deshadoothanews

ಅಂಚೆ ಮತಪತ್ರದಿಂದ ಮತದಾನಕ್ಕೆ ಅಗತ್ಯ ಸಿದ್ಧತೆ: ಎಂ.ಸುದರೇಶಬಾಬು

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕೊಪ್ಪಳ

ಅಂಚೆ ಮತಪತ್ರದ ಮೂಲಕ ಮತದಾನವು ಜಿಲ್ಲೆಯ ಎಲ್ಲಾ 5 ವಿಧಾನಸಭಾ ಕ್ಷೇತ್ರಗಳಲ್ಲಿ ನಿಗದಿತ ಸಮಯದಲ್ಲಿ ನಡೆಯಲಿದ್ದು, ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಆಯ್ಕೆ ಮಾಡಿಕೊಂಡಿರುವ 80 ವರ್ಷ ಮೇಲ್ಪಟ್ಟ ವಯೋಮಾನದ ಮತ್ತು ವಿಕಲಚೇತನ ನೋಂದಾಯಿತ ಮತದಾರರು ತಪ್ಪದೇ ಮತ ಚಲಾಯಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುAದರೇಶಬಾಬು ಅವರು ಮನವಿ ಮಾಡಿದ್ದಾರೆ.

ಇದಕ್ಕಾಗಿ ಈಗಾಗಲೇ ಜಿಲ್ಲೆಯ ಎಲ್ಲಾ 5 ವಿಧಾನಸಭಾ ಕ್ಷೇತ್ರಗಳಲ್ಲಿ ಅಗತ್ಯ ಸಿದ್ದತೆ ಮಾಡಲಾಗಿದೆ. ಈ ವಿಭಾಗದಲ್ಲಿ 2,303 ಮತದಾರರಿದ್ದು, ಈ ಅಂಚೆ ಮತದಾನ ಪ್ರಕ್ರಿಯೆಗೆ ಚುನಾವಣಾಧಿಕಾರಿಗಳು 60 ತಂಡಗಳನ್ನು ರಚಿಸಿದ್ದಾರೆ. ಮತದಾರರ ಆಯ್ಕೆಯ ಮೇಲೆ ಯಾರೊಬ್ಬರೂ ಪ್ರಭಾವ ಬೀರದಂತೆ ಮತ್ತು ಮತದಾನದ ಗೌಪ್ಯತೆಯನ್ನು ಕಾಪಾಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.

ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಹಿನ್ನಲೆಯಲ್ಲಿ ಏಪ್ರೀಲ್ 29 ರಿಂದ ಮೇ 06ರವರೆಗೆ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತದಾನ ಸಿಬ್ಬಂದಿಯು ಅಗತ್ಯ ಮತಪತ್ರದೊಂದಿಗೆ ಹಾಗೂ ಇತರೇ ದಾಖಲಾತಿಯೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿನ ನೋಂದಾಯಿತ 80 ವರ್ಷ ಮೇಲ್ಪಟ್ಟ ವಯೋಮಾನದ ಹಾಗೂ ವಿಕಲಚೇತನ ಮತದಾರರ ಮನೆಗಳಿಗೆ ಏಪ್ರೀಲ್ 29ರಿಂದ ಭೇಟಿ ನೀಡುವರು. ಮತದಾರರಿಗೆ ಅಂಚೆ ಮತದಾನ ಪತ್ರ ವಿತರಿಸುವರು, ಮತದಾರರಿಗೆ ಮತದಾನದ ಕಾರ್ಯ ವಿಧಾನದ ಬಗ್ಗೆ ಮಾಹಿತಿ ನೀಡುವರು.

ಚಿತ್ರೀಕರಣ ನಿಷೇಧ: ಮತದಾನ ಮಾಡಲು ಸಾಧ್ಯವಿಲ್ಲದವರು ನೆರವು ತೆಗೆದುಕೊಳ್ಳಲು ಅವಕಾಶವಿದೆ. ಮತದಾನದ ಬಳಿಕ ಮತಪತ್ರವನ್ನು ಮತದಾನ ಅಧಿಕಾರಿಗೆ ಹಸ್ತಾಂತರಿಸಬೇಕು. ಮತ ಚಲಾವಣೆಯನ್ನು ಯಾರು ಸಹ ತಮ್ಮ ಮೊಬೈಲ್ ಅಥವಾ ಇತರೇ ಉಪಕರಣಗಳ ಮುಖಾಂತರ ಚಿತ್ರೀಕರಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.