deshadoothanews

ಕ-ಕ ದಲ್ಲಿ ಸಹಕಾರ ಕ್ಷೇತ್ರ ಬಲಗೊಳ್ಳಲಿ-ಬಾದರ್ಲಿ

ಡಿ ಡಿ ನ್ಯೂಸ್. ಸಿಂಧನೂರು

0

ಡಿ ಡಿ ನ್ಯೂಸ್. ಸಿಂಧನೂರ, :

ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಹಕಾರಿ ಸಂಘಗಳು ಹೊಸ ಹೊಸ ಯೋಜನೆಗಳನ್ನು ರೂಪಿಸಿ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಮೂಲಕ ಇನ್ನಷ್ಟು ಬಲಗೊಳ್ಳಬೇಕಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಅಭಿಪ್ರಾಯಪಟ್ಟರು.

ನಗರದ ಟೌನ್‌ಹಾಲ್‌ನಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರ ಒಕ್ಕೂಟ, ಸಹಕಾರ ಇಲಾಖೆ, ರಾಯಚೂರು ಜಿಲ್ಲಾ ಸಹಕಾರ ಯೂನಿಯನ್, ಆರ್‌ಕೆಡಿಸಿಸಿ ಬ್ಯಾಂಕ್‌ಗಳ ಸಂಯು ಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 70ನೇ ಅಖಿಲ ಭಾರತ ಸಹಕಾರ ಸಪ್ರಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ಕ್ಷೇತ್ರಕ್ಕೆ 118 ವರ್ಷಗಳ ಇತಿಹಾಸವಿದೆ.

ರಾಜ್ಯದಲ್ಲಿ 46 ಸಾವಿರ ಸಹಕಾರಿ ಸಂಘಗಳಿದ್ದು, 2.46 ಕೋಟಿ ಜನತೆ ಸಹಕಾರಿ ಕ್ಷೇತ್ರಗಳಲ್ಲಿದ್ದಾರೆ. ಪ್ರಸ್ತುತ ದಿನಗಳಲ್ಲಿ ಸಹಕಾರ ಕ್ಷೇತ್ರದಲ್ಲಿ ಕ್ರಾಂತಿ ಕಾರಕ ಬದಲಾವಣೆಗಳಾಗುತ್ತಿವೆ. ಉತ್ತಮ ಆಡಳಿತ ಮಂಡಳಿಯಿಂದ ಸಹಕಾರ ಸಂಘಗಳು ಬೆಳವಣಿಗೆ ಯಾಗುತ್ತವೆ. ನಮ್ಮಲ್ಲಿನ ಅನೇಕ ಸಹಕಾರ ಸಂಘಗಳು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿವೆ. ಕ-ಕ ಭಾಗದಲ್ಲಿ ಸಹಕಾರ ಸಂಘಗಳ ಇನ್ನಷ್ಟು ಬಲಗೊಳ್ಳಬೇಕಿದೆ ಎಂದರು. ತಳಕಲ್ಲು ಸಪಪೂ ಕಾಲೇಜಿನ ಪ್ರಾಚಾರ್ಯ ಡಾ.ಫಕೀರಪ್ಪ ವಜ್ರಬಂಡಿ ಸಾರ್ವಜನಿಕ- ಖಾಸಗಿ- ಸಹಕಾರಿ ಸಹಭಾಗಿತ್ವವನ್ನು ಬಲಪಡಿಸುವ ಕುರಿತು ವಿಶೇಷ ಉಪನ್ಯಾಸ ನೀಡಿದರು. ಆರ್‌ಕೆಡಿಸಿಸಿ ಬ್ಯಾಂಕ್‌ನ

ವ್ಯವಸ್ಥಾಪಕ ನಿರ್ದೇಶಕ ಐ.ಎಸ್.ಗಿರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಆರ್‌ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್, ಸಿಂಧನೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರ ಒಕ್ಕೂಟದ ಅಧ್ಯಕ್ಷ

ಶಿವಪುತ್ರಪ್ಪ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ, ಕೆಓಎಫ್ ಅಧ್ಯಕ್ಷ ವೆಂಕಟರಾವ

ನಾಡಗೌಡ, ಮಾಜಿ ಸಂಸದ, ರಾಯಚೂರು ಜಿಲ್ಲಾ ಸೌಹಾರ್ದ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಆರ್‌ಕೆಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಪಂಪನಗೌಡ ಬಾದರ್ಲಿ, ಸೋಮನಗೌಡ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕರಾದ ಸಂಜಯ್ ಪಾಟೀಲ್, ಅಮರೇಶ ಪಾಟೀಲ್, ರಾಜ್ಯ ವಿಮಾ ಸಹಕಾರ ಸಂಘದ ನಿರ್ದೇಶಕ ಆದನಗೌಡ ಕಲ್ಲೂರು, ಜಿಲ್ಲಾ ಸಹಕಾರ ಯುನಿಯನ್‌ನ ಅಧ್ಯಕ್ಷ ವಿಜಯಕುಮಾರ ಪಾಟೀಲ್, ಟಿಎಪಿಸಿಎಂಎಸ್ ನ ಅಧ್ಯಕ್ಷ ಮಲ್ಲನಗೌಡ ಬಾದರ್ಲಿ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಮಲ್ಲಯ್ಯ ಕಂದಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave A Reply

Your email address will not be published.