deshadoothanews

ಬಳಗೇರಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷ ಉಪಧ್ಯಕ್ಷ ಅಧಿಕಾರ ಸ್ವೀಕಾರ!

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕುಕನೂರು :

 

ಇಂದು ಬಳಗೇರಿ ಗ್ರಾಮ ಪಂಚಾಯತಿಯ ಎರಡನೇ ಅವದಿಗೆ ನೂತನ ಅಧ್ಯಕ್ಷ-ಉಪಧ್ಯಕ್ಷ ಅಧಿಕಾರ ಸ್ವೀಕಾರ ಹಾಗೂ ಪದಗ್ರಹಣ ಕಾರ್ಯಕ್ರಮ ನಡೆಯಿತು. 2ನೇ ಅವದಿಗೆ ಅಧ್ಯಕ್ಷರ ಗಾದಿಗೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಗೌರಮ್ಮ ಕುರ್ತಕೋಟಿ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಸಿದ್ದಮ್ಮ ಶಿವಬಸಪ್ಪ ದೇವರಮನಿ ಅಧಿಕಾರ ಪಡೆದರು.

 

ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಹಲವು ಗ್ರಾಮ ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆದಿದ್ದು, ತಾಲೂಕಿನ ಬಳಗೇರಿ ಗ್ರಾಮ ಪಂಚಾಯತಿಯ 2ನೇ ಅವದಿಗೆ ಅಧ್ಯಕ್ಷರ ಗಾದಿಗೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಗೌರಮ್ಮ ಕುರ್ತಕೋಟಿ ಆಯ್ಕೆಯಾಗಿದ್ದರು. ಉಪಾಧ್ಯಕ್ಷರಾಗಿ ಸಿದ್ದಮ್ಮ ಶಿವಬಸಪ್ಪ ದೇವರಮನಿ ಆಯ್ಕೆಯಾಗಿದ್ದರು.

ಹಿಂದೆ ಮೊದಲ ಅವದಿಗೆ ಬಳಗೇರಿ ಅಧ್ಯಕ್ಷರಾಗಿ ಶುಶಿಲಮ್ಮ ವಿರಕ್ತಮಠ, ಉಪಾಧ್ಯಕ್ಷರಾಗಿ ಅಕ್ಕಮ್ಮ ಚಾಕ್ರಿ ಇವರಿಂದ ಅಧಿಕಾರ ಹಸ್ತಾಂತರಿಸಲಾಯಿತು.

 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಸಿದ್ದನ್ನಳ್ಳಿ, ಪಂಚಾಯತ್ ಕಾರ್ಯಧರ್ಶಿ ಫಕಿರೆಡ್ಡಿ ಭಾವಿಕಟ್ಟಿ, ಕಾಂಗ್ರೆಸ್ ಮುಖಂಡ ಮೇಘರಾಜ್ ಬಳಗೇರಿ, ಗ್ರಾ. ಪಂಚಾಯತ್ ಸದಸ್ಯ ಯಮನೂರಪ್ಪ ಕಟ್ಟಿಮನಿ, ವಿರೂಪಾಯ್ಯ ಕುರ್ತಕೋಟಿ, ಹಂಪಣ್ಣ ಕಟ್ಟಿಮನಿ, ಪ್ರಭಯ್ಯಾ ಕೆಂಭಾವಿ, ನಾರಾಯಣಪ್ಪ ಕಟ್ಟಿಮನಿ, ಚಮನ್ ಸಾಬ್ ವಾಲಿಕಾರ, ರುದ್ರಪ್ಪ ಸರ್ವಿ, ನಾಗಯ್ಯ ಹಿರೇಮಠ್, ಶ್ರೀಕಾಂತ್ ಕಟ್ಟಿಮನಿ,ತಿರುಪತಿ ತಲ್ಲೂರ್, ಕಿರಣ್ಸಂ ರಾಠೋಡ್,ನಾಗಯ್ಯ ಕರಡಿ, ಜಂಬಣ್ಣ ಗೊನಿ, ಕಾಂಗ್ರೆಸ್ ಕಾರ್ಯಕರ್ತ ಭೀಮಣ್ಣ ನಡುವಿಮನಿ, ಶೇಖರ್ ಅಂಗಡಿಕರ್, ಸುಭಾಸ್ ಮಡಿವಾಳ್, ಗವಿಸಿದ್ದಪ್ಪ ತೆವರ್ ಮನಿ ಹಲವಾರು ಗ್ರಾಮದ ಸದಸ್ಯರು ಇದ್ದರು.

 

Leave A Reply

Your email address will not be published.