deshadoothanews

ಚುಟುಕು ಸಾಹಿತ್ಯ ಪರಿಷತ್ ಶ್ರೀ ಸಾಮಾನ್ಯರ ಜನರ ಧ್ವನಿ ಯಾಗಿದೆ : ಡಾ. ಎಂ.ಜಿ. ಆರ್. ಅರಸ್

ಡಿ.ಡಿ. ನ್ಯೂಸ್. ಕೊಪ್ಪಳ

0

ಡಿ.ಡಿ. ನ್ಯೂಸ್. ಕೊಪ್ಪಳ : 

ಚುಟುಕು ಸಾಹಿತ್ಯ ಪರಿಷತ್ತು ಎಲ್ಲಾ ಸ್ತರದ ಜನರ ಆಶಯಗಳಿಗೆ ಸ್ಪಂದಿಸುವ ಮೂಲಕ ಜನ ಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುವ ಧ್ವನಿಯಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ರಾಜ್ಯ ಸಂಚಾಲಕ ರಾದ ಡಾ. ಎಂ.ಜಿ.ಅರಸ್ ಹೇಳಿದರು.

ಅವರು ಭಾನುವಾರ ಸಂಜೆ ಇಲ್ಲಿಯ ತಾ.ಪಂ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ, ಹಾಗೂ ಜಿಲ್ಲಾ ಘಟಕದ ಕಾಯ೯ ಚಟುವಟಿಕೆಗಳ ಉದ್ಘಾಟಿಸಿ ಮಾತನಾಡಿದರು. ಚುಟುಕು ಸಾಹಿತ್ಯ ಡಲ್ಲಿ ಭೇದ ಭಾವವಿಲ್ಲ, ಕಳೆದ ೩೦ ವರುಷಗಳಿಂದ ರಾಜ್ಯ ದ ಲ್ಲಿ ನಿರಂತರ ಸಾಹಿತ್ಯ ಚಟುವಟಿಕೆ ಮಾಡುತ್ತಾ.

ಎಲ್ಲರ ಆಶಯ ಗಳಿಗೆ ಧ್ವನಿ ಆಗುತ್ತಾ ಬಂದಿದೆ, ಹಲವಾರು ಸಮ್ಮೇಳನ ಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಚುಟುಕು ಸಾಹಿತ್ಯ ಪ್ರಬಲ ವಾಗಿ ಬೆಳೆದಿದೆ, ಸಾವ೯ಜನಿಕ ಗ್ರಂಥಾಲಯ ಇಲಾಖೆ ಯು ಚುಟುಕು ಸಾಹಿತ್ಯ ಕೃತಿಗಳನ್ನು ಖರೀದಿಸುವ ಪರಂಪರೆ ಬಂದಿದೆ . ನೂತನ ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿಗಳ ಶ್ರಮದಿಂದ ಪರಿಷತ್ತಿನ ಘನತೆಯನ್ನು ಎತ್ತರಿಸುವ ಕೆಲಸ ಮಾಡಲಿ ಎಂದರು.

ವೇದಿಕೆಯಲ್ಲಿ ಸಾಹಿತಿಗಳಾದ ಡಾ. ಮಹಾಂತೇಶ್ ಮಲ್ಲನಗೌಡರ, ರಮೇಶ್ ಸುವೆ ೯, ಸಾವಿತ್ರಿ ಮುಜಮದಾರ್, ಹೊಳೆ ನರಸೀಪುರ ಸಾಹಿತಿ ಪ್ರೇಮ ಮಂಜುನಾಥ್, ವಿ.ಬೀ. ಗೌಡ, ಗಿರಿಜಾ ಶಂಕರ್ ಪಾಟೀಲ್, ಎಂ. ಬೀ.ಅಳವಂಡಿ, ಜಿ.ಎಸ್. ಗೋನಾಳ, ವೀರಣ್ಣ ನಿಂಗೋಜಿ ಮೊದಲಾದವರು ಇದ್ದರು. ಡಾ. ಶಿವಬಸಪ್ಪ ಮಸ್ಕಿ ಅಧ್ಯಕ್ಷತೆ ವಹಿಸಿದ್ದರು. ಘಟಕದ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಶಿವಪ್ರಸಾದ್ ಹಾದಿಮನಿ ಸ್ವಾಗತಿಸಿದರು. ಡಾ. ಮಹಾಂತೇಶ್ ನೇಲಾ ಗಣಿ ನಿರೂಪಿಸಿದರು. ಇದೆ ವೇಳೆ ೨೦ಕ್ಕೂ ಅಧಿಕ ಜನರು ಕವಿತೆ ವಾಚನ ಮಾಡಿದರು. ಹಲವು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

 

Leave A Reply

Your email address will not be published.