deshadoothanews

ವಿಶ್ವ ತಂಬಾಕು ವಿರೋಧಿ ದಿನಾಚರಣೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಎಲ್ಲರ ಹೊಣೆ-ಹಳ್ಳಿಕೇರಿಮಠ

ಡಿ ಡಿ ನ್ಯೂಸ್. ಗದಗ

0

ಡಿ ಡಿ ನ್ಯೂಸ್. ಗದಗ

ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಸಾಧನೆಯೊಂದಿಗೆ ಮುನ್ನಡೆಯಬೇಕು, ಸಮಾಜಮುಖಿ ಸೇವೆಯ ಮನೋಭಾವದೊಂದಿಗೆ ಎಲ್ಲರ ಹಿತಕ್ಕಾಗಿ ಶ್ರಮ ವಹಿಸಿ ದುಡಿಯಬೇಕು ,ದುಷ್ಟ ವ್ಯಸನಗಳನ್ನು ದೂರ ಮಾಡಿ
ಆರೋಗ್ಯವಂತ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಪಣ ತೊಡಬೇಕಿದೆ ಎಂದು ಗದಗ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು ಖ್ಯಾತ ಜನಪದ ಕಲಾವಿದ ಜಂತಲಿ ಶಿರೂರಿನ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಕರೆ ನೀಡಿದರು.

ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಮುಂಡರಗಿ ವಲಯ ಘಟಕದ ವತಿಯಿಂದ ಶ್ರೀ ಜಗದ್ಗುರು ತೋಂಟದಾರ್ಯ ಐಟಿಐ ಡಂಬಳ ಮಹಾವಿದ್ಯಾಲಯದಲ್ಲಿ ಜರುಗಿದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ನಿಮಿತ್ಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ಧ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ದುಷ್ಟ ವ್ಯಸನಗಳು ನಮ್ಮ ಬದುಕನ್ನು ಚಿದ್ರಗೊಳಿಸುತ್ತವೆ ಅಸ್ತಿತ್ವ ಮರೆಸಿ ಅವಸಾನದತ್ತ ಕೊಂಡ್ಯೂಯುತ್ತವೆ ಜಾಗೃತಿಯೊಂದಿಗೆ ಬದುಕಬೇಕು, ನಮ್ಮಲ್ಲಿರುವ ಸಭಲತೆಯ ಶಕ್ತಿಯನ್ನು ಬಳಸಿಕೊಂಡು ನಿಜವಾದ ಬದುಕನ್ನು ನಡೆಸುವದರೊಂದಿಗೆ ಶ್ರೇಷ್ಠ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಾ ಹಳ್ಳಿಕೇರಿಮಠ ವಿದ್ಯಾರ್ಥಿಗಳು ಸರ್ವತೋಮುಖ ಪ್ರಗತಿ ಹೊಂದಬೇಕೆಂದು ಉಪನ್ಯಾಸ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಂಡರಗಿ ತಾಲೂಕಿನ ಯೋಜನಾಧಿಕಾರಿಯಾದ ಶ್ರೀಮತಿ ವಿಶಾಲ ಮಲ್ಲಾಪೂರ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು ಸಂಸ್ಕಾರದ ಶಿಕ್ಷಣ ಅಗತ್ಯ ಎಂದು ಅಭಿಪ್ರಾಯಪಟ್ಟರು .

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ ಮಹಾವಿದ್ಯಾಲಯದ ತರಬೇತಿ ಅಧಿಕಾರಿಗಳಾದ ಶ್ರೀ ಮಹೇಶಗೌಡ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾತನಾಡಿ ಅಭಿನಂದನೆ ಸಲ್ಲಿಸಿದರು.

ಶ್ರೀಮತಿ ಮಮತಾ ಸಿಸ್ಟರ್ ಆರೋಗ್ಯ ಸಲಹೆಗಳನ್ನು ಹಂಚಿಕೊಂಡರು ,ಡಂಬಳದ ಆರೋಗ್ಯ ನಿರೀಕ್ಷಾಣಾಧಿಕಾರಿಗಳಾದ ಉದಯ ವಿದ್ಯಾರ್ಥಿಗಳಿಗೆ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಪ್ರತಿಜ್ಞೆ ವಿಧಿ ಭೋಧಿಸಿದರು.

ಲಕ್ಷ್ಮಿ ಹಾಗೂ ಸಂಗಡಿಗರು ಪ್ರಾರ್ಥನೆ ಹಾಡಿದರು,ಶ್ರೀ ಎಸ್ ಎಸ್ ಕುಂಬಾರ ವಂದನಾರ್ಪಣೆಗೈದರು,
ಇ ಸಂದರ್ಭದಲ್ಲಿ ಕೃಷಿ ಮೇಲ್ವಿಚಾರಕರಾದ ಈರಣ್ಣ,ಡಂಬಳ ವಲಯ ಮೇಲ್ವಿಚಾರಕರಾದ ಶ್ರೀ ಮಹಾಂತೇಶ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೋಂಡಿದ್ಧರು.

Leave A Reply

Your email address will not be published.