ಡಿ ಡಿ ನ್ಯೂಸ್. ಕುಕನೂರ :
ಮಂಗಳೂರು ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ಜರುಗಿತು ನೂತನ ಅಧ್ಯಕ್ಷರಾಗಿ ಸಕ್ರಪ್ಪ ಮಂಗಳಪ್ಪ ಚಿನ್ನೂರು, ಉಪಾಧ್ಯಕ್ಷರಾಗಿ ಅನ್ನಪೂರ್ಣ ಗಂಡ ಸುರೇಶ ಮ್ಯಾಗಳೇಶಿ, ಆಯ್ಕೆಯಾಗಿದ್ದು ಮತದಾನ ಮಾಡುವುದರ ಮೂಲಕ ಅಧ್ಯಕ್ಷರ ಅವಿರೋಧವಾಗಿ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಿದೆ .
ಮಂಗಳೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಯಲ್ಲಿ ಎರಡು ನಾಮಪತ್ರಗಳು ಸಲ್ಲಿಕೆಯಾಗಿದ್ದ ಸಕ್ರಪ್ಪ ಮಂಗಳಪ್ಪ ಚಿನ್ನೂರ್ ಹಾಗೂ ಕಲ್ಲಪ್ಪ ವೀರಪ್ಪ ದೇವರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರೆ ಉಪಾಧ್ಯಕ್ಷ ಸ್ಥಾನಕ್ಕೆ ಅನ್ನಪೂರ್ಣ ಸುರೇಶ ಮ್ಯಾಗಳೇಶಿ ನಾಮಪತ್ರ ಸಲ್ಲಿಸಿರುತ್ತಾರೆ. 3 ನಾಮಪತ್ರಗಳು ಕ್ರಮಬದ್ಧವಾಗಿರುವುದರಿಂದ ಮೂರು ನಾಮಪತ್ರಗಳನ್ನು ಸ್ವೀಕರಿಸಿ ಅಧ್ಯಕ್ಷ ಸ್ಥಾನಕ್ಕೆ ಗೌಪ್ಯ ಮತದಾನ ನಡೆಸಲಾಗಿದ್ದು ಅಭ್ಯರ್ಥಿಗಳಾದ ಸಕ್ರಪ್ಪ ಮಂಗಳಪ್ಪ ಚಿನ್ನೂರ್ 20 ಮತಗಳನ್ನು ಪಡೆದರೆ ಕಲ್ಲಪ್ಪ ವೀರಪ್ಪ ದೇವರ 8 ಮತಗಳನ್ನು ಪಡೆದುಕೊಂಡಿರುತ್ತಾರೆ. ಆದ್ದರಿಂದ ಸಕ್ರಪ್ಪ ತಂದೆ ಮಂಗಳೇಶಪ್ಪ ಚಿನ್ನೂರ್ ಅವರು ಗೌಪ್ಯ ಮತದಾನದಲ್ಲಿ ವಿಜೇತರಾಗಿದ್ದು ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ ಮತ್ತು ಅನ್ನಪೂರ್ಣ ಸುರೇಶ್ ಮ್ಯಗಳೇಶಿ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಸುರೇಶ ಸರಗಣಚಾರ ಘೋಷಣೆ ಮಾಡಿದರು.
ಫಲಿತಾಂಶ ಘೋಷಣೆಯಾಗುತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ಎ ದೇಸಾಯಿ, ಶ್ರೀನಿವಾಸ ಭಟ್, ಮರಿಯಪ್ಪ ಪೂಜಾರ್, ಪ್ರಶಾಂತ ಅಳವಂಡಿ, ಬಸವರಾಜ ಪೂಜಾರ್, ಮಂಗಳೇಶ ಬಂಡಿ, ಮಾಬೂಸಾಬ್ ಗೋಡೆಕರ, ಮರಿಸ್ವಾಮಿ ಪೂಜಾರ್, ರಾಮಣ್ಣ ಪೂಜಾರಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು.