deshadoothanews

ಬೇವಿನಹಳ್ಳಿ ಅಧ್ಯಕ್ಷರಾಗಿ ತಿಪ್ಪವ್ವ ಶಿವಪ್ಪ ನಾಯಕ , ಉಪಾಧ್ಯಕ್ಷರಾಗಿ ಮುರುಳಿಧರ್ ಬಸಿರಾಳ ಆಯ್ಕೆ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಹುಲಿಗಿ : ಸಮೀಪದ ಬೇವಿನಹಳ್ಳಿ ಗ್ರಾಮ ಪಂಚಾಯತ

ಅಧ್ಯಕ್ಷರಾಗಿ ಬೇವಿನಹಳ್ಳಿ ಗ್ರಾಮದ ತಿಪ್ಪವ್ವ ಶಿವಪ್ಪ ನಾಯಕ , ಉಪಾಧ್ಯಕ್ಷರಾಗಿ ಲಿಂಗದಳ್ಳಿ ಗ್ರಾಮದ ಮುರುಳಿಧರ್ ಬಸಿರಾಳ ಆಯ್ಕೆ ಆಗಿದ್ದಾರೆ.

ಗುರುವಾರ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಶ್ರೀಮತಿ ತಿಪ್ಪವ್ವ ಶಿವಪ್ಪ ನಾಯಕ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಅಧ್ಯಕ್ಷರು ಆವಿರೋಧವಾಗಿ ಆಯ್ಕೆಯಾದರು. ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮುರುಳಿದರ್ ಬಿಸರಳ್ಳಿ ಮತ್ತು ಹನುಮಂತಪ್ಪ ಗೊಲ್ಲರ್ ಇಬ್ಬರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣೆ ನಡೆಯಿತು. 14 ಸದಸ್ಯರಿರುವ ಬೇವಿನಹಳ್ಳಿ ಪಂಚಾಯತಿಯ ಚಲಾವಣೆಗೊಂಡ ಮತಗಳಲ್ಲಿ ಒಂದು ಮತ ತೀರಸ್ಕೃತಗೊಂಡರೆ ,11 ಮತಗಳ ಪಡೆದ ಮುರುಳಿದರ್ ಬಿಸರಳ್ಳಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರೆ, 2 ಮತಗಳನ್ನು ಪಡೆದ ಹನುಮಂತಪ್ಪ ಪರಭವಗೊಂಡರು ಎಂದು ಚುನಾವಣೆ ಅಧಿಕಾರಿ ಹಾಗೂ ಗೊತ್ತುಪಡಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಯ್ಯ ಹಿರೇಮಠ ಘೋಷಸಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೀತಕುಮಾರಿ, ಕಾರ್ಯದರ್ಶಿಗಳಾದ ಶಿವಾನಂದ ಪಂಥರ, ಗ್ರಾಮ ಪಂಚಾಯತಿ ಸದಸ್ಯರುಗಳಾದ ನಾಗರಾಜ್ ಬಹದ್ದೂರ್ ಬಂಡಿ, ಯಂಕನಗೌಡ ಪಾಟೀಲ್, ಹಾಲಪ್ಪ ತೋಟದ್, ಶಿವಮೂರ್ತಿ ಮೂಲಿಮನಿ, ಅಂಜಿನಪ್ಪ ಲಿಂಗದಳ್ಳಿ, ಶಾಂತಮ್ಮ ಮಡ್ಡಿ, ಹೊನ್ನವ್ವ ಕೊರಡುಕೇರಾ, ಪಾರ್ವತಿ ಬಹದೂರಬಂಡಿ, ಸಹಕಾರಿ ದೂರಿಣ ಮುದ್ದಪ್ಪ ಬೇವಿನಹಳ್ಳಿ, ನಿಂಗಪ್ಪ ನಾಗಲಾಪುರ, ದೇವೇಂದ್ರಪ್ಪ ಕೊರಡಕೇರ, ಚಂದ್ರು ನಾಯಕ್, ನಾಗರಾಜ್ ತೋಟದ, ನಾಗರಾಜ ಶಾಪುರ, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಸಿಬ್ಬಂದಿಗಳುಬೇವಿನಹಳ್ಳಿ ಶಹಾಪುರ ಲಿಂಗದಹಳ್ಳಿ ಗ್ರಾಮದ ಮುಖಂಡರುಗಳು ಗಣ್ಯರು ನೂತನ ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಶುಭ ಕೋರಿದರು.

ಬೇವಿನಹಳ್ಳಿ ಗ್ರಾಮ ಪಂಚಾಯತಿ ನೂತನ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರಿಗೆ ಗಣ್ಯರು.

Leave A Reply

Your email address will not be published.