deshadoothanews

ಬಿಜೆಪಿಯಿಂದ ಅಲೆಮಾರಿಗಳು ಸಂಪೂರ್ಣ ನಿರ್ಲಕ್ಷ್ಯ : ಸಣ್ಣ ಮಾರೆಪ್ಪ 

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕಾರಟಗಿ
ಬಿಜೆಪಿ ಆಡಳಿತದಲ್ಲಿ ಬಿಜೆಪಿ ಸರ್ಕಾರ ಅಲೆಮಾರಿಗಳನ್ನು ಸಂಪೂರ್ಣ ನಿರ್ಲಕ್ಷಿಸುವ ಕೆಲಸಮಾಡಿದೆ ಎಂದು ಕೆಪಿಸಿಸಿ ನ್ಯಾಯ ರಾಜ್ಯ ಉಪಾಧ್ಯಕ್ಷರು ಸಣ್ಣ ಮಾರೆಪ್ಪ ತಿಳಿಸಿದ್ದಾರೆ,
ಗುರುವಾರದಂದು ಶಿವರಾಜ್ ತಂಗಡಗಿ ಅವರ ನಿವಾಸಕ್ಕೆ ತೆರಳಿ ಭೇಟಿ ಸಂದರ್ಭದಲ್ಲಿ ಅವರು ಮಾತನಾಡಿದರು,
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿಗಳ ವಸತಿ ಯೋಜನೆಗೆ ಕಾಯ್ದಿರಿಸಿದ್ದ 300 ಕೋಟಿ ರೂಪಾಯಿಗಳನ್ನು ಬಿಜೆಪಿ ಸರ್ಕಾರ ಹಿಂಪೆಡದಿದೆ, ವಸತಿಯ ಕನಸು ಕಾಣುತಿದ್ದ ಸಾವಿರಾರು ಅಲೆಮಾರಿಗಳಿಗೆ ಬರಸಿಡಿಲು ಬಡಿದಂತಾಗಿದೆ. ಹಣವನ್ನು ಯೋಜನೆಗೆ ಸರ್ಕಾರ ಮರಳಿ ನೀಡಬೇಕು ಎಂದ ಅವರು, ಅಲೆಮಾರಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿವೇತನ ಸ್ಥಗಿತ ಗೊಳಿಸಿ, ವಿದೇಶ ಶಿಕ್ಷಣ ಪಡೆದುಕೊಳ್ಳುವ ಹಕ್ಕು ಕಿತ್ತಕೊಳ್ಳಲಾಗಿದೆ ಎಂದು ತಿಳಿಸಿದರು,
ಬಿಜೆಪಿ ಸರ್ಕಾರದಲ್ಲಿ ಬಡವರು.ಕೂಲಿ ಕಾರ್ಮಿಕರು. ಮಾಧ್ಯಮ ವರ್ಗದವರ ಬದುಕು ಬೀದಿಗೆ ಬಂದಂತಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ, ಅಹಿಂದ ವರ್ಗಗಳು ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನೆ ನಚ್ಚಿಕೊಂಡಿದೆ, ಮಾಜಿ ಮುಖ್ಯಮಂತ್ರಿ ಡಿ ದೇವರಾಜ್ ಅರಸು ಆಡಳಿತದಂತೆ ಸಿದ್ದರಾಮಯ್ಯನವರು ಬೇಡಿಕೆಗಳಿಗೆ ಸ್ಪಂದಿಸಿದ್ದರು ಅದ ಕಾರಣ ಈ ಸಲ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ತಮ್ಮ ಸಮುದಾಯಗಳಿಗೆ ಕರೆ ನೀಡಿದರು,
ಮಾಜಿ ಸಚಿವ ಶಿವರಾಜ್ ತಂಗಡಿಗಿ ಅವರನ್ನು ಅಲೆಮಾರಿ/ಅರೆ ಅಲೆಮಾರಿ ಸಮುದಾಯದದಿಂದ ಸನ್ಮಾನಿಸಿದರು, ಅಲೆಮಾರಿಯವರ ಬೇಡಿಕೆಗೆ ಸ್ಪಂದಿಸವುದಾಗಿ ಶಿವರಾಜ್ ತಂಗಡಿಗಿ ತಿಳಿಸಿದರು,
ಶ್ರೀನಿವಾಸ್ ಬೈಲ್ ಪತ್ತಾರ್, ರಾಮಣ್ಣ ಎಡವಲ್ಲಿ, ಚಿನ್ನಪ್ಪ, ಸಿಂದೂಳು ಆನಂದ್, ಸುಡಗಾಡು ಸಿದ್ದರ ಹನುಮಂತಪ್ಪ, ಮಾರುತಿ,ಕೊರವ.ಕೊರಚ.ಬುಡ್ಗ್ ಜಂಗಮ, ಸಿಂಧೂಳ ಇನ್ನಿತರ ಅಲೆಮಾರಿ ಸಮುದಾಯದವರು ಇದ್ದರು,
Leave A Reply

Your email address will not be published.