deshadoothanews

ವರ್ಜುವಲ್ ಮೂಲಕ ಪ್ರಧಾನಿ ಮೋದಿ ಅವರಿಂದ ಕಾರ್ಯಕರ್ತರ ಸಭೆ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕೊಪ್ಪಳ

 ಹೆದ್ದಾರಿಗಳ ನಿರ್ಮಾಣದಲ್ಲಿ ವಿಶ್ವದಲ್ಲೇ ಭಾರತ ಎರಡನೇ ಸ್ಥಾನ ಪಡೆದುಕೊಂಡಿದೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಸಾಧ್ಯವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಮೂಲಕ ಅವರ ಕೈ ಬಲ ಪಡಿಸಬೇಕು ಎಂದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ವರ್ಜುವಲ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಡೆಸಿದ ಕಾರ್ಯಕರ್ತರೊಂದಿಗೆ ಸಂವಾದ ಸಭೆಯಲ್ಲಿ ಮಾತನಾಡಿದರು.

 

ಸ್ವಾತಂತ್ರ್ಯ ಬಂದಾಗಿನಿಂದ ಏಳು ದಶಕದವರೆಗೆ ಅಧಿಕಾರ ನಡೆಸಿರುವ ಕಾಂಗ್ರೆಸ್ ಸರ್ಕಾರವು ದೇಶದ ಸಂಪರ್ಕ ಜಾಲವನ್ನು ಅಭಿವೃದ್ಧಿ ಪಡಿಸಿರಲಿಲ್ಲ. ಭೂ, ನೌಕಾ ಸಾರಿಗೆ ಅಭಿವೃದ್ಧಿ ಕಂಡಿರಲಿಲ್ಲ. 2014 ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರವು ಆದ್ಯತೆ ಮೇರೆಗೆ ಸಂಪರ್ಕ ಜಾಲ ಅಭಿವೃದ್ಧಿ ಪಡಿಸಿದೆ. ದೇಶದ ಹೆದ್ದಾರಿ ನಿರ್ಮಾಣ ಕಾಮಗಾರಿಗಳು ವೇಗ ಪಡೆದುಕೊಂಡು ವಿಶ್ವದಲ್ಲೇ 2 ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

 

ಭಾರತ ಎಂದರೆ ಸಾಲ ಕೇಳಲು ಬರುತ್ತಾರೆ ಎಂಬುದು ವಿದೇಶ ಗಳ ಆರೋಪ ಇತ್ತು. ಆದರೆ, ಮೋದಿಯವರು ಅಧಿಕಾರಕ್ಕೆ ಬಮಧ ಬಳಿಕ ವಿದೇಶಗಳಿಗೆ ಭಾರತ ಸಾಲ ನೀಡುತ್ತಿದೆ. ಜಗತ್ತಿನ ಆರ್ಥಿಕ ಶಕ್ತಿ ಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಒಂದೆಡೆ ಅಭಿವೃದ್ಧಿ ಇನ್ನೊಂದೆಡೆ ವಿಶ್ವಗುರು ಸ್ಥಾನದಲ್ಲಿದ್ದು, ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಮೂಲಕ ಅಭಿವೃದ್ಧಿ ಗೆ ಕೈ ಜೋಡಿಸಬೇಕು.
ಜಿಲ್ಲಾ ಕಾರ್ಯಾಧ್ಯಕ್ಷ ಎಚ್. ಗಿರೇಗೌಡ ಮಾತನಾಡಿ, ನಮ್ಮ ಪಕ್ಷ ಎಲ್ಲ ಸ್ಥರದ ಜನರಿಗೆ ಅವಕಾಶ ಮಾಡಿಕೊಟ್ಟಿದೆ. ಕಳೆದ 9 ವರ್ಷ ದಿಂದ ಮೋದಿ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಜನಪರ ಕೆಲಸಗಳನ್ನು ಮಾಡಿದ್ದಾರೆ. ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿ ಯನ್ನು ಘೋಷಿಸಿದ್ದು, ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

 

ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಮಾತನಾಡಿ, ಪ್ರಚಾರದ ವೇಳೆ ಗ್ರಾಮಗಳ ಜನತೆ ತಮ್ಮ ಸಮಸ್ಯೆ ಗಳನ್ನು ತಿಳಿಸಿದ್ದಾರೆ. ಆದ್ಯತೆ ಮೇರೆಗೆ ಸಮಸ್ಯೆ ಪರಿಹರಿಸಲಾಗುವುದು. ಧೂಳು ಮುಕ್ತ ನಗರವನ್ನಾಗಿ ಮಾಡುವುದೇ ನನ್ನ ಗುರಿಯಾಗಿದೆ. ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸುವುದು, ಮೂಲಸೌಕರ್ಯ ಕಲ್ಪಿಸುವುದು ನನ್ನ ಆದ್ಯತೆ ಎಂದರು.
ಸಂವಾದ ಸಭೆಯಲ್ಲಿ ಮಹಿಳೆಯರು, ಯುವಕರು, ಹಿರಿಯರು ಸೇರಿ ಪಕ್ಷದ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.

 

–ಬಾಕ್ಸ್–
ಸಂವಾದ ಸಭೆಯಲ್ಲಿ 5000ಕ್ಕೂ ಅಧಿಕ ಮಂದಿ ಭಾಗಿ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಜುವಲ್ ಮೂಲಕ ನಡೆಸಿದ ಕಾರ್ಯಕರ್ತರ ಸಂವಾದ ಸಭೆಗೆ 5000 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಕೊಪ್ಪಳ ನಗರ ಮಾತ್ರವಲ್ಲದೇ ಗ್ರಾಮಗಳಿಂದಲೂ ಜನಸಾಗರ ಕಾರ್ಯಕ್ರಮಕ್ಕೆ ಹರಿದುಬಂದಿತ್ತು. ಸಭೆಯಲ್ಲಿ ಕೇಸರಿ ಶಾಲು ರಾರಾಜಿಸುತ್ತಿದ್ದವು. ಕೊಪ್ಪಳ ಜನತೆ ಜತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂವಾದ ನಡೆಸಿದರು.

 

–ಕೋಟ್ಸ್–
ಕೊಪ್ಪಳ ಕ್ಷೇತ್ರದಲ್ಲಿ ಹೆದ್ದಾರಿ, ರೈಲ್ವೆ ಅಭಿವೃದ್ಧಿ ಪಡಿಸಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮೂಲಸೌಕರ್ಯ ಅಭಿವೃದ್ಧಿ ಪಡಿಸಿದ ಏಕೈಕ ಪಕ್ಷ ಬಿಜೆಪಿ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆ ಮತ ನೀಡಿದರೆ, ಅಭಿವೃದ್ಧಿ ಗೆ ಮತ ನೀಡಿದಂತೆ.
– ಸಂಗಣ್ಣ ಕರಡಿ, ಸಂಸದರು.
ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಬಿಜೆಪಿ ಒತ್ತು ನೀಡಿದೆ. ಕಾಂಗ್ರೆಸ್ ಅವಧಿಯಲ್ಲಿ  ರಾಜಕೀಯ ರಂಗದಲ್ಲಿ ಮೂಲೆಗುಂಪಾಗಿದ್ದ ಮಹಿಳೆಯರನ್ನು ಮುನ್ನೆಲೆಗೆ ತರುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಜನತೆ ಇದನ್ನು ಅರ್ಥ ಮಾಡಿಕೊಂಡು ಮತ ನೀಡಿ ಗೆಲ್ಲಿಸಬೇಕು.
– ಮಂಜುಳಾ ಅಮರೇಶ ಕರಡಿ, ಬಿಜೆಪಿ ಅಭ್ಯರ್ಥಿ.
Leave A Reply

Your email address will not be published.