deshadoothanews

ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಮುಂಡರಗಿ ಇವರಿಂದ ಪತ್ರಕರ್ತರ ಬೇಡಿಕೆ ಹಿಡೇರಿಸಲು ಮುಖ್ಯಮಂತ್ರಿಗಳಿಗೆ ಮನವಿ

ಡಿ ಡಿ ನ್ಯೂಸ್. ಗದಗ

0

ಡಿ ಡಿ ನ್ಯೂಸ್. ಮುಂಡರಗಿ :

ತಹಶೀಲ್ದಾರರು ಹಾಗೂ ತಾಲೂಕ ದಂಡಾಧಿಕಾರಿಗಳು, ಮುಂಡರಗಿ ಇವರ ಮುಕಾಂತರ ತಾಲೂಕ ಪ್ರೆಸ್ ಕ್ಲಬ್ ಕೌ ಅಧ್ಯಕ್ಷರು ಉಡಚಪ್ಪ ತಿಗರಿ ಇವರ ಅಧ್ಯಕ್ಷತೆ ಯಲ್ಲಿ ಮನವಿ ಸಲ್ಲಿಸಲಾಯಿತು.

ಅಲಗಿ ಸುರೇಶ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯ ಉಪಾಧ್ಯಕ್ಷರು,ಮಾತನಾಡಿ…ಆರ್ಥಿಕ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸರ್ಕಾರ ಸೌಲಭ್ಯವನ್ನು ನೀಡುವಲ್ಲಿ ಯಾವುದೇ ಕಾರಣಕ್ಕು ಮೀನಮೇಷ ಹೆಣಿಸಬಾರದು ಹಗಲು ರಾತ್ರಿ ಎನ್ನದೆ ಈ ಸಂಕಷ್ಟದ ಬೆಲೆ ಏರಿಕೆಯ ಸಂದಿಗ್ಧ ಪರಿಸ್ಥಿತಿಯಲ್ಲಿ ಜನ ಜಗತ್ತಿನ ನಡುವೆ ದೊಡ್ಡ ಸಂಕರ್ಷಕೊಂಡಿಯಾಗಿ ಪತ್ರಕರ್ತರ ಕಾರ್ಯನಿರ್ವಹಿಸುತ್ತಿದ್ದಾರೆ ಪಕರ್ತರಿಗೆ ಭದ್ರತೆ ಇಲ್ಲದಂತಾಗಿದೆ.

ಈ ನಿಟ್ಟಿನಲ್ಲಿ ಸರ್ಕಾರ ಕೂಡಲೆ ಪತ್ರಕರ್ತರ ನೆರವಿಗೆ ಧಾವಿಸಬೇಕು ಹಾಗೆಯೇ ತಂತ್ರಜ್ಞಾನವ ಭರಾಟೆಯಲ್ಲಿಯೂ ಮುದ್ರಣ ಮಾಧ್ಯಮ ಆಯಾ ಕಾಲಘಟ್ಟ ಮಾರ್ಪಾಡು ಮಾಡಿಕೊಂಡು ಈಗಲೂ ಕೂಡ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಹಾಗಾಗಿ ಸರ್ಕಾರ ಮತ್ತು ಸಮಾಜದ ನಡುವೆ ಇರುವ ಮಹತ್ವದ ಕೊಂಡಿಯಾಗಿ ಮೂಲಕ ಸಮಾಜದ ಒಳಿತಿಗಾಗಿ ಮುಡಿಯುತ್ತಿರುವ ಪ್ರರ್ತರಿಗೆ ಸರ್ಕಾರ ಈ ಕೂಡಲೇ ನಮ್ಮ ವಿವಿಧ ಬೇಡಿಕೆಗಳನ್ನು ಈಡೆಸಬೇಕೆಯ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತವೆ
ಪತ್ರಕರ್ತರಿಗೆ ವಿಮೆ ಸೌಲಭ್ಯ ಕೊಡಲೇ ಜಾರಿ ಮಾಡಬೇಕು.

ಪತ್ರಕರ್ತರಿಗೆ ವಸತಿ ಮತ್ತು ನಿವೇಶನ ಕಲ್ಪಿಸಿಕೊಡಬೇಕು. ರಾಜ್ಯ, ಮತ್ತು ಕಾಲೂಕು ಮಟ್ಟದಲ್ಲಿ ಪತ್ರಿಕಾ ಭವನ ನಿರ್ಮಾಣ ಮಾಡಿಕೊಡಬೇಕು, ಪತ್ರಕರ್ತರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಹಾಸ್ಟೆ‌ಲ್‌ನಲ್ಲಿ ಸೀಟುಗಳನ್ನು ಒದಗಿಸಬೇಕು.ಪತ್ರಕರ್ತರಿಗೆ ಉಚಿತ ಒಪಾಸ್‌ ನೀಡಬೇಕು ಬೆಲೆ ಏರಿಕೆಯಾ ಸಮಯದಲ್ಲಿ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸಹಾಯಧನ ಸೌಲಭ್ಯ ಒದಗಿಸಬೇಕು. ಪತ್ರಕರ್ತರ ಸ್ವಂತ ವಾಹನಗಳಿಗೆ ಟೋಲ್ ನಿಷೇಧಿಸಬೇಕು. ಯಂದರು ಸಂದರ್ಭದಲ್ಲಿ ಕ ಪ್ರೆ ಕ್ಲಬ್ ಗದಗ ಜಿಲ್ಲಾಧ್ಯಕ್ಷರು ಮಲ್ಲಿಕಾರ್ಜುನ ಕಿರೆಸೂರು. ರಂಗನಾಥ ಕಂದಗಲ್. ಮಹೇಶ ಗೌಡ ಗೌಡರ. ಬಸವರಾಜ ಕೊಪ್ಪಳ. ಕುಮಾರ ನಾಯಕ. ಮರಿಯಜ್ಜ ಹರಿಜನ. ಶಿವು ವಾಲಿಕಾರ ಇನ್ನು ಅನೇಕ ಮಿತ್ರರು ಹಿರಿಯರು ಇದ್ದರು.

Leave A Reply

Your email address will not be published.