ವಿದ್ಯಾಸರಸ್ವತಿ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ*
ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಕೊಪ್ಪಳ :
ನಗರದ ವಿದ್ಯಾಸರಸ್ವತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 31 ನೇ ವಾರ್ಡಿನ ನಗರಸಭೆಯ ನೂತನ ಸದಸ್ಯರಾಗಿರುವ ಶ್ರೀ ಮಲ್ಲಪ್ಪ ಕವಲೂರು ರವರು ಧ್ವಜಾರೋಹಣವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಲಿತ ಸಂಘದ ಯುವ ಹೋರಾಟಗಾರರಾದ ಶ್ರೀ ರಾಮು ಪೂಜಾರ ರವರು ಹಾಗೂ ಹಿರಿಯರಾದ ಶ್ರೀ ಹಂಪಣ್ಣ ಸಿಂಪಿಗೆರ್ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕ ವೃಂದದವರು, ಪಾಲಕ ಪೋಷಕರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಭಾರತೀಯರಾದ ನಾವು ಹೆಮ್ಮೆಯ ಪುತ್ರರು ಆದರ್ಶವಾದಿಯನ್ನು ಪ್ರಚುರಪಡಿಸಿ ಹೆಮ್ಮೆಯ ಗುರುತನ್ನು ಮಾಡಿದ ಸ್ವಾತಂತ್ರ ಹೋರಾಟಗಾರರನ್ನು ನೆನೆಯುವ ಮೂಲಕ ಮುಂದಿನ ಬಾವಿ ನಾಗರೀಕರಾಗುವ ಮಕ್ಕಳಿಗೆ ಸ್ವತಂತ್ರ ಹೋರಾಟಗಾರರ, ಕ್ರಾಂತಿಕಾರಿ ವ್ಯಕ್ತಿಗಳ ಮತ್ತು ಸಾಮಾಜಿಕ ಧಾರ್ಮಿಕ ಸುಧಾರಣಾ ಕಾರರ ಮೌಲ್ಯಗಳನ್ನು ತಿಳಿಸಿ ಮಕ್ಕಳಲ್ಲಿ ಅಳಡಿಸುವಲ್ಲಿ ಮುಖ್ಯ ಪಾತ್ರವಾಗಿದೆ.
ಎಂದು ಹೇಳಿದರು.
ಅದೇ ರೀತಿಯಾಗಿ ಮುಖ್ಯ ಅತಿಥಿಗಳು ಶಾಲೆಯ ಶಿಕ್ಷಕಿಯರು ಮತ್ತು ಮುಖ್ಯೋಪಾಧ್ಯಾಯರು ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದ *ನಿರೂಪಣೆಯನ್ನು ಶ್ರೀಮತಿ ಹಸೀನ**ರವರು *ಸ್ವಾಗತ ವನ್ನು ಶ್ರೀಮತಿ ಜ್ಯೋತಿ**ರವರು ಮತ್ತು *ವಂದನಾರ್ಪಣೆಯನ್ನು ಶ್ರೀಮತಿ ಶೀಲಾರ*”ವರು ನೆರವೇರಿಸಿದರು.