deshadoothanews

ಜಿಲ್ಲಾ ಕಾರಾಗೃಹದಲ್ಲಿ ಯೋಗ ದಿನಾಚರಣೆ

ಡಿ ಡಿ ನ್ಯೂಸ್. ಕೊಪ್ಪಳ

0
ಡಿ ಡಿ ನ್ಯೂಸ್. ಕೊಪ್ಪಳ : ಕಾರಾಗೃಹ ಮತ್ತು ಸುಧಾರಣಾ ಸೇವೆಯ ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ 9ನೇ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಜೂನ್ 21ರಂದು ಆಚರಿಸಲಾಯಿತು.
ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬನ್ನಿಕಟ್ಟಿ ಹನುಮಂತಪ್ಪ ಆರ್ ಅವರು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಬಂದಿಗಳಿದ ಸತತ 8 ತಿಂಗಳುಗಳಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕೊಪ್ಪಳ ಹಾಗೂ ಕಾರಾಗೃಹ ಸಿಬ್ಬಂದಿಗಳೊಂದಿಗೆ ಯೋಗ ತರಭೇತಿಯನ್ನು ನೀಡುತ್ತಿರುವುದು ಮತ್ತು ಬಂದಿಗಳು ಯೋಗಾಭ್ಯಾಸ ಮಾಡುತ್ತಿರುವುದು ಸಂತಸದ ವಿಷಯವಾಗಿದೆ. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಅಥವಾ ಉದ್ರೇಕಕ್ಕೆ ಒಳಗಾಗಿ ಆದ ತಪ್ಪಿನಿಂದ ಕಾರಾಗೃಹದ ನಿವಾಸಿಗಳಾಗಿದ್ದು, ಯೋಗ, ಧ್ಯಾನಗಳಿಂದ ತಮ್ಮನ್ನು ತಾವು ಪರಿವರ್ತನೆ ಮಾಡಿಕೊಂಡು, ಮುಂದೆ ಈ ರೀತಿಯಾಗದಂತೆ ಶಾಶ್ವತವಾಗಿ, ಸಮಾಜಮುಖಿಯಾಗಿ ಒಳ್ಳೆಯ ನಾಗರಿಕರಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ, ಜೈನ ಅಧೀಕ್ಷಕರಾದ ವಿ.ಡಿ.ಚವ್ಹಾಣ್ ಹಾಗೂ ನ್ಯಾಯಾಲಯದ ಮತ್ತು ಕಾರಾಗೃಹದ ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave A Reply

Your email address will not be published.