deshadoothanews

ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಪ್ರವಾಸ

ಡಿ ಡಿ ನ್ಯೂಸ್. ಕೊಪ್ಪಳ

0
ಡಿ ಡಿ ನ್ಯೂಸ್. ಕೊಪ್ಪಳ : ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಜೂನ್ 23ರಿಂದ ಜೂನ್ 25ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಜೂನ್ 23ರಂದು ಕಾರಟಗಿಯಿಂದ ನಿರ್ಗಮಿಸಿ, ಮಧ್ಯಾಹ್ನ12ಕ್ಕೆ ತಾವರಗೇರಾದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, 12-15ಕ್ಕೆ ಮುದಗಲ್-ಗೆ ತೆರಳುವರು. ಅಲ್ಲಿಂದ ನಿರ್ಗಮಿಸಿ ಮಧ್ಯಾಹ್ನ 2.45ಕ್ಕೆ ಕಾರಟಗಿಗೆ ಆಗಮಿಸಿ, ಸಾರ್ವಜನಿಕರ ಭೇಟಿ ಮತ್ತು ಕುಂದುಕೊರತೆಗಳ ವಿಚಾರಣೆ ಮಾಡಿ, ಅಂದು ಕಾರಟಗಿಯಲ್ಲಿ ವಾಸ್ತವ್ಯ ಮಾಡುವರು.
ಜೂನ್ 24ರಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 01.30ರವರೆಗೆ ಕಾರಟಗಿ ತಾಲೂಕಿನ ಬಸವಣ್ಣಕ್ಯಾಂಪ್, ಪನ್ನಾಪುರ, ಬೇವಿನಾಳ ಹಾಗೂ ನಾಗನಕಲ್ ಗ್ರಾಮಗಳಲ್ಲಿ ಮತ್ತು 3.30ರಿಂದ ಸಂಜೆ 5.30ರವರೆಗೆ ಮೈಲಾಪುರ, ಗುಡೂರು ಹಾಗೂ ಸೋಮನಾಳ ಗ್ರಾಮಗಳಲ್ಲಿ ಹಾಗೂ ಸಂಜೆ 6.30ಕ್ಕೆ ಕಾರಟಯಲ್ಲಿ ಸಾರ್ವಜನಿಕರ ಭೇಟಿ ಮತ್ತು ಕುಂದುಕೊರತೆಗಳ ವಿಚಾರಣೆ ಬಳಿಕ ವಾಸ್ತವ್ಯ ಮಾಡುವರು.
ಜೂನ್ 25ರಂದು ಬೆಳಿಗ್ಗೆ 10.45ರಿಂದ ಸಂಜೆ 04ರವರೆಗೆ ಕಾರಟಗಿ ತಾಲೂಕಿನ ಬೂದಗುಂಪಾ, ಹಾಲಸಮುದ್ರ, ತಿಮ್ಮಾಪೂರ, ನಂದಿಹಳ್ಳಿ, ಕಕ್ಕರಗೋಳ, ಶಾಲಿಗನೂರ, ಬೆನ್ನೂರು ಗ್ರಾಮಗಳಲ್ಲಿ ಸಾರ್ವಜನಿಕರ ಭೇಟಿ ಮತ್ತು ಕುಂದುಕೊರತೆಗಳ ವಿಚಾರಣೆ ಮಾಡುವರು. ಬಳಿಕ ಸಂಜೆ 5.30ಕ್ಕೆ ಕಾರಟಗಿಗೆ ಆಗಮಿಸಿ, ಅಂದು ಸಂಜೆ 6ಗಂಟೆಗೆ ಕಾರಟಗಿಯಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಆರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave A Reply

Your email address will not be published.