deshadoothanews

ಭ್ರಷ್ಟ ಬಿಜೆಪಿ ಸರಕಾರ ತೊಲಗಬೇಕಾದರೇ ನಿಮ್ಮೇಲ್ಲರ ಆಶೀರ್ವಾದ ಕಾಂಗ್ರೇಸ್ ಪಕ್ಷದ ಮೇಲೆ ಇರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ತಾವರಗೇರಾ

ಪಟ್ಟಣದಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಅಮರೇಗೌಡ ಪಾಟೀಲ್ ಬಯ್ಯಾಪೂರ ಪರ ಪ್ರಚಾರ ಕಾರ್ಯಕ್ರಮದ ರೋಡ್ ಶೋದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿದ್ಧರಾಮಯ್ಯನವರು ಮುಖ್ಯ ಮತ್ರಿಯಾಗಿದ್ದಾಗ, ಹಲವು ಜನರಪರ ಯೋಜನೆಗಳನ್ನು ಜಾರಿಗೆ ತಂದ್ದಿದ್ದರು. ಮತ್ತೊಮ್ಮೆ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬರಬೇಕಾದರೇ ನಿವೇಲ್ಲರು ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಅಮರೇಗೌಡ ಪಾಟೀಲ್ ಬಯ್ಯಾಪೂರು ರವರಿಗೆ ನಿಮ್ಮ ಮತಗಳನ್ನು ನೀಡುವ ಮೂಲಕ ಅವರನ್ನು ಬಹುಮತದಿಂದ ಆಯ್ಕೆಮಾಡಬೇಕು ಎಂದರು.


ನಂತರ ಚಲನಚಿತ್ರ ನಟಿ ಹಾಗೂ ಮಾಜಿ ಸಚಿವೆ ಉಮಶ್ರೀ ಮಾತನಾಡಿ, ಬಿಜೆಪಿ ಸರ್ಕಾರವನ್ನು ಕೆಳಗಿಸಬೇಕು ಕಾಂಗೇಸ್ ಸಕಾರವನ್ನು ಮೇಲಕ್ಕೆ ತರಬೇಕು. ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಜನ ವಿರೋಧಿ ಸರ್ಕಾರ ಬಿಜೆಪಿ ಸರ್ಕಾರ. ೪೦% ಬಿಜೆಪಿ ಸರ್ಕಾರ ಎಂದು ಕಿಡಿ ಕಾರಿದರು. ಕರೋನಾ ಕಾಲದಲ್ಲಿ ಎಷ್ಟು ಜನ ತಿರಿಕೊಂಡರು ಎಂದು ಲೆಕ್ಕವೇ ಇಲ್ಲ. ಸರ್ಕಾರದಲ್ಲಿ ಲಕ್ಷಾಂತರ ಜನರು ತಿರಿಕೊಂಡಿದ್ದಾರೆ ಲೇಕ್ಕ ತೋರಿಸಿದರೆ ಜನರು ಗಾಬರಿಯಾಗುತ್ತಾರೆ. ಜನರು ಸರರ್ಕಾದ ವಿರುದ್ಧ ರೊಚ್ಚಿಗೆ ಹೇಳುತ್ತಾರೆ ಎಂದು ಲೆಕ್ಕವಿಟ್ಟಿಲ್ಲ ಎಂದರು. ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಅಮರೇಗೌಡ ಪಾಟೀಲ್ ರವರಿಗೆ ಮತಗಳನ್ನು ನೀಡುವ ಮೂಲಕ ಅವರನ್ನು ಆಯ್ಕೆ ಮಾಡಿ ಕಳಿಸಬೇಕು ಎಂದರು.

ಇದಕ್ಕೂ ಮುನ್ನಾ ತೆರದ ವಾಹನದಲ್ಲಿ ರೋಡ್ ಶೋ ಮಾಡಲಾಯಿತು. ಡಾ. ಬಿಆರ್ ಅಂಬೇಡ್ಕರ್ ವೃತ್ತದಿಮದ ರೋಡ್ ಶೋ ಪ್ರಾರಂಭವಾಗಿ ಗಾಂಧಿ ಚೌಕ್, ಮೇನ್ ಬಜಾರ, ಶ್ರೀಬಸವೇಶ್ವರ ವೃತ್ತ, ಶ್ರೀಶ್ಯಾಮೀದ್ ಅಲಿ ವೃತ್ತ, ಕಿತ್ತೂರರಾಣಿ ಚನ್ನಮ್ಮ ವೃತ್ತಕ್ಕೆ ಬಂದು ಮುಕ್ತಾಯವಾಯಿತು.

ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಅಮರೇಗೌಡ ಪಾಟೀಲ್ ಬಯ್ಯಾಪೂರು, ಮಾಜಿ ಶಾಸಕ ಹಸನಸಾಬ ದೋಟಿಹಾಳ, ಕುಷ್ಟಗಿ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಂದ್ರಶೇಖರ ನಾಲತವಾಡ, ಮಾಲತಿ ನಾಯಕ, ಶಾರದಾ ಕಟ್ಟಿಮನಿ, ಅಯ್ಯನಗೌಡ ಮಾಲಿ ಪಾಟೀಲ್, ಉದ್ಯಮಿ ಬಸನಗೌಡ ಮಾಲಿ ಪಾಟೀಲ್, ನಾರಾಯಣಗೌಡ ಮೆದಿಕೇರಿ, ವೀರನಗೌಡ ಪಾಟೀಲ್, ವಿಕ್ರಮ್ ರಾಯ್ಕರ್, ವೀರಭದ್ರಗೌಡ ರಾಂಪೂರು, ರುದ್ರಗೌಡ ಕುಲಕರ್ಣಿ, ಜಿಪಂ ಮಾಜಿ ಸದಸ್ಯ ಹನಮಗೌಡ ಪಾಟೀಲ್, ವಿರೇಶ ತಾಳಿಕೋಟಿ, ಡಾ.ಶ್ಯಾಮೀದ್ ಸಾಬ ದೋಟಿಹಾಳ, ಅಮರೇಶ ಕುಂಬಾರ, ಅಮರೇಶ ಗಾಂಜಿ ಸೇರಿದಂತೆ ಇನ್ನಿತರ ಗಣ್ಯರು ಹಾಗೂ ಮುಖಂಡರು ಇದ್ದರು.

 

ತಾವರಗೇರಾ ಪಟ್ಟಣದಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಅಮರೇಗೌಡ ಪಾಟೀಲ್ ಬಯ್ಯಾಪೂರ ಪರ ರೋಡ್ ಶೋ ನಡೆಯಿತು.

Leave A Reply

Your email address will not be published.