deshadoothanews

ಟಣಕನಕಲ್ : ಆದರ್ಶ ವಿದ್ಯಾಲಯದ ಖಾಲಿ ಸ್ಥಾನಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಡಿ ಡಿ ನ್ಯೂಸ್. ಕೊಪ್ಪಳ

0
ಡಿ ಡಿ ನ್ಯೂಸ್. ಕೊಪ್ಪಳ :
 ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದ ಸರಕಾರಿ ಆದರ್ಶ ವಿದ್ಯಾಲಯದಲ್ಲಿ 2023-24ನೇ ಸಾಲಿನ 7ನೇ ತರಗತಿ 8ನೇ ತರಗತಿ ಮತ್ತು 9ನೇ ತರಗತಿಯಲ್ಲಿ ಖಾಲಿ ಇರುವ ಸ್ಥಾನಗಳ ದಾಖಲಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಟಣಕನಕಲ್ ಆದರ್ಶ ವಿದ್ಯಾಲಯದಲ್ಲಿ 7ನೇ ತರಗತಿಯಲ್ಲಿ ಆರು ಸೀಟುಗಳು, 8ನೇ ತರಗತಿಯಲ್ಲಿ ಒಂದು ಸೀಟು ಹಾಗೂ 9ನೇ ತರಗತಿಯಲ್ಲಿ ಹತ್ತು ಸೀಟುಗಳು ಖಾಲಿ ಇದ್ದು, ಈ ಸ್ಥಾನಗಳನ್ನು ಸಂಬಂಧಿಸಿದ ಖಾಲಿ ಸೀಟಿನ ಮೀಸಲಾತಿಯನ್ವಯ ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಬೇಕಾಗಿದೆ. ಪ್ರವೇಶ ಪರೀಕ್ಷೆಯು ವಸ್ತು ನಿಷ್ಠ ಮಾದರಿಯ 100 ಅಂಕಗಳಿಗೆ ನಡೆಯುತ್ತದೆ.
ಅರ್ಜಿಗಳು ಟಣಕನಕಲ್ ಆದರ್ಶ ವಿದ್ಯಾಲಯದಲ್ಲಿ ಲಭ್ಯವಿದ್ದು, ಆಸಕ್ತ ಮತ್ತು ಅರ್ಹರು ಜುಲೈ 07ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯು ಜುಲೈ 15 ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಈ ವಿದ್ಯಾಲಯದಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಮುಖ್ಯೋಪಾಧ್ಯಾಯರು, ಆದರ್ಶ ವಿದ್ಯಾಲಯ ಟಣಕನಕಲ್ ದೂ.ಸಂ: 9449761765 ಹಾಗೂ 9916703201 ಗೆ ಸಂಪರ್ಕಿಸುವಂತೆ ಟಣಕನಕಲ್ ಆದರ್ಶ ವಿದ್ಯಾಲಯದ ಪ್ರಕಟಣೆ ತಿಳಿಸಿದೆ.
Leave A Reply

Your email address will not be published.