deshadoothanews

ಮುಂಗಾರು ಹಂಗಾಮಿನ ಬೆಳೆವಿಮೆ ನೋಂದಾಯಿಸಲು ಸೂಚನೆ

ಡಿ ಡಿ ನ್ಯೂಸ್. ಕೊಪ್ಪಳ

0
ಡಿ ಡಿ ನ್ಯೂಸ್. ಕೊಪ್ಪಳ : ಪ್ರಸಕ್ತ ಸಾಲಿನ ಬೆಳೆವಿಮೆ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆವಿಮೆ ನೋಂದಾಯಿಸುವಂತೆ ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಟಿ.ಎಸ್ ರುದ್ರೇಶಪ್ಪ ಅವರು ತಿಳಿಸಿದ್ದಾರೆ.
2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಯೋಜನೆ ಚಾಲ್ತಿಯಲ್ಲಿದ್ದು, ಬೆಳೆ ವಿಮೆ ಯೋಜನೆಯಡಿ ನೀರಾವರಿ ಹತ್ತಿ ಮತ್ತು ಮಳೆಯಾಶ್ರೀತ ಹೆಸರು ಬೆಳೆಗಳಿಗೆ ಬೆಳೆವಿಮೆ ನೋಂದಾಯಿಸಲು ಜುಲೈ 15 ಹಾಗೂ ಇತರೆ ಎಲ್ಲಾ ಅಧಿಸೂಚಿತ ಬೆಳೆಗಳಿಗೆ ನೋಂದಾಯಿಸಲು ಜುಲೈ 31 ಕೊನೆಯ ದಿನವಾಗಿದೆ. ಜಿಲ್ಲೆಯ ಎಲ್ಲಾ ರೈತ ಭಾಂಧವರು ಕೂಡಲೇ ಬೆಳೆವಿಮೆ ನೋಂದಾಯಿಸಿ, ಯೋಜನೆ ಲಾಭ ಪಡೆಯಬೇಕು.
ರೈತರು ಬೆಳೆ ವಿಮೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯಲು ಕೊಪ್ಪಳ ಜಿಲ್ಲೆಗೆ ಆಯ್ಕೆಯಾದ ಪ್ಯೂಚರ್ ಜನರಲಿ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳನ್ನು ಸಂಪರ್ಕಿಸಬಹುದಾಗಿದೆ. ಈ ಕಂಪನಿಯ ಪ್ರತಿನಿಧಿಗಳು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಲ್ಲಿ ಲಭ್ಯವಿದ್ದು, ರೈತರಿಗೆ ಬೆಳೆವಿಮೆ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾರೆ.
ತಾಲೂಕವಾರು ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳ ವಿವರ: ರೈತರು ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳಾದ ಕೊಪ್ಪಳ ತಾಲೂಕಿನ ಸತೀಶ ಸುರೊಜಿ ಮೊ.ಸಂ: 8861468340, ಕುಷ್ಟಗಿಯ ಸುನೀಲ್ ಇಟಿನಿ ಮೊ.ಸಂ: 7996453241, ಯಲಬುರ್ಗಾದ ಸಂಗಪ್ಪ ಬೆಣ್ಣಿ ಮೊ.ಸಂ: 9964397577, ಗಂಗಾವತಿಯ ವಿಶಾಲ್ ಹೆಚ್ ಮೊ.ಸಂ: 9008078851, ಕಾರಟಗಿಯ ಮಹೇಂದ್ರ ಎಸ್ ಮೊ.ಸಂ: 9590642324, ಕನಕಗಿರಿಯ ಚಂದ್ರಶೇಖರ ಮೊ.ಸಂ: 9611682356 ಹಾಗೂ ಕುಕನೂರು ತಾಲೂಕಿನ ಕಳಕಪ್ಪ ಮೊ.ಸಂ: 8497074017, ಇವರನ್ನು ದೂರವಾಣಿ ಮೂಲಕ ಅಥವಾ ಖುದ್ದಾಗಿ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.
ಪ್ಯೂಚರ್ ಜನರಲಿ ಇನ್ಸೂರೇನ್ಸ ಕಂಪನಿಯ ಕೊಪ್ಪಳ ಜಿಲ್ಲೆಯ ಪ್ರಧಾನ ಕಛೇರಿಯು ಬ್ಯಾಂಕ್ ಆಫ್ ಬರೋಡಾ ಪಕ್ಕದಲ್ಲಿ, ನಾಸವಾಲೆ ಬಿಲ್ಡಿಂಗ್, 1ನೇ ಮಹಡಿ, ಕೊಪ್ಪಳ. ಈ ವಿಳಾಸದಲ್ಲಿದ್ದು, ಜಿಲ್ಲೆಯ ರೈತ ಬಾಂಧವರು ನೇರವಾಗಿ ಸಹಿತ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
Leave A Reply

Your email address will not be published.