deshadoothanews

ಕುಷ್ಟಗಿ : ವಿಧಾನಸಭಾ ಚುನಾವಣೆಯ ಅಂಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಮರೇಗೌಡ ಬಯ್ಯಾಪುರ ರವರ ಪರವಾಗಿ ಮತಯಾಚನೆ ಮಾಡಲು ಎಐಸಿಸಿ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಇದೇ ಏ.೨೮ ಶುಕ್ರವಾರ ಕುಷ್ಟಗಿ ಗೆ ಭೇಟಿ ನೀಡಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಲಾಡ್ಲೆ ಮಷಾಕ್ ಹೇಳಿದರು.

ಡಿ ಡಿ ನ್ಯೂಸ್. ಕೊಪ್ಪಳ

0

 

ಡಿ ಡಿ ನ್ಯೂಸ್. ಕುಷ್ಟಗಿ

ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಏ.೨೮ ರಂದು ರಾಹುಲ್ ಗಾಂಧಿ ಹೆಲಿಪ್ಯಾಡ್ ಮೂಲಕ ಬೀದರಿನ ವಿದ್ಯಾನಗರದಿಂದ ಕುಷ್ಟಗಿಗೆ ಮಧ್ಯಾಹ್ನ ೩:೩೫ಕ್ಕೆ ಆಗಮಿಸಲಿದ್ದಾರೆ. ಕುಷ್ಟಗಿ ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಐಡಿಎಫ್ ಸಿ ಬ್ಯಾಂಕ್ ನಿಂದ ತಾವರಗೇರಾ ರಸ್ತೆಯ ಬದಿಯಲ್ಲಿರುವ ಎಂ ಐ ಕಚೇರಿಯ ಎದುರಗಡೆ ಬಹಲು ಜಾಗೆಯಲ್ಲಿ ಬೃಹತ್ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ರ‍್ಯಾಲಿ ಮುಖಾಂತರ ಸಾಗಿ ತಲುಪಿ ನಂತರ ಮಹಿಳೆಯರ ಜೊತೆ ಒಂದು ಗಂಟೆ ಕಾಲ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ ಎಂದರು.

ಕಾಂಗ್ರೇಸ್ ಪಕ್ಷದ ಮುಖಂಡರಾದ ಶೇಖರಗೌಡ ಮಾಲಿಪಾಟೀಲ ಮಾತನಾಡಿ, ನಮ್ಮ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರು ಮಹಿಳಾ ಮೀಸಲಾತಿ, ಮಹಿಳೆಯರಿಗೆ ಹೊಸ ಯೋಜನೆಗಳು, ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷದ ಸಾಧನೆಗಳು ಸೇರಿದಂತೆ ಕುಷ್ಟಗಿ ಅಭ್ಯರ್ಥಿ ಅಮರೇಗೌಡ ಪಾಟೀಲ್ ಬಯಾಪೂರ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ, ಮಾಜಿ ಶಾಸಕ ಬಸವರಾಜ ರಾಯರೆಡ್ಡಿ, ಜಿಲ್ಲಾಧ್ಯ ಶಿವರಾಜ ತಂಗಡಗಿ ಸೇರಿದಂತೆ ವಿವಿಧ ನಾಯಕರು ಆಗಮಿಸಲಿದ್ದು ಸುಮಾರು ನಾಲ್ಕೈದು ಸಾವಿರ ಜನ ಬರುವ ನಿರೀಕ್ಷೆ ಇದ್ದು. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರು ಈ ಕಾರ್ಯಕ್ರಮ್ಕಕೆ ಶಕ್ತಿ ತುಂಬಬೇಕು ಎಂದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೇಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ, ತಾಲೂಕಾ ಅಧ್ಯಕ್ಷ ಕಲ್ಲಪ್ಪ ತಳವಾರ, ಶಂಕರಗೌಡ ಕಡೂರ, ಶ್ಯಾಮರಾವ ಕುಲಕರ್ಣಿ, ಸುರೇಶ ಕುಂಟನಗೌಡ್ರ, ಚಂದಪ್ಪ ತಳವಾರ, ಮಹಾಂತೇಶ ಬಂಡೇರ, ಶಿವರಾಜ ಕಟ್ಟಿಮನಿ ಸೇರಿದಂತೆ ಇನ್ನಿತರರಿದ್ದರು.

Leave A Reply

Your email address will not be published.