deshadoothanews

ಗಂಗಾವತಿಯ ಹಳ್ಳಿಗಳಲ್ಲಿ ಮತ ಬೇಟೆ ಆರಂಭಿಸಿದ ಆಮ್ ಆದ್ಮಿಯ ಮಹಿಳಾ ಕಾರ್ಯಕರ್ತರು

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಗಂಗಾವತಿ

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇರಕಲ್ಗಡ , ಯಲಮಗೇರಿ, ಹನುಮನ ಹಟ್ಟಿ, ಇತ್ಯಾದಿ ಹಳ್ಳಿಗಳಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ಶರಣಪ್ಪ ಸಜ್ಜೀಹೊಲ ಇವರ ಪರವಾಗಿ ಮಹಿಳಾ ಮುಖಂಡರು ಮತ ಬೇಟೆ ಆರಂಭಿಸಿ ಸಂಚಲನ ಮೂಡಿಸುತ್ತಿದ್ದಾರೆ . ಇಂದು ದಿನಾಂಕ 24.04.2023 ರಂದು ಇರ್ಕಲ್ಗಡ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಗ್ರಾಮಸ್ಥರು ಮಹಿಳಾ ಮುಖಂಡರ ಜೊತೆಗೆ

ದೆಹಲಿ ಆಮ್ ಆದ್ಮಿ ಸರ್ಕಾರದ ಸಾಧನೆಗಳನ್ನು ಸಂವಾದ, ಮತ್ತು ಚರ್ಚೆ ನಡೆಸುವ ಮೂಲಕ ಅರಿತುಕೊಂಡರು. ದೆಹಲಿ ಸರ್ಕಾರದಲ್ಲಿ ಮಹಿಳೆಯರಿಗೆ ವಿಶೇಷವಾಗಿ ದೊರೆಯುವ ಸೌಲಭ್ಯಗಳು ಕರ್ನಾಟಕದಲ್ಲಿ ಮತ್ತು ಗಂಗಾವತಿಯಲ್ಲಿ ತಮಗೂ ಬೇಕು ಎಂದು ಆಶಯ ವ್ಯಕ್ತಪಡಿಸಿ ಅದಕ್ಕಾಗಿಯಾದರೂ ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿ ತಿಳಿಸಿ ,ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ಸೂಚಿಸಿದರು. ಪಕ್ಷದ ಮಹಿಳಾ ಮುಖಂಡರಲ್ಲಿ ರೇಣುಕಾ ಬಸುರಾಜ್ ,ಜ್ಯೋತಿ ಲಕ್ಷ್ಮಿ ಸಜ್ಜಿ ಹೊಲ, ಶ್ರೀಮತಿ ಬಸಮ್ಮ, ಸಲ್ಮಾ ಇತರರು ಇದ್ದರು, ಅಲ್ಲದೆ ವಿರೂಪಣ್ಣ, ಚಂದ್ರಶೇಖರ್ ವರ್ಗ, ಗೋವಿಂದಪ್ಪ, ನಜೀರ್ ಅಹ್ಮದ್ ಇತರೆ ಕಾರ್ಯಕರ್ತರು ಹಾಜರಿದ್ದರು.

Leave A Reply

Your email address will not be published.