deshadoothanews

ಹನಮಸಾಗರ: ಐಟಿಐ ಖಾಲಿ ಸ್ಥಾನಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಡಿ ಡಿ ನ್ಯೂಸ್. ಕೊಪ್ಪಳ

0
ಡಿ ಡಿ ನ್ಯೂಸ್. ಕುಷ್ಟಗಿ :
ಹನಮಸಾಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2023-24ನೇ ಸಾಲಿನ ಐಟಿಐ ವಿವಿಧ ವೃತ್ತಿಯಲ್ಲಿ ಖಾಲಿ ಇರುವ ಸ್ಥಾನಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯಲ್ಲಿ ಸಿ.ಟಿ.ಎಸ್ ಅಡಿಯಲ್ಲಿ ಖಾಲಿ ಉಳಿದಿರುವ ಅಡ್ವಾನ್ಸಡ್ ಸಿಎನ್‌ಸಿ-10, ಇಎಂ-09, ಫಿಟ್ಟರ್-04 ಸರ್ಕಾರಿ ಸೀಟುಗಳಿಗೆ ಮತ್ತು ಪಿಪಿಪಿ ಅಡಿಯಲ್ಲಿ ಖಾಲಿ ಉಳಿದಿರುವ ಅಡ್ವಾನ್ಸಡ್ ಸಿಎನ್‌ಸಿ-04, ಇಎಂ-04, ಫಿಟ್ಟರ್-24, ಎಂಇವಿ-02, ಎಲೆಕ್ಟ್ರಿಷಿಯನ್-04 ಪೇಮೆಂಟ್ ಸೀಟುಗಳು ಲಭ್ಯವಿವೆ.
ಅರ್ಜಿ ಸಲ್ಲಿಸಲು ಆಗಸ್ಟ್ 31ಕೊನೆಯ ದಿನವಾಗಿದ್ದು, ಎಸ್.ಎಸ್.ಎಲ್.ಸಿ. ಪಾಸಾದ ಹಾಗೂ ಪಿ.ಯು.ಸಿ., ಡಿಗ್ರಿ ಪಾಸ್ ಅಥವಾ ಫೇಲ್‌ಆದ ಅಭ್ಯರ್ಥಿಗಳಿಗೆ ಪ್ರಥಮವಾಗಿ ಬಂದವರಿಗೆ ಪ್ರಥಮ ಆದ್ಯತೆಯನ್ನು ನೀಡಲಾಗುವುದು. ಆಸಕ್ತರು ಕೊನೆಯ ದಿನಾಂಕದವರೆಗೆ ಕಾಯದೇ ತಮ್ಮ ಎಲ್ಲ ಮೂಲ ದಾಖಲಾತಿಗಳೊಂದಿಗೆ ಹಾಜರಾಗಿ ಸ್ಥಾನ ಉಳಿದಿರುವ ವೃತ್ತಿಗಳಲ್ಲಿ ಆಯ್ಕೆ ಮಾಡಿಕೊಂಡು ಪ್ರವೇಶ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಖುದ್ದಾಗಿ ಸಂಸ್ಥೆಗೆ ಭೇಟಿ ನೀಡಬಹುದು. ಸಂಕ್ಷಿಪ್ತ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9591533759, 9945310045 ಮತ್ತು 9663236441ಗೆ ಸಂಪರ್ಕಿಸಬಹುದು ಎಂದು ಹನಮಸಾಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave A Reply

Your email address will not be published.