deshadoothanews

ಗಾಣಧಾಳ ಗ್ರಾ.ಪಂ. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಯಲಬುರ್ಗಾ :

ತಾಲ್ಲೂಕಿನ ಗಾಣಧಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹೊನ್ನಮ್ಮ ಹನಮಂತಪ್ಪ ಸಣ್ಣೇಗೌಡ್ರ, ಉಪಾಧ್ಯಕ್ಷರಾಗಿ ಬಸವರಾಜ ಬಂಗಾರಿ ಅವಿರೋಧ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು.ಅಧ್ಯಕ್ಷ ಸ್ಥಾನಕ್ಕೆ ಹೊನ್ನಮ್ಮ ಹನಮಂತಪ್ಪ ಸಣ್ಣೇಗೌಡ್ರ, ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಬಂಗಾರಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಬೇರೆ ಯಾರು ನಾಮಪತ್ರ ಸಲ್ಲಿಸದೆ ಇರುವದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹಾಗೂ ತೋಟಗಾರಿಕೆ ಹಿರಿಯ ಸಹಾಯಕ ನಿರ್ಧೇಶಕ ಮಂಜುನಾಥ ಲಿಂಗಣ್ಣ ನವರ ತಿಳಿಸಿದ್ದಾರೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಫಲಿತಾಂಶ ಘೋಷಣೆಯಾಗುತಿದ್ದಂತೆ ಅಭಿಮಾನಿಗಳು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು, ಮುಖಂಡರುಗಳಾದ ಹನುಮೇಶ ಹುಲಸನಹಟ್ಟಿ. ಮಂಜುನಾಥ ಪೊಲೀಸ್ ಪಾಟೀಲ. ಓಮಣ್ಣ ಚನ್ನದಾಸರ ಅಮರೇಶಪ್ಪ ಕರ್ಕಪ್ಪನವರ,.ಕರಿಯಪ್ಪ ಏಳುಗುಡ್ಡದ.ಯಮನೂರಪ್ಪ ಪೋಲೀಸ್ ಪಾಟೀಲ್ ಕುಂಟೇಪ್ಪ ದೀಪಾಲಿ ,ನೀರುಪಾದಿ ಹನಮನಾಳ. ಯಮನೂರಪ್ಪ ಕಜ್ಜಿ,

ಹನಮಂತಪ್ಪ ಗೌಡ್ರ, ಕಾಮಣ್ಣ ಹೋಸಮನಿ,ಈಶ್ವರ ಬೊಮ್ಮನಾಳ, ನಾಗರಾಜ ದೊಡ್ಮನಿ, ಸೇರಿದಂತೆ ಮತ್ತೀತರರು ಉಪಸ್ಥೀತರಿದ್ದರು,

Leave A Reply

Your email address will not be published.