deshadoothanews

*ಚುನಾವಣಾ ವೆಚ್ಚ ಮಿತಿಯೊಳಗೆ ಖರ್ಚು ಮಾಡಿ: ಜಿ.ವಿ.ವಿವೇಕಾನಂದ*

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕನಕಗಿರಿ

ಚುನಾವಣಾ ವೆಚ್ಚ ವೀಕ್ಷಕರಾದ ಜಿ.ವಿವೇಕಾನಂದ ಅವರು ಕನಕಗಿರಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ  ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಹಾಗೂ ಏಜೆಂಟರುಗಳ ಸಭೆ ನಡೆಸಿದರು. ನಂತರ ಮಾತನಾಡಿದ ಅವರು, ಅಭ್ಯರ್ಥಿಗಳು
ಯಾವುದೇ ಕಾರ್ಯಕ್ರಮಗಳನ್ನು ಮಾಡಿದರೂ ಖರ್ಚು ವೆಚ್ಚದ ಮಿತಿಯೊಳಗೆ ಮಾಡುವಂತೆ ಸಲಹೆ ಮಾಡಿದರು.

 

ಯಾವುದೇ ಕಾರ್ಯಕ್ರಮ, ರ್ಯಾಲಿ, ಸಭೆ ಸಮಾರಂಭಗಳನ್ನು ಮಾಡಿದರೂ ದಾಖಲೆಗಳು ನಿಖರವಾಗಿ (ಪಕ್ಕಾ) ಇರಬೇಕು. ಯಾವ ಸಮಯದಲ್ಲಾದರೂ ಪಕ್ಷದ ಕಚೇರಿಗಳಿಗೆ ನಮ್ಮ ತಂಡ ದಿಢೀರ್ ಭೇಟಿ ನೀಡಬಹುದು. ಹಾಗಾಗಿ ಚುನಾವಣೆಗಾಗಿ ಏನೇ ವೆಚ್ಚ ಮಾಡಿದರೂ ಜಿ.ಎಸ್.ಟಿ ಬಿಲ್ ಗಳು ಅವಶ್ಯವಾಗಿದೆ. ಹಾಗಾಗಿ ಎಲ್ಲರೂ ಯಶಸ್ವಿಯಾಗಿ ಚುನಾವಣೆಯನ್ನು ಮಾಡಲು ಸಹಕಾರ ನೀಡುವಂತೆ ತಿಳಿಸಿದರು.
ಸಭೆಯಲ್ಲಿ 61-ಕನಕಗಿರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಮೀರ್ ಮುಲ್ಲಾ, ಕಾರಟಗಿ ತಹಶೀಲ್ದಾರ್ ಎಂ.ಬಸವರಾಜ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನರಸಪ್ಪ ಎನ್., ಚುನಾವಣಾ ವೆಚ್ಚ ತಂಡದ ಸದಸ್ಯರು ಸೇರಿದಂತೆ ರಾಜಕೀಯ ಪಕ್ಷಗಳ ಏಜಂಟರು, ಸಿಬ್ಬಂದಿಗಳು ಹಾಜರಿದ್ದರು.
Leave A Reply

Your email address will not be published.