deshadoothanews

ಕೊಪ್ಪಳ ವಿವಿಧಡೆ ಅಸ್ತಮಾ ರೋಗಿಗಳಿಗೆ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರಿಗೂ ಉಚಿತ ಔಷಧಿ ವಿತರಿಸಲಾಗಿದೆ.

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕೊಪ್ಪಳ:

ತಾಲೂಕಿನ ಕುಟಗನಹಳ್ಳಿ ಗ್ರಾಮದಲ್ಲಿ ಅಸ್ತಮಾ ರೋಗಿಗಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಮೃಗಶಿರ ಮಳೆ ಕೊಡುವದರಿಂದ ದಿ. 08-06-2023 ರಂದು ಗುರುವಾರ. ರಾತ್ರಿ 11:00 ಗಂಟೆಗೆ ರೋಗಿಗಳಿಗೆ ಉಚಿತವಾಗಿ ಔಷಧಿ ನೀಡಲಾಗುತ್ತದೆ ಎಂದು ಹೇಳಿದಂತೆ ಅನೇಕ ರಾಜ್ಯಗಳಿಂದ ಬಂದ ಔಷಧಿ ಪಡೆಯಲಿಚ್ಚಿಸುವವರು ಗುರುವಾರ ಮಧ್ಯಾಹ್ನದಿಂದಲೂ ಕುಟಗನಹಳ್ಳಿಯ ಔಷಧಿ ವಿತರಿಸುವ ಸ್ಥಳದಲ್ಲಿ ಹಾಜರಿದ್ದು ಮಳೆ ಗಾಳಿಗೂ ಜಗ್ಗದೆ ಔಷಧಿಗಾಗಿ ಕಾದು ಕುಳಿತಿರುವ ದೃಶ್ಯ ಸಾಮಾನ್ಯವಾಗಿತ್ತು.

ಅನೇಕ ವರ್ಷಗಳಿಂದ ಅಶೋಕರಾವ್ ವ್ಯಾಸರಾವ್ ಕುಲಕರ್ಣಿ ಅವರು ಔಷಧವನ್ನು ಉಚಿತವಾಗಿ ವಿತರಿಸುತ್ತಾ ಬಂದಿದ್ದು. ಅಕ್ಕಪಕ್ಕದ ರಾಜ್ಯಗಳು ಎಂದು ಸಹ ಜನ ಹಗಲು ರಾತ್ರಿ ಔಷಧಿ ಪಡೆದು ಸೇವಿಸುತ್ತಾರೆ.

ಗಂಗಾವತಿಯ ದಿ!! ರಾಯಚೂರು ಶಿವಯ್ಯ ಶೆಟ್ಟಿ ಕುಟುಂಬದವರಿಂದ ಉಚಿತ ಫಲಹಾರ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕೊಪ್ಪಳ ನಗರದ ಸೋಮಶೇಖರ್ ಯಮನಪ್ಪ ಹೋದ್ಲೂರು ಆಯುರ್ವೇದಿಕ್ ಅಂಗಡಿಯಲ್ಲಿ ಉಚಿತ ಔಷಧಿ ವಿತರಣೆ.

ಮೃಗಶಿರಾ : ಈ ಮಳೆಯು ಶೋಭನಕೃತನಾಮ ಸಂವತ್ಸರ ಜೇಷ್ಠ ಬಹುಳ ಪಂಚಮಿ ಗುರುವಾರ ದಿ. ೮-೬-೨೦೨೩ ರಂದು ಘ೪೬-೨೯ ಪಳಕ್ಕೆ ಅಂದರೆ ರಾತ್ರಿ 11.22 ಮಿನಿಟಿಗೆ ಮಕರ ಲಗ್ನದಲ್ಲಿ ಪ್ರವೇಶವಾಗಿದೆ. ಗರ್ದಭವಾಹನವಾಗಿದ್ದು ಸಂಧಿಯಲ್ಲಿಳಿದು ವ್ಯಾಪಾರ ಮನೆವಾಸವಾಗಿದೆ. ಇದು ಪುರುಷ ಪುರುಷ ರವಿ, ಚಂದ್ರ ಯೋಗವಾಗಿದೆ. ಸಜಲರಾಶಿಗಳಾಗಿರುತ್ತವೆ. ರವಿ, ಚಂದ್ರ. ಗುರು ವಾತನಾಡಿಯಲ್ಲಿಯೂ, ಮಂಗಳ ಅಮೃತನಾಡಿಯಲ್ಲಿಯೂ, ಬುಧ ಚಂಡ ನಾಡಿಯಲ್ಲಿಯೂ ಗುರುವಾತನಾಡಿಯಲ್ಲಿ, ಶುಕ್ರ, ಶನಿ ಜಲನಾಡಿಯಲ್ಲಿ ಇರುವದರಿಂದ ೨, ೩ನೇ ಚರಣದಲ್ಲಿ ಖಂಡ ಮಂಡಲ ಮಳೆ ಆಗುವದು ೯-೧೧-೧೫-೧೮ ಮಳೆ ಸಂಭವ ಈ ಕ್ಯಾಲೆಂಡರ್ ಪ್ರಕಾರ ಮೃಗಾಶಿರ ಮಳೆ ಪ್ರವೇಶ ಪಡೆಯಲಿದೆ ಎಂಬ ಲೆಕ್ಕಾಚಾರ ಪರಿಗಣಿಸಲಾಗುತ್ತಿದೆ. ಹೀಗಾಗಿ ನಮ್ಮ ಕೊಪ್ಪಳ ನಗರದ ಸಾಲಾರ್ ಜಂಗ್ ರಸ್ತೆಯಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಮುಂದೆ ಇರುವ ಸೋಮಶೇಖರ್ ಯಮನಪ್ಪ ಹೊದ್ಲೂರ್ ಆಯುರ್ವೇದಿಕ್ ಗಿಡಮೂಲಿಕೆ ಔಷಧಿ ಅಂಗಡಿಯಲ್ಲಿ ದಿನಾಂಕ 8. 6. 2023 ರಂದು ಗುರುವಾರ ಬೆಳಗ್ಗೆಯಿಂದ ರಾತ್ರಿ 9:00 ಗಂಟೆವರೆಗೂ ಸುತ್ತಲಿನ ಜನ ಉಚಿತವಾಗಿ ಔಷಧಿ ಪಡೆಯುತ್ತಿದ್ದರು. ರಾತ್ರಿ 11 ಗಂಟೆ 22 ನಿಮಿಷಕ್ಕೆ ಔಷಧಿ ತೆಗೆದುಕೊಳ್ಳಲು ನೂರಾರು ಜನರಿಗೆ ನಮ್ಮ ಔಷಧಿ ಅಂಗಡಿಯಲ್ಲಿ ಉಚಿತವಾಗಿ ಪೂರೈಸಿದ್ದೇವೆ ಎಂದು ಔಷಧೀಯ ಅಂಗಡಿ ಮಾಲಕರಾದ ಸೋಮಶೇಖರ್ ಹೋದ್ಲೂರ್ ಅವರು ತಿಳಿಸಿದ್ದಾರೆ.

 

ಕೊಪ್ಪಳ : ದಮ್ಮು. ಕೆಮ್ಮಿಗೆ ಶ್ವಾಸ ರಕ್ಷಾ

ಉಚಿತ ಔಷಧಿ ವಿತರಣೆ.

ಕೊಪ್ಪಳ:. ನಗರದ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪಂಚಕರ್ಮ ಹಾಗೂ ಕಾಯಚಿಕಿತ್ಸಾ ವಿಭಾಗವು ಜೂನ್ 8 ಗುರುವಾರ ಸಂಜೆ 6.45 ಕ್ಕೆ ಮೃಗಶಿರ ನಕ್ಷತ್ರದಂದು ಕೆಮ್ಮು ದಮ್ಮಿಗೆ “ಶ್ವಾಸ ರಕ್ಷಾ” ಎಂಬ ಉಚಿತ ಔಷಧ ವಿತರಿಸಲಾಯಿತು.

ಮಳೆಗಾಲದ ಸಂದರ್ಭದಲ್ಲಿ ವಾತಾವರಣದಲ್ಲಿ ಆಗುವ ಬದಲಾವಣೆಯಿಂದ ಮುಂದೆ ಬರಬಹುದಾದ ಕೆಮ್ಮು ದಮ್ಮು ಅಸ್ತಮಾ ತಡೆಗಟ್ಟಲು ಹಾಗೂ ಇದರಿಂದ ಬಳಲುತ್ತಿರುವವರು ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆಯ ಶಿಬಿರದಲ್ಲಿ ಅನೇಕರು ಔಷಧಿಯನ್ನು ಪಡೆದರು.

Leave A Reply

Your email address will not be published.