deshadoothanews

ಜನಸಂಖ್ಯೆ ನಿಯಂತ್ರಿಸಲು ಪ್ರತಿಯೊಬ್ಬರ ಜಾಗೃತಿ ಅತ್ಯವಶ್ಯಕ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕೊಪ್ಪಳ :

ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯಲಬುರ್ಗಾ ತಾಲೂಕಾ ಆರೋಗಾಧಿಕಾರಿಗಳ ಕಾರ್ಯಾಲಯ ಹಾಗೂ ಮಂಗಳೂರು ಸಮುದಾಯ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಜೂನ್ 27ರಂದು ಮಂಗಳೂರು ಗ್ರಾಮದ ಮಂಗಳೇಶ್ವರ ಸಮುದಾಯ ಭವನದ ಹತ್ತಿರ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ “ಸಮುದಾಯ ಜಾಗೃತಿ ಸ್ಥಿರಿಕರಣ ಪಾಕ್ಷಿಕ” ಕಾರ್ಯಕ್ರಮ ನಡೆಯಿತು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ರವೀಂದ್ರನಾಥ್ ಎಂ.ಹೆಚ್ ಅವರು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡು ಜನಸಂಖ್ಯೆ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಈ ಮೊದಲು ವಿಶ್ವದಲ್ಲಿ ಜನಸಂಖ್ಯೆಯಲ್ಲಿ ಭಾರತ 02 ಸ್ಥಾನ ಪಡೆದಿತ್ತು, ಆದರೆ ಈಗ ಸದ್ಯ ಭಾರತ ಜನಸಂಖ್ಯೆಯಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿದೆ. ಜನಸಂಖ್ಯೆ ಸ್ಪೋಟದಿಂದ ದೇಶದಲ್ಲಿ ಅನೇಕ ಸಮಸ್ಯೆಗಳು ಉದ್ಬವಿಸುತ್ತವೆ. ಆದ್ದರಿಂದ ಜನಸಂಖ್ಯೆ ನಿಯಂತ್ರಿಸುವಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಯು ಜಾಗೃತರಾಗಬೇಕು. ಜನಸಂಖ್ಯೆ ಹೆಚ್ಚಳಕ್ಕೆ ಬಾಲ್ಯವಿವಾಹ, ಅನಕ್ಷರತೆ, ಅಜ್ಞಾನ, ಮೂಡನಂಬಿಕೆ, ಗಂಡು ಮಗುವಿನ ಹಂಬಲ ಹೀಗೆ ಹಲವಾರು ಕಾರಣಗಳಿಂದ ಜನಸಂಖ್ಯೆಯು ನಾಗಲೋಟದಿಂದ ಬೇಳೆಯುತ್ತಿದೆ. ಮಕ್ಕಳ ಜನನದ ನಡುವೆ ಕನಿಷ್ಠ 3ವರ್ಷ ಅಂತರ ಕಾಪಾಡಬೇಕು. ಈ ಅಂತರ ಕಾಪಾಡಲು ಆರೋಗ್ಯ ಇಲಾಖೆಯಲ್ಲಿ ಹಲವಾರು ಹೊಸ ಹೊಸ ಕುಟುಂಬ ಕಲ್ಯಾಣ ಕಾರ್ಯಕ್ರಮದ ಮಹಿಳೆಯರಿಗೆ ಮತ್ತು ಪುರುಷರಿಗೆ ತಾತ್ಕಾಲಿಕ ವಿಧಾನಗಳಿವೆ. ಅವುಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಸಮೃದ್ದ ಕುಟುಂಬವನ್ನಾಗಿ ಮಾಡಬಹುದು. ಈ ವಿಧಾನಗಳ ಮಾಹಿತಿಯನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಉಪಕೇಂದ್ರಗಳಲ್ಲಿ, ಆರೋಗ್ಯ ಸಿಬ್ಬಂದಿ ಅಥವಾ ಆಶಾ ಕಾರ್ಯಕರ್ತೆಯರ ಹತ್ತಿರ ಉಚಿತವಾಗಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

 

ಮಂಗಳೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ ಸಿ.ಎಂ.ಹಿರೇಮಠ ಅವರು ಮಾತನಾಡಿ, ತಾಯಿ-ಶಿಶು ಮರಣ ತಡೆಗಟ್ಟಲು ಕುಟುಂಬ ಕಲ್ಯಾಣ ಕಾರ್ಯಕ್ರಮದ ವಿಧಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಮೇಲಿಂದ ಮೇಲೆ ಹೆರಿಗೆಯಾಗುವುದರಿಂದ ಮಹಿಳೆಯರಲ್ಲಿ ರಕ್ತಹೀನತೆ, ಗರ್ಭಪಾತ ಇನ್ನಿತರ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ 01ನೇ ಹೆರಿಗೆಯಾದ ಪ್ರತಿಯೊಬ್ಬ ಭಾಣಂತಿಯರು ಯಾವುದಾದರು ಒಂದು ತಾತ್ಕಾಲಿಕ ವಿಧಾನವನ್ನು ಅಳವಡಿಸಿಕೊಂಡು ತಾಯಿ ಮಗುವಿನ ಆರೋಗ್ಯ ಕಾಪಾಡಬಹುದು. ಎಲ್ಲಾ ಗರ್ಭಿಣಿ ಸ್ತ್ರೀಯರು ರಕ್ತ ಹೀನತೆ ತಡೆಗಟ್ಟಲು 180 ಕಬ್ಬಿಣಾಂಶ ಮಾತ್ರೆ, ಪೌಷ್ಠಿಕ ಆಹಾರ ಸೇವನೆ, ನಿರಂತರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಕೊಂಡು ತಾಯಿ ಮಗು ಸುರಕ್ಷೀತವಾಗಿರುಂತೆ ನೋಡಿಕೊಳ್ಳಬೇಕು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ., ಗ್ರಾ.ಪಂ ಅಧ್ಯಕ್ಷರಾದ ಅನ್ನಪೂರ್ಣಮ್ಮ, ಸದಸ್ಯರಾದ ಮಂಗಳೇಶ ಬಂಡಿ, ಶರಣಪ್ಪ ಬೂದಗುಂಪಾ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ವೀರಬದ್ರಪ್ಪ, ಸಾಹೇಬಣ್ಣ, ಅರವೀಂದ, ಗೀತಾ, ಕುಸಮಾ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave A Reply

Your email address will not be published.