deshadoothanews

ಕ್ಷೇತ್ರದ ಜನತೆ ಹಾಲಪ್ಪ ಆಚಾರ್ ಬೆಂಬಲಿಸಿ : ಯತ್ನಾಳ ಮನವಿ

ಡಿ ಡಿ ನ್ಯೂಸ್. ಕೊಪ್ಪಳ

0

 

ಡಿ ಡಿ ನ್ಯೂಸ್.ಯಲಬುರ್ಗಾ

ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಅವರು ಕ್ಷೇತ್ರದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆ ಯಶಸ್ಸಿಗೆ ಶ್ರಮಿಸಿ ತಾಲೂಕಿನ ಕೆರೆಗಳಿಗೆ ಕೃಷ್ಣೆಯ ನೀರನ್ನು ತಂದು ಹರಿಸಿದ್ದಾರೆ ಎಂದರು ಎಂದು ಬಿಜೆಪಿ ಸ್ಟಾರ್ ಚುನಾವಣಾ ಕ್ಯಾಂಪೇನರ್ ಬಸವನಗೌಡ ಯತ್ನಾಳ ಪಾಟೀಲ ಹೇಳಿದರು.

ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಬಿಜೆಪಿ ತಾಲೂಕು ಘಟಕದ ವತಿಯಿಂದ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಬಿಜಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರಕ್ಕೆ ೩೨೮೦ ಕೋಟಿ ಅನುಧಾನ ತಂದಿದ್ದಾರೆ.ಪ್ರಧಾನ ಮಂತ್ರಿ ಗಾಣಿಗ ಸಮಾಜದವರು, ಮೋದಿ ಭ್ರಷ್ಠಚಾರ, ಭಯೋತ್ಪಾದನೆ ಮುಕ್ತ ಭಾರತ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕಳೆದ ಎಂಟು ವರ್ಷ ಅವಧಿಯಲ್ಲಿ ಎರಡು ಭಾರಿ ಸರ್ಜಿಕಲ್ ಸ್ಟೆçöÊಕ್ ಮಾಡಲಾಗಿದೆ. ಭಯೋತ್ಪಾದಕರ ವಾಸಸ್ಥಾನಗಳನ್ನು ನೆಲಸಮ ಮಾಡಲಾಗಿದೆ ಎಂದರು.

ರಾಹುಲ್ ಗಾಂಧಿ, ರಾಯರಡ್ಡಿ ಹುಚ್ಚರ ರೀತಿ ಆಟವಾಡುತ್ತಾರೆ, ಭಾರತ ದೇಶ ಹಿಂದೂ ರಾಷ್ಟçವಾಗಿದೆ ಕ್ಷೇತ್ರದಿಂದ ಹಾಲಪ್ಪ ಆಚಾರ್ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ಕಳುಹಿಸಿ ಎಂದರು. ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಮಾತನಾಡಿ ನನ್ನ ಆಡಳಿತಾವಧಿಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸಿದ್ದೇನೆ, ಶಿಕ್ಷಣ ಮತ್ತು ನೀರಾವರಿಗೆ ಒತ್ತು ಕೊಟ್ಟು ಕೆಲಸ ಮಾಡಿದ್ದೇನೆ ಎಂದರು.ತಾಲೂಕು ಉಸ್ತುವಾರಿ ಪವನಕುಮಾರಡ್ಡಿ, ಬಿಜೆಪಿ ತಾಲೂಕು ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ ಅಧ್ಯಕ್ಷತೆ ವಹಿಸಿದ್ದರು.ಮುಖಂಡ ಬಸವಲಿಂಗಪ್ಪ ಭೂತೆ, ನವೀನಕುಮಾರ ಗುಳಗಣ್ಣನವರ, ಶಿವಶಂಕರರಾವ್ ದೇಸಾಯಿ, ಅರವಿಂದಗೌಡ ಪಾಟೀಲ, ಅಯ್ಯನಗೌಡ ಕೆಂಚಮ್ಮನವರ, ಸುಧಾಕರ ದೇಸಾಯಿ, ಕಳಕಪ್ಪ ಕಂಬಳಿ, ವೀರಣ್ಣ ಹುಬ್ಬಳ್ಳಿಇತರರು ಇದ್ದರು.
ಮೂಲಕ ತೆರೆದ ವಾಹನದಲ್ಲಿ ಪಟ್ಟಣದ ಇವಿಧ ವೃತ್ತಗಳ ಮೂಲಕ ವೇದಿಕೆ ವರೆಗೂ ರೋಡ ಶೋ ನಡೆಸಿದರು.
ಯಲಬುರ್ಗಾ ಪಟ್ಟಣದಲ್ಲಿ ವಿಜಯಪುರ ಶಾಸಕ ಬಸವನಗೌಡ ಯತ್ನಾಳ ಪಾಟೀಲ ರೋಡ ಶೋ ನಡೆಸಿದರು.
ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಬಿಜೆಪಿ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಬಿಜಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಬಸನಗೌಡ ಯತ್ನಾಳ ಮಾತನಾಡಿದರು.

Leave A Reply

Your email address will not be published.