deshadoothanews

ಜೀವನದ ಪಯಣ ಅವಿಸ್ಮರಣೆ—ರಾಜಶೇಖರ ನಿಂಗೋಜಿ ಯಲಬುರ್ಗಾ

0

ಜೀವನದ ಪಯಣ ಅವಿಸ್ಮರಣೆ—ರಾಜಶೇಖರ ನಿಂಗೋಜಿ ಯಲಬುರ್ಗಾ— ಬದುಕಿದ ವರುಷಗಳು ಎಷ್ಟು ಅನ್ನುವದಕ್ಕಿಂತ ಬದುಕಿದ ಅವಧಿಯಲ್ಲಿ ನಾವು ಏನು ಮಾಡಿದೆವು ಎನ್ನುವದರಲ್ಲಿ ಜೀವನ ಅವಿಸ್ಮರಣೆ ಆಗುವುದು ಎಂದು ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ರಾಜಶೇಖರ ನಿಂಗೋಜಿ ಹೇಳಿದರು. ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ ತಾ.ಪಂ.ಮಾಜಿ ಸದಸ್ಯೆ ಲಲಿತಾ ನಿಂಗೋಜಿ ರವರ 10 ನೇ ವರುಷದ ಪುಣ್ಯಸ್ಮರಣತ್ಸೋವದಲ್ಲಿ ಮಾತನಾಡಿದ ಅವರು ಜೀವನದಲ್ಲಿ ಸಾವು ಯಾವಕ್ಷಣದಲ್ಲಿದಾರೂ ಬರಬಹುದು ಆದರೆ ನಾವು ತೀರಿ ಹೋದಾಗಲೂ ಜೀವಂತ ಇರಬೇಕಾದರೆ ಬದುಕಿನ ಅವಧಿಯಲ್ಲಿ ಸತ್ಕಾರ್ಯದಲ್ಹಿ ತೊಡಗಿಕೊಳ್ಳಬೇಕು ಎಂದರು . ಜೀವನದಲ್ಲಿ ಏನೆ ಬಂದರೂ ಯಥಾರೀತಿ ಸ್ವೀಕಾರಮಾಡಿ ಮಾನಸಿಕ ಸ್ಥಿರತೆಯನ್ನು ಕಾಪಾದಿಕೊಳ್ಳಬೇಕು ಎಂದರುˌ. ಈಶ್ವರಿ ವಿ.ವಿ.ದ ಸಂಚಾಲಕಿ ಬ್ರˌಕು. ಉಮಾ ಅಕ್ಕನವರು ಮಾತನಾಡಿ ಯಲಬುರ್ಗಾ ತಾಲೂಕಿನಾದ್ಯಾಂತ ಈಶ್ವರಿ ವಿ.ವಿ.ದ ಜ್ಞಾನವನ್ನು ಪಸರಿಸಲು ನಿಂಗೋಜಿ ಲಲಿತಕ್ಕನವರು ನಮಗೆ ಸದಾ ಸಾಥನೀಡುತ್ತಿರುವ ಕ್ಷಣಗಳು ಈಗಲೂ ನಮ್ಮ ಕಣ್ಮುಂದೆ ಬರುತ್ತಿವೆ. ಅವರು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಸದಾ ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಿದ್ದರು ಎಂದರು. . ಶರಣಪ್ಪ ರಾಂಪೂರ ˌ ಸಿದ್ದಯ್ಯ ಕೊಣ್ಣೂರುˌ ಫಕೀರಪ್ಪ ಗಾಣಗೇರ ˌ ಫ್ರೊ.ಅಶೋಕ ಕೆಂಚರಡ್ದಿ ˌ ಮಲ್ಲಿಕಾರ್ಜುನ ಟೆಂಗಿನಕಾಯಿ ˌ ಶರಣಪ್ಪ ಹವಳದ ˌ ಹನುಮಂತಪ್ಪ ದಾನಕೈˌ ಮಂಜು ನಿಂಗೋಜಿ ˌ ಫ್ರೊ ರವಿ ನಿಂಗೋಜಿ ˌ ಮಂಜು ಕೊಣ್ಣೂರˌ ನಿಂಗಪ್ಪ ಯರಾಶಿ ಇನ್ನೀತರರು ಉಪಸ್ಥಿತರಿದ್ದರು. ನೂರಾರು ಜನ ಅಕ್ಕಂದಿರು ಭಾಗಿಗಳಾಗಿದ್ದರು . ನಂತರ ಬ್ರಹ್ಮ ಭೋಜನ ವನ್ನು ಎಲ್ಲರೂ ಸವಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ಕವನ ವಾಚಿಸಿದರು. ಶರಣಪ್ಪ ದಾನಕೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು .ವರದಿ—ವೀರಣ್ಣ ನಿಂಗೋಜಿ 9008585482

Leave A Reply

Your email address will not be published.