deshadoothanews

ಕುಷ್ಟಗಿ : ಚುನಾವಣೆ ಎಂಬುದು ಪ್ರಜಾತಂತ್ರದ ಹಬ್ಬವಾಗಿದೆ. ಯಾರೂ ಆಸೆ, ಆಮೀಷಕ್ಕೆ ಒಳಗಾಗದೇ ಖುಷಿಯಿಂದ ಮತ ಚಲಾಯಿಸಬೇಕು ಎಂದು ಸಂಗನಾಳ ಗ್ರಾಪಂ ಪಿಡಿಓ ಗುರುಪ್ಪ ನಾಯಕ ಹೇಳಿದರು.

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕುಷ್ಟಗಿ

ಸಂಗನಾಳ ಗ್ರಾಮ ಪಂಚಾಯತ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಮಡು ಮಾತನಾಡಿದ ಅವರು, ದೇಶ, ನಾಡು ಕಟ್ಟುವಲ್ಲಿ ಪ್ರತಿಯೊಬ್ಬರ ಮತ ಪ್ರಮುಖವಾಗಿರುತ್ತದೆ. ಯಾರೊಬ್ಬರೂ ಸಹ ಮತದಾನದಿಂದ ವಂಚಿತರಾಗ ಬಾರದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

ನಂತರ ನನ್ನ ಮತ ನನ್ನ ಹಕ್ಕು. ಮತದಾನ ಮಾಡುವವನೇ ಮಹಾಶೂರ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ಮೇಣದ ಬತ್ತಿ ಹಿಡಿದು ಜಾಗೃತಿ ಮೂಡಿಸಲಾಯಿತು. ಹಾಗೂ ಇದೆ ವೇಳೆ ಮತದಾನ ಜಾಗೃತಿಯ ಪ್ರತಿಜ್ಞಾವಿಧಿ ಬೋಧಿಸಿದರು.
ಹಾಗೂ ಈ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರು ಸೇರಿದಂತೆ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.

ಗ್ರಾಪಂ ಅಧ್ಯಕ್ಷೆ ಯಮನಮ್ಮ ವಗರನಾಳ, ಉಪಾಧ್ಯಕ್ಷ ಶರಣಪ್ಪ ಹಂಚಿನಾಳ, ಕಾರ್ಯದರ್ಶಿ ಯಮನೂರಪ್ಪ ಪೂಜಾರಿ, ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಮತ್ತು ಅಂಗನವಾಡಿ, ಆಶಾ, ಕಾರ್ಯಕರ್ತೆಯರು ಹಾಗೂ ಗ್ರಾಮದ ಗುರು ಹಿರಿಯರು ಮತ್ತು ಸಾರ್ವಜನಿಕರು ಇದ್ದರು.

Leave A Reply

Your email address will not be published.