deshadoothanews

ಗಿಣಿಗೇರಾ ಮುಕ್ಕುಂದ ಸೆಮಿ ಸ್ಟೀಲ್ಸ್ ಪ್ಯಾಕ್ಟರಿಯಲ್ಲಿ ಸ್ವೀಪ್ ಕಾರ್ಯಕ್ರಮ

ಡಿ ಡಿ ನ್ಯೂಸ್. ಕೊಪ್ಪಳ

0
ಡಿ ಡಿ ನ್ಯೂಸ್. ಕೊಪ್ಪಳ
  ಸ್ವೀಪ್ ಸಮಿತಿ, ಕಾರ್ಮಿಕ ಇಲಾಖೆ ಹಾಗೂ ಗಿಣಿಗೇರಾ ಗ್ರಾಮ ಪಂಚಾಯತ್ ಸಹಯೋಗದಲ್ಲಿ ನೌಕರರು ಮತ್ತು ಕಾರ್ಮಿಕರಿಗೆ ಕಡ್ಡಾಯ ಮತದಾನ ಮತ್ತು ನೈತಿಕ ಮತದಾನಕ್ಕಾಗಿ ಗಿಣಿಗೇರಾ ಹತ್ತಿರವಿರುವ ಮುಕ್ಕುಂದ ಸೆಮಿ ಸ್ಟೀಲ್ಸ್ ಪ್ಯಾಕ್ಟರಿಯ ಆವರಣದಲ್ಲಿ  ಇವಿಎಂ ವಿವಿ ಪ್ಯಾಟ್ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ಪ್ಯಾಕ್ಟರಿಯ ನೌಕರರಿಗೆ ಇವಿಎಂ, ವಿವಿ ಪ್ಯಾಟ್ ಮೂಲಕ ಮತದಾನ ಜಾಗೃತಿ ಮೂಡಿಸಿದ ಪಂಚಾಯತ ರಾಜ್ ಸಹಾಯಕ ನಿರ್ದೇಶಕರಾದ ಮಹೇಶ್ ಎಚ್ ಅವರು ಮಾತನಾಡಿ, ಮೇ 10ರಂದು ವಿಧಾನಸಭಾ ಚುನಾವಣೆ ಜರುಗಲಿದ್ದು, ಪ್ಯಾಕ್ಟರಿಯ ಎಲ್ಲಾ ನೌಕರರು ಮತ್ತು ಕಾರ್ಮಿಕರು ಕಡ್ಡಾಯವಾಗಿ ಮತದಾನ ಮಾಡಬೇಕು. ಗಿಣಿಗೇರಾ ಗ್ರಾಮದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಪ್ರಯುಕ್ತ ಮತದಾನದ ಪ್ರಮಾಣ ಹೆಚ್ಚಿಸಲು ಸ್ವೀಪ್ ಹಾಗೂ ನಾನಾ ರೀತಿಯ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮತದಾರರರ ಗಮನಸೆಳೆಯಲಾಗುತ್ತಿದೆ. ಮತದಾನ ನಮಗೆ ಸಂವಿಧಾನ ಕಲ್ಪಿಸಿರುವ ವಿಶೇಷ ಹಾಗೂ ಅಮೂಲ್ಯ ಹಕ್ಕಾಗಿದೆ. ಅದನ್ನು ವಿವೇಚನಾಯುಕ್ತವಾಗಿ ಅರ್ಹರಿಗೆ ಕಡ್ಡಾಯವಾಗಿ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕೆಂದು ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಸುಧಾ ಗರಗ ಅವರು ಮಾತನಾಡಿ, 18 ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯ ಮತ್ತು ನೈತಿಕ ಹಾಗೂ ವಿವೇಚನಾಯುಕ್ತವಾಗಿ ಮತ ಚಲಾಯಿಸಬೇಕು. ಮೇ 10ರಂದು ಮತದಾನ ಮಾಡಲು ಎಲ್ಲಾ ನೌಕರರು ಹಾಗೂ ಕಂಪನಿಯವರಿಗೆ ಕೆಲಸದಿಂದ ವಿನಾಯಿತಿ ನೀಡಿ ಚುನಾವಣಾ ಆಯೋಗ ಆದೇಶಿಸಿದ್ದು, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ತಿಳಿಸಿದರು.
*ಇವಿಎಂ, ವಿವಿ ಪ್ಯಾಟ್ ಮೂಲಕ ಅಣುಕು ಮತದಾನ:* ಕಾರ್ಖಾನೆ ಆವರಣದಲ್ಲಿ ಇವಿಎಂ, ವಿವಿ ಪ್ಯಾಟ್ ಮೂಲಕ ನೌಕರರು ಮತ್ತು ಕಾರ್ಮಿಕರಿಗೆ ಇವಿಎಂ, ವಿವಿ ಪ್ಯಾಟ್ ಮೂಲಕ ಮತದಾನ ಮಾಡುವ ಕುರಿತು ಮಾಹಿತಿಯನ್ನು ನೀಡಲಾಯಿತು. ಅಣುಕು ಮತದಾನ ಮಾಡುವ ಮೂಲಕ ಪ್ಯಾಕ್ಟರಿಯ ನೌಕರರು ಮತ್ತು ಕಾರ್ಮಿಕರು ಖುಷಿಪಟ್ಟರು.
ಇದೇ ವೇಳೆ ತಾಲೂಕ ಸ್ವೀಪ್ ನೋಡಲ್ ಅಧಿಕಾರಿ ಹನಮಂತಪ್ಪ ಎಚ್ ಅವರು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ತಾಲೂಕ ಯೋಜನಾಧಿಕಾರಿ ರಾಜೇಸಾಬ್ ನದಾಫ್, ಕಾರ್ಮಿಕ ಇಲಾಖೆಯ ನಿರೀಕ್ಷಕ ಶಿವಶಂಕರ ತಳವಾರ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕರಾದ ಬಸವರಾಜ ಹಿರೇಗೌಡರ, ಗ್ರಾಮ ಪಂಚಾಯತ ಪಿಡಿಒ ಮಂಜುಳಾ ಹೂಗಾರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಲೂಕ ಸ್ವೀಪ್ ತಂಡದ ಸದಸ್ಯರಾದ ಬಸವರಾಜ ಬಳಿಗಾರ, ಪೂರ್ಣೆಂದ್ರಸ್ವಾಮಿ, ಪ್ಯಾಕ್ಟರಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಮಂಜುನಾಥ, ಸಿಬ್ಬಂದಿಗಳಾದ ಸುನೀಲ್ ಮಾರುತಿ, ಕಾರ್ಯದರ್ಶಿ ಮಂಜುನಾಥ ಅಂಗಡಿ, ಕರವಸೂಲಿಗಾರ ಈಶ್ವರಯ್ಯ ಪೋಲಿಸ್ ಪಾಟೀಲ್, ಸಿಬ್ಬಂದಿಗಳಾದ ಡಿಇಒ ರಾಜಭಕ್ಷಿ, ರಾಜು, ಗ್ರಾಮ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave A Reply

Your email address will not be published.