deshadoothanews

“ಬಸಾಪುರ ಕೈಗಾರಿಕಾ ವಸಾಹತು” ಶೀಘ್ರ ಸರಿಪಡಿಸಿ ಹಂಚಿಕೆ ಪೂರ್ಣಗೊಳಿಸಲು ಒತ್ತಾಯ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕೊಪ್ಪಳ : ತಾಲೂಕಿನ ಬಸಾಪೂರ ಬಳಿಯ ಕೈಗಾರಿಕಾ ವಸಾಹತುವನ್ನು ಕೂಡಲೇ ನ್ಯಾಯಾಲಯದಿಂದ ಮುಕ್ತಗೊಳಿಸಿ ಫಲಾನುಭವಿಗಳ ಹೆಸರಿಗೆ ನೀಡಿ ಅಭಿವೃದ್ಧಿಪೂರ್ಣಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ರವರಿಗೆ ಮತ್ತು ಅವರ ಮೂಲಕ ಮುಖ್ಯಮಂತ್ರಿಗಳಿಗೆ ಅದರ ಫಲಾನುಭವಿ ಸದಸ್ಯರು ಮನವಿ ಸಲ್ಲಿಸಿದರು.

ಸಮಸ್ಯೆ ಕುರಿತು ಬಸಾಪೂರ ಕೈಗಾರಿಕಾ ವಸಾಹತು ಫಲಾನುಭವಿ ಮಂಜುನಾಥ ಜಿ. ಗೊಂಡಬಾಳ ಅವರು ಮಾತನಾಡಿ, ತಾಲೂಕಿನ ಗಿಣಗೇರಿ ಹಾಲವರ್ತಿ ಸೇರಿ ಸುಮಾರು ಸಾವಿರಾರು ಎಕರೆ ಭೂಪ್ರದೇಶವನ್ನು ಆಕ್ರಮಿಸಿಕೊಂಡು ನಿರ್ಮಾಣವಾಗುತ್ತಿರುವ ಎಮ್. ಎಸ್.ಪಿ.ಎಲ್. ಐರನ್ ಕಂಪನಿಯಿದ ಸ್ಥಳಿಯರಿಗೆ ಯಾವುದೇ ಪ್ರಯೋಜನವಾಗುವದಿಲ್ಲ ಮೇಲಾಗಿ ಜಿಲ್ಲಾ ಪ್ರದೇಶದ ಸಮೀಪವೇ ಅದಕ್ಕೆ ಅಂದಿನ ಅಧಿಕಾರಿಗಳು ದುರಾಸೆಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿಕೊಟ್ಟಿರುವದು ಲಕ್ಷಾಂತರ ಜನರನ್ನು ಕೊಲ್ಲುವ ತಂತ್ರವಾಗಿದೆ.

ಜಿಲ್ಲಾ ಕೇಂದ್ರದಿದ ಕೂಗಳತೆ ದೂರದಲ್ಲಿಯೇ ಬೃಹತ್ ಕೈಗಾರಿಕೆಗಳಿಗೆ ಭೂಮಿ ನೀಡುವದು ದೊಡ್ಡ ಮೂರ್ಖತನ, ಇಲ್ಲಿ ಬಂದ ಪರದೇಶದ ಅಧಿಕಾರಿಗಳು ತಮಗೆ ಸಿಗುವ ಮಾಮೂಲಿನ ಆಸೆಗೆ ಇಲ್ಲಿನ ಜನರನ್ನು ಕೊಲ್ಲುತ್ತಿದ್ದಾರೆ, ಅಂತಹ ಪ್ರಮುಖ ಕೈಗಾರಿಕೆಯಲ್ಲಿ ಎಮ್.ಎಸ್.ಪಿ.ಎಲ್ ಸಹ ಒಂದಾಗಿದ್ದು ಅದಕ್ಕೆ ಹನ್ನೊಂದು ನೂರು ಎಕರೆ ಭೂಮಿ ಕೊಟ್ಟಿದ್ದಾರೆ. ಆದರೆ ಅತಿಯಾದ ದುರಾಸೆಯಿಂದ ಕೂಡಿರುವ ಈ ಕಂಪನಿ ಸರಕಾರದ ಕೆ.ಎಸ್.ಎಸ್.ಐ.ಡಿ.ಸಿ. ಮೂಲಕ ಸುಮಾರು ೧೦೪ ಎಕರೆ ಭೂಮಿಯಲ್ಲಿ ಅದರಲ್ಲಿ ಸುಮಾರು ೫೦೦ ಜನ ಸಣ್ಣ ಕೈಗಾರಿಗೆಗಳಿಗೆ ಅನುಕೂಲ ಕಲ್ಪಿಸುವ “ಬಸಾಪುರ ಕೈಗಾರಿಕಾ ವಸಾಹತು” ನಿರ್ಮಾಣ ಮಾಡಿದ್ದು, ಅದರ ಅಭಿವೃದ್ಧಿಗೂ ಸಾಕಷ್ಟು ಕೋಟಿ ಹಣ ಖರ್ಚು ಮಾಡಿದ್ದಾರೆ.

ಈ ಮದ್ಯೆ ಎಮ್.ಎಸ್.ಪಿ.ಎಲ್. ಕಂಪನಿ ವಸಾಹತು ನಿರ್ಮಿಸಿದ ಭೂಮಿ ಕೊಡುವಂತೆ ಅದರ ಮೇಲೆ ಕೇಸ್ ಹಾಕಿ ಕಳೆದ ಒಂದೂವರೆ ವರ್ಷದಿಂದ ಅದನ್ನು ಹಾಳುಕೊಂಪೆಯಾಗಿಸಿದೆ. ಸಾಕಷ್ಟು ನಷ್ಟ ಸರಕಾರಕ್ಕೂ ಮತ್ತು ಅಲ್ಲಿನ ನಿವೇಶನಕ್ಕೆ ಹಣ ಕಟ್ಟಿದ ಅನೇಕು ಯುವ ಬಡ ಮಧ್ಯಮ ವರ್ಗದ ಜನರಿಗೂ ಆಗಿದೆ. ಆದ್ದರಿಂದ ಅದಕ್ಕೆ ಮಾಡಿದ ಖರ್ಚನ್ನು ಕಂಪನಿಯಿದಲೇ ಭರಿಸಿ ಕೂಡಲೇ ಅದಕ್ಕೆ ನೀಡಿದ ಭೂಮಿಯನ್ನು ಸಹ ಮರಳಿ ಪಡೆಯಬೇಕು. ಕೇವಲ ೧೦೪ ಎಕರೆಯಲ್ಲಿ ೨೦೦೦ ಜನರ ಬದುಕು ಹಸನಾಗುತ್ತದೆ ಆದರೆ ೧೧೦೦ ಎಕರೆ ಭೂಮಿ ಪಡೆದ ಎಮ್.ಎಸ್.ಪಿ.ಎಲ್ ಕಂಪನಿ ಸಹ ಅಷ್ಟು ಉದ್ಯೋಗ ಕೊಡಲು ಆಗಲ್ಲ. ಅಲ್ಲದೇ ಆ ಕಾರ್ಖಾನೆ ಇಲ್ಲಿನ ಪರಿಸರ ಹಾಳು ಮಾಡಿದೆ, ಜಿಲ್ಲೆಯಲ್ಲಿ ಕ್ಷಯರೋಗ ಮತ್ತು ಉಸಿರಾಟದ ಕಾಯಿಲೆ ಹೆಚ್ಚಾಗಲು ಇಲ್ಲಿನ ಕಾರ್ಖಾನೆಗಳೇ ಕಾರಣ ಎಂಬುದು ಸತ್ಯ ಆದ್ದರಿಂದ ಸರಕಾರ ಕೂಡಲೇ ಕ್ರಮ ತೆಗೆದುಕೊಂಡು ಅದು ಹಾಕಿದ ಕೇಸ್ ಮರಳಿ ಪಡೆಯಬೇಕು. ಈಗಾಗಲೇ ಅನೇಕರು ಹಣ ತುಂಬಿದ್ದು ಅದಕ್ಕೆ ಪತ್ರ ವ್ಯವಹಾರ ಸಹ ಆಗಿವೆ, ಹಿಂದಿನ ಸಚಿವ ಮುರಗೇಶ ನಿರಾಣಿ ಅವರಿಗೆ ಸಮಸ್ಯೆ ಮನವರಿಕೆ ಮಾಡಲಾಗಿತ್ತು ಆದರೆ ಅವರು ಅದಕ್ಕೆ ಸ್ಪಂದಿಸಲಿಲ್ಲ. ಈಗ ಬಂದಿರುವ ಸರಕಾರವಾದರೂ ಯುವ ಸ್ಥಳಿಯ ಉದ್ಯಮಿಗಳಿಗೆ ಅವಕಾಶ ನೀಡಬೇಕು ಮತ್ತು ತುರ್ತಾಗಿ ಕ್ರಮ ತೆಗೆದುಕೊಂಡು ವಸಾಹತು ಆರಂಭಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಶೇಖು ಎಂ. ಚವ್ಹಾಣ, ಕೆ.ಐ.ಎ.ಡಿ.ಬಿ ಯ ಗೋವಿಂದ್ ನಾಯಕ್, ಕೆ.ಎಸ್.ಎಸ್.ಐ.ಡಿ.ಸಿ. ಭೀಮೇಶ್ ಮುಂತಾದ ಅಧಿಕಾರಿಗಳಿಗೂ ಮನವಿ ಸಲ್ಲಿಸಿ ತುರ್ತು ಕ್ರಮಕ್ಕೆ ಒತ್ತಾಯಿಸಿದರು. ಜುಲೈ ೧ ರೊಳಗೆ ಸ್ಪಷ್ಟತೆ ಸಿಗದಿದ್ದರೆ ಜಿಲ್ಲಾಡಳಿತ ಭವನದ ಮುಂದೆ ಅನಿರ್ಧಿಷ್ಟ ಧರಣಿ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.

ಈ ವೇಳೆ ಶರಣಬಸವರಾಜ ಗದಗ್, ಶ್ರೀಕಾಂತ್, ವಿಶ್ವನಾಥ ಪಾಟೀಲ್, ಮುರುಗೇಶ, ಲಲಿತ್‌ಕುಮಾರ್, ಮುತ್ತು ಆರ್. ವಿ. ಪ್ರಭುದೇವ ತೆಂಗಿನಕಾಯಿ, ಗಿರಿಶಾನಂದ ಜ್ಞಾನಸುಂದರ, ನರೇಶ ನಾಗಡಾ, ಹನುಮಾನ್ ಸಿಂಗ್, ಪ್ರವೀಣ ಇತರರು ಇದ್ದರು

Leave A Reply

Your email address will not be published.