deshadoothanews

ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ, ಶಕುಂತಲಾ ಕಲ್ಲೋಡ್ಡಿ,ಶಂಕ್ರಮ್ಮ ಚಿತ್ರನಾಳ ಆಯ್ಕೆ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಯಲಬುರ್ಗಾ : ಮಾಟಲದಿನ್ನಿ ಗ್ರಾಮ ಪಂಚಾಯತಿ ಬಿಜೆಪಿ ಮಡಿಲಿಗೆ

ತಾಲ್ಲೂಕಿನ ಮಾಟಲದಿನ್ನಿ ಗ್ರಾಮ ಪಂಚಾಯತ ನೂತನ ಅಧ್ಯಕ್ಷೆ ಶಕುಂತಲಾ ಅಯ್ಯಪ್ಪ ಕಲ್ಲೋಡ್ಡಿ ಉಪಾಧ್ಯಕ್ಷೆ ಶಂಕ್ರಮ್ಮ ಮೌನೇಶ ಚಿತ್ರನಾಳ ಹನಮವ್ವ ಆಯ್ಕೆಯಾದರು.

ಒಟ್ಟು 18 ಜನ ಸದಸ್ಯರನ್ನು ಹೊಂದಿದ್ದು ಎರಡನೇ ಅವಧಿಗೆ ಚುನಾವಣೆ ಜರುಗೀತು ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾಗಿದ್ದು 18 ಜನ ಸದಸ್ಯರಲ್ಲಿ ಒರ್ವ ಸದಸ್ಯ ಮೃತ ಪಟ್ಟಿರುವ ಹಿನ್ನಲೆಯಲ್ಲಿ 17 ಜನ ಮಾತ್ರ ಸದಸ್ಯರು ಚುನಾವಣೆ ಪ್ರಕ್ರೀಯಲ್ಲಿ ಭಾಗವಹಿಸಿದ್ದರು ಇದರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಕುಂತಲಾ ಅಯ್ಯಪ್ಪ ಕಲ್ಲೋಡ್ಡಿ ಮತ್ತು ಆದಯ್ಯಹಿರೇ ಅಮರಯ್ಯ ಹಿರೇಮಠ ಮಧ್ಯ ಚುನಾವಣೆ ಜರುಗೀತು 17 ಮತಗಳಲ್ಲಿ 2 ಮತಗಳು ಕುಲಗೆಟ್ಟಿವೆ


ಅಧ್ಯಕ್ಷ ಸ್ಥಾನಕ್ಕೆ ಆದಯ್ಯ ಹಿರೇಮಠ ಮತ್ತು ಶಕುಂತಲಾ ಕಲ್ಲೋಡ್ಡಿ ಮಧ್ಯ ಚುನಾವಣೆ ಜರುಗೀತು ಆದಯ್ಯ ಹಿರೇಮಠಗೆ 6 ಮತಗಳನ್ನ ಪಡೆದು ಪರಾಭವ ಗೊಂಡಿದ್ದಾರೆ ,ಶಕುಂತಲಾ ಅಯ್ಯಪ್ಪ ಕಲ್ಲೋಡ್ಡಿಗೆ 9 ಮತಗಳನ್ನ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ

ಅದೇ ರೀತಿಯಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಗಂಗಮ್ಮ ವೆಂಕಟೇಶ ಗೌಡ್ರ 6 ಮತಗಳನ್ನ ಪಡೆದು ಪರಾಭವಗೊಂಡಿದ್ದಾರೆ ,ಶಂಕ್ರಮ್ಮ ಮೌನೇಶ 9 ಮತಗಳನ್ನ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಹಾಗೂ ತಾಲೂಕ ಪಂಚಾಯತ ಸಹಾಯಕ ನಿರ್ಧೇಶಕ ಕುಮಾರಿ ಗೀತಾ ಘೋಷಿಸಿದರು.

ಮುಖಂಡರುಗಳಾದ ನಾಗನಗೌಡ ಜಾಲಿಹಾಳ,

ಶರಣಪ್ಪ ಯಡ್ಡೋಣಿ,ಶರಣಪ್ಪ ಹೋಸ್ಕೇರಾ,ತಿಪ್ಪಣ್ಣ ಹೊಸ್ಮನಿ,ಅಯ್ಯಪ್ಪ ಗುಳೇದ,ಮುದಕಪ್ಪ ವಂದಾಲಿ,

ಮಂಜುನಾಥ ರೊಟ್ಟಿ,ಹಸನ್ ಸಾಬ ಮೇಲ್ಗಡೆ.ಬಸವನಗೌಡ ಮಾಲಿ ಪಾಟೀಲ್,ಖಾಜಾಸಾಬ ಶೆಕ್ಕೇರ,ಬ‌ಸವರಾಜ ತಳವಾರ ,ಬಸವರಾಜ ಹುಗ್ಗಿ,ಶರಣಪ್ಪ ಗುಡೂರು ಸೇರಿದಂತೆ ಮತ್ತೀತರರು ಉಪಸ್ಥೀತರಿದ್ದರು,

Leave A Reply

Your email address will not be published.