deshadoothanews

*ಮತದಾರರ ಋಣ ತೀರಿಸುವೆ ತಿಮ್ಮಾಪುರ ಗ್ರಾಮದಲ್ಲಿ ಶಾಸಕ ಜಿ ಎಸ್ ಪಾಟೀಲ್ ಹೇಳಿಕೆ*

ಡಿ ಡಿ ನ್ಯೂಸ್. ಗದಗ

0

ಡಿ ಡಿ ನ್ಯೂಸ್. ರೋಣ : ಅಭಿವೃದ್ಧಿ ಯೋಜನೆಗಳ ಮೂಲಕ ಮತದಾರರ ಋಣ ತೀರಿಸುವೆ. ರೋಣ ಮತಕ್ಷೇತ್ರದ ಎಲ್ಲಾ ಗ್ರಾಮೀಣ ಪ್ರದೇಶದ ಸರ್ವಾಂಗಣ ಅಭಿವೃದ್ಧಿಗೆ ಆದ್ಯತೆ ನೀಡುವೆ ಎಂದು ಶಾಸಕ ಜಿ ಎಸ್ ಪಾಟೀಲರು ಹೇಳಿದರು.

ಗದಗ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಮತದಾರ ಪ್ರಭುಗಳಿಗೆ ಅಭಿನಂದನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ರೋಣ ಮತ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕನಾಗಲು ಕಾರಣರಾದ ಮತದಾರ ಪ್ರಭುಗಳಿಗೆ ಸದಾ ಚಿರಋಣಿಯಾಗಿರುವೆ.
ಜನರ ಬೇಕು ಬೇಡಿಕೆಗಳನ್ನು ಐದು ವರ್ಷದ ಆಡಳಿತ ಅವಧಿಯಲ್ಲಿ ಕಾಲಮಿತಿಯೊಳಗೆ ಅಪೂರ್ಣವಾಗಿರುವ ರಸ್ತೆಗಳು ಸಮುದಾಯ ಭವನಗಳು ಹಾಗೂ ಜನತೆಗೆ ಮೂಲ ಸೌಕರ್ಯ ಒದಗಿಸುವ ಸರ್ಕಾರದ ಯೋಜನೆಯ ಫಲವನ್ನು ಜನರಿಗೆ ದೊರೆಯುವಂತೆ ಶ್ರಮವಹಿಸುತ್ತೇನೆ ಎಂದರು.

ಕಾಂಗ್ರೆಸ್ ಸರ್ಕಾರವು ಚುನಾವಣಾ ಪೂರ್ವದಲ್ಲಿ ಜನರಿಗೆ ಐದು ಗ್ಯಾರಂಟಿ ಯೋಜನೆಗಳ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

ಈಗಾಗಲೇ   ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವ ಕಾಂಗ್ರೆಸ್ ಸರ್ಕಾರ
ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆ ಮೂಲಕ ಬಸ್ ಸಂಚಾರದಲ್ಲಿ ಉಚಿತವಾಗಿ ಓಡಾಡಲು ಅವಕಾಶ ನೀಡಲಾಗಿದೆ ಹಾಗೂ  ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲು ಅರ್ಜಿ ಸ್ವೀಕಾರ ಪ್ರಾರಂಭವಾಗಿದ್ದು ಎಲ್ಲಾ ಮತದಾರರು ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಪಕ್ಷ ಎಂತಹ ಕಠಿಣ ಪರಿಸ್ಥಿತಿಯಲ್ಲಿ ಮೇಲೆದ್ದು ಬರುವ ಪಕ್ಷವಾಗಿದೆ. ನನ್ನ ಗೆಲುವಿಗೆ ಹಗಲಿರುಳು ಶ್ರಮಿಸಿದ ಮತದಾರರಿಗೆ ಕಾರ್ಯಕರ್ತರಿಗೆ ಪಕ್ಷದ ಮುಖಂಡರಿಗೆ ನನ್ನ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಅವರು ಮಾತನಾಡಿ ಚುನಾವಣೆಯಲ್ಲಿ ತಿಮ್ಮಾಪುರ ಗ್ರಾಮದಿಂದ ಹೆಚ್ಚಿನ ಮತಗಳನ್ನು ನೀಡಿ ಬೆಂಬಲಿಸಿದೆ  ನಮ್ಮ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಮತದಾರರ ಋಣ ತೀರಿಸಬೇಕು ಎಂದು ಹೇಳಿದರು.

ಪಿಯುಸಿ ನೀಟ್ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 1500 ನೇ ರಾಂಕ್ ಪಡೆದ ಕುಮಾರಿ ಸೌಮ್ಯ ರಮೇಶ  ಎಮ್ಮಿ ವಿದ್ಯಾರ್ಥಿನಿಯನ್ನು ಶಾಸಕರು ಮತ್ತು ಎಕ್ಸೆಲ್ ನಿಟ್ ಅಕಾಡೆಮಿ ಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶರಣಪ್ಪ ಜೋಗಿನ ಬಾಳಪ್ಪ ಗಂಗರಾತ್ರಿ ಹುಚ್ಚೀರಪ್ಪ ಜೋಗಿನ ಸಂಗಪ್ಪ ಮಳ್ಳಿ ಯಲ್ಲಪ್ಪ ಹಾಗಲದ ನೂರಂದಪ್ಪ ಇದ್ಲಿ ನೀಲಪ್ಪ ಗಾಜಿ ಸುರೇಶ ಬಿಸನಳ್ಳಿ, ಭೀಮಪ್ಪ ರಾಮಜಿ, ರಾಮಪ್ಪ ಹಚ್ಚಪ್ಪನವರ, ವಿರೂಪಾಕ್ಷಪ್ಪ ಸೋಮಪುರ ಮಹಾಂತೇಶ ಹಂಚಿನಾಳ ಬಸವರಾಜ ಯಲಬುರ್ಗಿ ಹನುಮವ್ವ ತಳವಾರ ಅಕ್ಕಮ್ಮ ಹಿರೇಬಸಣ್ಣವರ, ಹನುಮವ್ವ ಕೂಪ್ಪದ ಲಕ್ಷ್ಮೀ ಗಾಜಿ ಗ್ರಾಮ ಪಂಚಾಯಿತಿ ಪಿಡಿಒ ಶ್ರೀ ವಿದ್ಯಾ ಕೆ ಹಾಗೂ ನೂರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು

Leave A Reply

Your email address will not be published.