು ಜೀವನದ ಕುರಿತು ಗಾಯನದ ಮೂಲಕ ಮನಮುಟ್ಟುವ ಹಾಗೆ ಶುಶ್ರಾವ್ಯವಾಗಿ ಹಾಡಿದರು.
ಜೀವನದ ಹೋರಾಟದ ನಂತರ
ಸ್ವಾತಂತ್ರ್ಯ ಭವ್ಯ ಭಾರತದ ಪ್ರಜಾ ಪ್ರಭುತ್ವದ
ಸಂವಿಧಾನ ರಚನೆಯ ಯಶೋಗಾದಿಯಲ್ಲಿ
ಮಹಾನ್ ಕೊಡುಗೆಯನ್ನು ನೀಡಿದ ಅಂಬೇಡ್ಕರ್ ಅವರ ಆದರ್ಶಗಳು ಅನುಕರಣೆಯ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳ ತಕ್ಕಂತಹ ಯಶಸ್ವಿ ಜೀವನೋಪಾಯದ ಮಾರ್ಗಗಳಾಗಿವೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪತ್ರಕರ್ತರ ವೇದಿಕೆ ಬೆಂಗಳೂರಿನ ಪ್ರಧಾನ ಕಾರ್ಯದರ್ಶಿ
ವೈ. ಮಂಜುನಾಥ್ ಅವರು ಮಾತನಾಡುತ್ತಾ ಅಂಬೇಡ್ಕರ್ ಭಾರತದ ಒಂದು ಶಕ್ತಿ ಇಡೀ ಜಗತ್ತೇ ಇಷ್ಟಪಡುವ ಒಂದು ಮಹಾನ್ ಗ್ರಂಥವನ್ನು ಸಂವಿಧಾನದ ರೂಪದಲ್ಲಿ ನಮಗೆ ನೀಡಿದ ಮಹಾನುಭಾವ ಅಂಬೇಡ್ಕರ್ ಅವರು ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಎಂ. ಶ್ರೀನಿವಾಸ್ ಹರಿಹರ ಮಾತನಾಡಿ ಇಂದಿನ ಮಕ್ಕಳು ಅಂಬೇಡ್ಕರ್ ಅವರ ಸಂವಿಧಾನ ರಚನೆಯ ಯಶೋಗಾಥೆಯ ಬಗ್ಗೆ ತಿಳಿದುಕೊಂಡು ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ನಾಡಿನಾದ್ಯಂತ ಮಾಡಲು ಪ್ರೇರೇಪಣೆ ಯಾಗಬೇಕು ಎಂದರು.
ಡಾ.ಅಂಬೇಡ್ಕರ್ ಅವರ ನಾಡಿನ ದೇಶದ ನಾಗರಿಕರಿಗೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ವೇದವಾಕ್ಯ ಪ್ರತಿಪಾದಿಸಿದ ಧೀಮಂತ ನಾಯಕರಾಗಿದ್ದರು ಎಂದು ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದ ಸಾಂಸ್ಕೃತಿಕ ಸಂಘಟಕ ಮಹದೇವ್ ಬಿರಾದಾರ್ ಅಥಣಿ ತಮ್ಮ ಉಪನ್ಯಾಸದಲ್ಲಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಾಂಸ್ಕೃತಿಕ ನೃತ್ಯ ತಂಡಗಳನ್ನು ಇಲಾಖೆಯಿಂದ ಪ್ರಯೋಜನ ಮಾಡಲಾಗಿತ್ತು
ರುಕ್ಮಿಣಿ ಸುರ್ವೆ ಎಂ ತಂಡದಿಂದ ಅಂಬೇಡ್ಕರ್ ಅವರ ಜೀವನದ ಯಶೋಗಾಥೆಯ ಸಮೂಹ
ನೃತ್ಯ,ಸೌಮ್ಯ ಬಿ ಕೆ ರಾಮನಗರ ತಂಡ ಅಂಬೇಡ್ಕರ್ ಅವರ ಹೋರಾಟದ ಕುರಿತು ಸಮೂಹ ನೃತ್ಯಗಳು ನರೆದಿದ್ದ ಪ್ರೇಕ್ಷಕರನ್ನ ನೃತ್ಯದ ಮೂಲಕ ಮನಸೂರೆಗೊಳಿಸಿದರು.
ಅನುಷಾ ಆರ್.ಬೆಂಗಳೂರು ತಂಡದಿಂದ ಜನಪದ ನೃತ್ಯ,ಕುಣಿಗಲ್ ರಾಮಚಂದ್ರ ಅವರ
ಅಂಬೇಡ್ಕರ್ ಕುರಿತು ಹೋರಾಟದ ಗೀತೆಗಳು.ಡಾ. ಜಯಸಿಂಹ ಅವರು ಮಹಾ ಮಾನವತಾವಾದಿ ಅಂಬೇಡ್ಕರ್ ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಮೆರಗು ತಂದರು
ವೇದಿಕೆಯಲ್ಲಿ ಪತ್ರಕರ್ತರ ವೇದಿಕೆಯ ಸಂಘಟನಾ ಕಾರ್ಯದರ್ಶಿ ಎಂ ಅನಂತಕುಮಾರ್.ತೇಜಸ್ವಿನಿ ಪತ್ರಿಕೆಯ ನಂದೀಶ್.
ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಹರಿಹರ ತಾಲೂಕಿನ ಅಧ್ಯಕ್ಷ ಎಂ ಇಲಿಯಾಸ ಅಹ್ಮದ್.ಅಥಣಿಯ ಸಮಾಜ ಸೇವೆಕಿ ರೂಪ ಕಾಂಬಳೆ. ಇತರರು ಉಪಸ್ಥಿತರಿದ್ದರು.ನಾಡಿನ ಅನೇಕ ಸಾಧಕರಿಗೆ ಅಂಬೇಡ್ಕರ್ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಸಂಘಟಕ ಮತ್ತು ಪತ್ರಕರ್ತ ಮಹೇಶ್ ಬಾಬು ಸುರ್ವೆ ಪ್ರಾಸವಿಕವಾಗಿ ಮಾತನಾಡಿ ಎಲ್ಲರನ್ನ ಸ್ವಾಗತಿಸಿದರು.ಚಲನಚಿತ್ರ ನಿರ್ದೇಶಕ ಪಾಂಡಪುರ ಮಂಜುನಾಥ್ ಕಾರ್ಯಕ್ರಮವನ್ನು ನಿರೂಪಿಸಿದರು.