deshadoothanews

ಸಂಸದರ ಮೇಲೆ ಸಿವಿಸಿ ಮಾಡಿದ ಆರೋಪಕ್ಕೆ ಮಂಜುಳಾ ತಿರುಗೇಟು

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕೊಪ್ಪಳ

 ಸಂಸದ ಕರಡಿ ಸಂಗಣ್ಣ ಅವರು ಸರಳ, ಸಜ್ಜನಿಕೆ ವ್ಯಕ್ತಿ. ಅಂತವರು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಹೇಳುವ ಜೆಡಿಎಸ್ ಅಭ್ಯರ್ಥಿ ಸಿವಿಸಿ ಅವರಿಗೆ ನೈತಿಕತೆ ಇದೆಯೇ ಎಂದು ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಪ್ರಶ್ನಿಸಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಹನುಮನಹಳ್ಳಿ, ಟಣಕನಕಲ್, ಹಟ್ಟಿ, ಕಲಕೇರಿ, ಚಿಲವಾಡಗಿ, ದೇವಲಾಪುರ, ನರೇಗಲ್ ಹಾಗೂ ಮಾದಿನೂರು ಗ್ರಾಮದಲ್ಲಿ ಮತ ಪ್ರಚಾರ ನಡೆಸಿ ಮಾತನಾಡಿದರು.
ನಿರ್ಮಿತಿ ಕೇಂದ್ರದ ಅಧಿಕಾರಿಯಾಗಿದ್ದ ಸಿವಿಸಿ ಅವರ ಮೇಲೆ ಭ್ರಷ್ಟಾಚಾರದ ಆರೋಪ ಇದೆ. ಈ ಬಗ್ಗೆ ತನಿಖೆಯಾಗುತ್ತಿದೆ. ಇಂತವರು ಸಂಸದ ಸಂಗಣ್ಣ ಕರಡಿ ವಿರುದ್ದ ಮಾತನಾಡುವುದು ಹಾಸ್ಯಾಸ್ಪದವಾಗಿದೆ. ಜನರ ಮತ ಪಡೆಯಲು ಸಂಸದರ ಮೇಲೆ ಇಲ್ಲಸಲ್ಲದ ಆರೋಪ ಮಾಡಿದರೆ, ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.
ಸರ್ಕಾರಿ ಅಧಿಕಾರಿಯಾಗಿದ್ದ ಸಿ.ವಿ.ಚಂದ್ರಶೇಖರ್ ಅವರು ಸಾವಿರಾರು ಕೋಟಿ ರೂ. ಗಳಿಸಿದ್ದು ಹೇಗೆ? ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರೇ? ಸಂಸದರ ಮೇಲೆ ಆರೋಪ ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ.
ಜಿಲ್ಲೆಯಲ್ಲಿ ಜನರ ಪ್ರೀತಿ, ವಿಶ್ವಾಸ ಗಳಿಸಿದ ಸಂಸದರ ಬಗ್ಗೆ ಮಾತನಾಡುವಾಗ ಹಿಡಿತವಿರಲಿ ಎಂದು ತರಾಟೆಗೆ ತೆಗೆದುಕೊಂಡರು.
ನಾನು ಯಾವುದೇ ವ್ಯಕ್ತಿಯನ್ನು ಟೀಕಿಸಲಾರೆ. ಬಿಜೆಪಿ ಸರ್ಕಾರದ ರಿಪೋರ್ಟ್ ಕಾಡ್೯ ಹಾಗೂ ಮುಂದಿನ ಯೋಜನೆಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗಿ ಮತ ಕೇಳುತ್ತಿರುವೆ. ಬಿಜೆಪಿ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮತದಾರರಿಗೆ ತಿಳಿಸಿ ಎಂದು ಕರೆ ನೀಡಿದರು.
ಸಂಸದ ಕರಡಿ ಸಂಗಣ್ಣ ಅವರು ಉಜ್ವಲ ಯೋಜನೆಯಡಿ ಜಾತಿ, ಧರ್ಮ ಎನ್ನದೇ ಉಚಿತ ಗ್ಯಾಸ್ , ಸಿಲಿಂಡರ್ ನೀಡಿದ್ದಾರೆ. ಕೋವಿಡ್ ವೇಳೆ ಆಹಾರದ ಕಿಟ್ ನೀಡಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ ಎನ್ನದೇ ನಾವೆಲ್ಲರೂ ಒಂದೇ ಎಂಬ ಭಾವನೆ ಇಟ್ಟುಕೊಂಡು ರಾಜಕಾರಣ ಮಾಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮುಸ್ಲಿಮರ ಓಲೈಕೆ ರಾಜಕಾರಣ ಮಾಡುತ್ತಿವೆ. ಆದರೆ, ಮುಸ್ಲಿಂ ಸಮುದಾಯಕ್ಕೆ ಸರ್ಕಾರಿ ಯೋಜನೆಯನ್ನು ಸಂಸದರು ಕೊಟ್ಟಷ್ಟು ಯಾವ ಪಕ್ಷವೂ ನೀಡಿಲ್ಲ. ಮುಸ್ಲಿಂ ಸಮುದಾಯದ ಸಂಸದರ ಪರವಿದೆ. ಆದ್ದರಿಂದಲೇ ಕಾಂಗ್ರೆಸ್- ಜೆಡಿಎಸ್ ಆರೋಪ ಮಾಡುತ್ತಿದೆ ಎಂದರು.
ಪ್ರಚಾರದ ವೇಳೆ ಯುವಕರು, ಮಹಿಳೆಯರು, ಹಿರಿಯರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
–ಬಾಕ್ಸ್–
ನಾನೊಬ್ಬ ಮಹಿಳೆಯಾಗಿ ಮಹಿಳೆಯರ ಸಮಸ್ಯೆ ತಿಳಿದಿದೆ. ನನ್ನನ್ನು ಶಾಸಕಿಯನ್ನಾಗಿ ಮಾಡಿ ವಿಧಾನಸಭೆ ಗೆ ಕಳುಹಿಸಿ, ಕ್ಷೇತ್ರದ ಜನತೆಯ ಧ್ವನಿಯಾಗುವೆ. ಒಂದು ಅವಕಾಶ ನೀಡಿ. ಪ್ರತಿದಿನ ಕ್ಷೇತ್ರದಲ್ಲಿಯೇ ಉಳಿದು ಜನರ ಸಮಸ್ಯೆ ಆಲಿಸಿ, ಪರಿಹಾರ ಮಾಡುವೆ. ದಿನದ 24 ಗಂಟೆ ಜನರ ಸೇವೆಗೆ ಮುಡಿಪಾಗಿಡುವೆ ಎಂದು ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ತಿಳಿಸಿದರು.
–ಕೋಟ್–
ಒಬ್ಬರ ಮೇಲೆ ಆರೋಪ ಮಾಡುವ ವ್ಯಕ್ತಿಯ ಹಿನ್ನೆಲೆಯನ್ನು ಜನತೆ ನೀಡುತ್ತಾರೆ. ಕೊಪ್ಪಳದ ಜನರು ಬುದ್ಧಿವಂತರು. ನನ್ನ ನಾಲ್ಕು ದಶಕದ ರಾಜಕೀಯ ವನ್ನು ಜನತೆ ನೋಡಿದ್ದಾರೆ. ಅವರೇ ತೀರ್ಮಾನ ಮಾಡಲಿದ್ದಾರೆ. ನನ್ನ ಜಾತಿ ಜನರು, ನನ್ನ ಧರ್ಮ ಜನರಾಗಿದ್ದಾರೆ. ಜನತೆ ಬಿಜೆಪಿಗೆ ಮತ ನೀಡುವ ಮೂಲಕ ಕೆಲವರಿಗೆ ತಕ್ಕ ಪಾಠ ಕಲಿಸಲಿದ್ದಾರೆ.
– ಸಂಗಣ್ಣ ಕರಡಿ, ಸಂಸದರು.
Leave A Reply

Your email address will not be published.