deshadoothanews

ಕೆಆರ್ ಪಿಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಇಂದ್ರಪ್ಪ ಸುಣಗಾರಗೆ ಸನ್ಮಾನ.

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕೊಪ್ಪಳ :

ತಾಲ್ಲೂಕಿನ ಜಬ್ಬಲಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂ ಸದಸ್ಯ ಹಾಗೂ ಕೆಆರ್ ಪಿಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಇಂದ್ರಪ್ಪ ಸುಣಗಾರಗೆ ಶಾಲಾ ಆಡಳಿತ ಮಂಡಳಿಯವರು ಸನ್ಮಾನಿಸಿ ಗೌರವಿಸಿದರು.

ಶಾಲೆಯ ವಿದ್ಯಾರ್ಥಿಗಳಿಗೆ ಕೀಡ್ರಾ ಸಮವಸ್ತ್ರವನ್ನು ಕೊಡಿಸಿರುವುದಕ್ಕಾಗಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ 77ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ಇಂದ್ರಪ್ಪ ಸುಣಗಾರಗೆ ಸನ್ಮಾನಿಸಲಾಯಿತು.

ಗ್ರಾಪಂ ಸದಸ್ಯರಾದ ಮಲ್ಲನಗೌಡ ಮಾಲಿಪಾಟೀಲ್, ಹುಲಿಗೆಮ್ಮ ಹುಲಗಪ್ಪ ಪೂಜಾರ, ಅಕ್ಕಮ್ಮ ಯಂಕಪ್ಪ ಕಾರಟಗಿ, ರೇಣುಕಮ್ಮ ಹನುಮಂತ ಸಿಂದೋಗಿ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಸುರೇಶ ಈಳಿಗೇರ, ರೈತ ಸಂಘದ ಅಧ್ಯಕ್ಷ ಶ್ರೀನಿವಾಸ ಭೋವಿ ಇತರರಿದ್ದರು.

Leave A Reply

Your email address will not be published.