deshadoothanews

ಶೋಷಣೆಯಿಂದ ಬಿದ್ದವರನ್ನ ಮೇಲೆತ್ತಿದಾತ ವಿಶ್ವಗುರು ಬಸವಣ್ಣ

ಡಿ ಡಿ ನ್ಯೂಸ್.ಕೊಪ್ಪಳ

0

ಡಿ ಡಿ ನ್ಯೂಸ್.ಯಲಬುರ್ಗಾ

ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳದ ವತಿಯಿಂದ 890 ನೇ ಬಸವ ಜಯಂತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪರಮ ಪೂಜ್ಯ ಸಿದ್ಧಬಸವ ಕಬೀರ ಮಹಾಸ್ವಾಮಿ ಚಿಗರಳ್ಳಿ ಇವರು ಮಾತನಾಡಿ,

ವಿಶ್ವಗುರು

`ಬಸವಣ್ಣ’ ಎನ್ನುವ ಹೆಸರು ಕನ್ನಡಿಗರಿಗೆ ಚಿರಪರಿಚಿತ. ಸುಮಾರು 60 ವರ್ಷಗಳ ಹಿಂದೆ `ಬಸವ ಜಯಂತಿ’ ಎಂದರೆ ವ್ಯವಸಾಯಕ್ಕೆ ಬಳಸುವ `ಎತ್ತುಗಳು’ ಎನ್ನುವ ನಂಬಿಕೆ ಇತ್ತು. ಎತ್ತುಗಳ ಮೈ ತೊಳೆದು, ಕೊಂಬುಗಳಿಗೆ ಬಣ್ಣ ಹಚ್ಚಿ, ಕೊರಳಿಗೆ ಗಂಟೆ ಕಟ್ಟಿ, ಮೈಮೇಲೆ ಜೂಲ ಹಾಕಿ ಊರತುಂಬ ಅವುಗಳ ಉತ್ಸವ ಮಾಡಿದರೆ ಬಸವ ಜಯಂತಿ ಮುಗಿದಂತೆ ಎನ್ನುವುದು ರೂಢಿಯಲ್ಲಿತ್ತು. ಅದರ ಬದಲಾಗಿ ಕರ್ನಾಟಕದ ಗಾಂಧಿ ಹರಡೇಕರ್ ಮಂಜಪ್ಪನವರು 1913ರಲ್ಲಿ ಪ್ರಥಮ ಬಾರಿಗೆ `ಬಸವಣ್ಣ’ ಎಂದರೆ ಎತ್ತಲ್ಲ; 12ನೆಯ ಶತಮಾನದಲ್ಲಿ ನಮ್ಮ ನಿಮ್ಮಂತೆ ಮನುಷ್ಯರಾಗಿ ಜನಿಸಿದ ವ್ಯಕ್ತಿ. ತಮ್ಮ ಸಾಧನೆಯ ಮೂಲಕ ಅಜ್ಞಾನ, ಮೌಢ್ಯ, ಶೋಷಣೆ ಇತ್ಯಾದಿಗಳ ಕೆಸರಲ್ಲಿ ಸಿಕ್ಕವರನ್ನು ಮೇಲೆತ್ತಿದ ಮಹಾಮಾನವ. ಎತ್ತುಗಳ ಹಾಗೆ ಲೋಕಕಲ್ಯಾಣಕ್ಕಾಗಿ ದುಡಿದ ಚೇತನ. ಬಸವ ಜಯಂತಿ ಆಚರಿಸುವುದು ಎಂದರೆ ಎತ್ತಿನ ಮೆರವಣಿಗೆ ಮಾಡುವುದಲ್ಲ. ಬದಲಾಗಿ ಭಕ್ತಿಭಂಡಾರಿ ಬಸವಣ್ಣನವರ ತತ್ವಸಿದ್ಧಾಂತಗಳ ಅರಿವಿನ ಮೆರವಣಿಗೆ ಮಾಡುವುದು ಎಂದು ಜನತೆಯನ್ನು ಜಾಗೃತಗೊಳಿಸುತ್ತ ಬಂದರು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ಬಸವನಗೌಡ ಪೋಲಿಸ್ ಪಾಟೀಲ್ ನಿವೃತ್ತ ಪಿ ಎಸ್ ಐ ಇವರು ಮಾತನಾಡಿ, ಮಂಗಳವೇಡದ ರಾಜ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾದ ಬಸವಣ್ಣ ಹಲವಾರು ಜನಪರ ಮತ್ತು ಸಮಾಜ ಸುಧಾರಣೆ ಕ್ರಮಗಳನ್ನು ಕೈಗೊಂಡರು. ಕಾಯಕವೇ ಕೈಲಾಸ ವೆಂದು ಸಾರಿ, ಜನರನ್ನು ದುಡಿದು ಬದುಕುವ ಪಥದಲ್ಲಿ ಮುನ್ನೆಡೆಸಿದರು. ಜಾತಿ, ಲಿಂಗ, ಭಾಷೆ ಭೇದವಿಲ್ಲದೆ, ಶರಣ ತತ್ವದಲ್ಲಿ, ಸಮಾನತೆಯಲ್ಲಿ ಮತ್ತು ಕಾಯಕ ನಿಷ್ಠೆಯಲ್ಲಿ ನಂಬಿಕೆಯುಳ್ಳವರನ್ನು ನಿಜವಾದ ” ಶಿವಶರಣರು”ಅಂತಹ ಶರಣರ ಚಿಂತನೆ ನಿರಂತರ ಸಾಗುತ್ತ, ಬಸವಾದಿ ಶಿವಶರಣರ ವಿಚಾರಗಳನ್ನ ಮೈಗೂಡಿಸಿಕೊಂಡು ಬದುಕಿದರೆ ಜೀವನ ಪಾವನ ಆಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಉಪಸ್ಥಿತರಾಗಿ ವೇದಿಕೆ ಹಂಚಿಕೊಂಡ ಶರಣ ಬಸವರಾಜಪ್ಪ ಇಂಗಳದಾಳ ಸಾ।। ಕೋಳಿಹಾಳ, ಅಮರೇಶಪ್ಪ ಗಡಿಹಳ್ಳಿ ಸಾ।। ಸೋಮಸಾಗರ, ಶರಣಪ್ಪ ಅಸಬಿ, ಅಮರೇಶಪ ಬಳ್ಳಾರಿ ಬಸವ ಕೇಂದ್ರದ ಅಧ್ಯಕ್ಷರು ಮರಕಟ್ಟ, ರುದ್ರಪ್ಪ ಹಳ್ಳಿ ಇವರು ಮಾತನಾಡಿದರು. ಈ ಸಂದರ್ಭದಲ್ಲಿ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಮಾಡುವುದರ ಮೂಲಕ , ಪುಟ್ಟ ಪುಟ್ಟ ಬಾಲಕರು ವಚನ ಕಟ್ಟುಗಳನ್ನ ಹೊತ್ತುಕೊಂಡು, 12ನೇ ಶತಮಾನದ ಶಿವ ಶರಣ ಶರಣೆಯರ ರೂಪಕಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಪ್ರಮುಕರಾದ ಶರಣ ರೇಣುಕಪ್ಪ ಮಂತ್ರಿ ಅಧ್ಯಕ್ಷರು ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ, ಬಸವರಾಜ ಹೂಗಾರ, ಶರಣಪ್ಪ ಹೊಸಳ್ಳಿ, ರಾಷ್ಟ್ರಪತಿ ಹೊಸಳ್ಳಿ, ನಾಗನಗೌಡ ಜಾಲಿಹಾಳ, ಗಿರಿಮಲ್ಲಪ್ಪ ಪರಂಗಿ ಸಾ. ವನಜಭಾವಿ, ಹನಮೇಶ್ ಹೊಸಳ್ಳಿ, ಲಿಂಗನಗೌಡ ದಳಪತಿ, ಶಿವಪುತ್ರಪ್ಪ ಉಚ್ಚಲಕುಂಟಿ, ಯಮನೂರಪ್ಪ ಕೋಳೂರು, ನಿಂಗಪ್ಪ ಮಂತ್ರಿ, ಜಗದೀಶ್ ಮೇಟಿ, ಶಾಂತಕುಮಾರ ಹೊಸಳ್ಳಿ, ದೇವೇಂದ್ರಪ್ಪ ಆವಾರಿ, ಬಸವರಾಜ ಹೊಸಳ್ಳಿ, ಹಾಗು ಅಕ್ಕನಾಗಲಾಂಬಿಕೆ ಬಳಗದ ಶರಣೆ ಶರಣಮ್ಮ ಬಸವನಗೌಡ ಪೋಲಿಸ್ ಪಾಟೀಲ್, ಯಮನಮ್ಮ ಗೌಡ್ರ ವನಜಭಾವಿ, ಅಕ್ಕಮಹಾದೇವಿ ಮೇಟಿ, ಗುರಲಿಂಗಮ್ಮ ವಿರುಪಾಕ್ಷಪ್ಪ ಮಂತ್ರಿ, ಚನ್ನಮ್ಮ, ನಿಂಗಮ್ಮ ಕೋಳೂರು, ಹನಮಮ್ಮ ಉಚ್ಚಲಕುಂಟಿ, ಶಂಕ್ರಮ್ಮ ಹೊಸಳ್ಳಿ, ಸಾವಿತ್ರಮ್ಮ ಆವಾರಿ, ನಾಗಮ್ಮ ಜಾಲಿಹಾಳ, ಮಲ್ಲಮ್ಮ ಮಂತ್ರಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದಿಂದ ಅನೇಕ ಬಸವಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave A Reply

Your email address will not be published.