deshadoothanews

ಕುಷ್ಟಗಿ : ಇಂಡಿಯನ್ ಮೂಮೆಂಟ್ ಪಾರ್ಟಿ ಅಭ್ಯರ್ಥಿ ತುಕಾರಾಮ್ ಸುರ್ವೆ ಅಚ್ಚರಿ ಬೆಳವಣಿಗೆಯಲ್ಲಿ ಸೋಮವಾರ (ಎ.24) (ಕಮಲದ ಹೂ ಮುಡಿದಿದ್ದಾರೆ) ಬಿಜೆಪಿ ಸೇರಿದ್ದಾರೆ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕುಷ್ಟಗಿ

ಪಟ್ಟಣದಲ್ಲಿರುವ ತುಕಾರಾಮ್ ಸೂರ್ವೆ ಯವರ ನಿವಾಸಕ್ಕೆ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಆಗಮಿಸಿ, ತುಕರಾಮ್ ಸೂರವೆ ರವನ್ನು ಅಧಿಕೃತವಾಗಿ ಬಿಜೆಪಿಗೆ ಸ್ವಾಗತಿಸಿಕೊಂಡರು.

ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಪ್ರತಿಕ್ರಿಯಿಸಿ, ಜೆಡಿಎಸ್ ಅಭ್ಯರ್ಥಿಯಾಗಬೇಕಾಗಿದ್ದ ತುಕಾರಾಮ್ ಸೂರ್ವೆಗೆ ಕೊನೆಯ ಘಳಿಗೆಯಲ್ಲಿ ಬಿ ಫಾರ್ಮ ನೀಡದೇ ಅನ್ಯಾಯ ಮಾಡಿದೆ. ಇದರಿಂದ ನೊಂದು, ಇಂಡಿಯನ್ ಮೂಮೆಂಟ್ ಪಾರ್ಟಿಯಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ ಅವರಿಗೆ ನಿಮ್ಮನ್ನು ನಂಬಿದ ಮತದಾರರಿಗೆ ನ್ಯಾಯ ಕಲ್ಪಿಸಲು ನಮ್ಮೊಂದಿಗೆ ಕೈ ಜೋಡಿಸಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗೋಣ ಎಂದು ಮಾಡಿದ ಮನವಿಯ ಮೇರೆಗೆ ಸ್ಪಂದಿಸಿದ ಅವರು ಯಾವುದೇ ಷರತ್ತು ಇಲ್ಲದೇ ಬಿಜೆಪಿ ಸೇರಿದ್ದಾರೆ ಎಂದರು

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಕೆ.ಮಹೇಶ, ಪ್ರಭುಶಂಕರಗೌಡ ಪಾಟೀಲ, ಚೌಡಪ್ಪ, ಸುಖಮುನಿ, ಮರಸಣ್ಣ ತಾಳದ್ ಶ್ಯಾಮೀದಸಾಬ್ ಗಂಧೆಣ್ಣಿ , ಶ್ಯಾಮೀದ್ ಸಾಬ ನಾಡಗೌಡ್ರು,ಸೇರಿದಂತೆ‌ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು

ಇದ್ದರು.

ಕುಷ್ಟಗಿ ಪಟ್ಟಣದ ತುಕಾರಾಮ್ ಸೂರ್ವೆ ಯವರ ನಿವಾಸಕ್ಕೆ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಆಗಮಿಸಿ, ತುಕರಾಮ್ ಸೂರವೆ ರವನ್ನು ಅಧಿಕೃತವಾಗಿ ಬಿಜೆಪಿಗೆ ಸ್ವಾಗತಿಸಿಕೊಂಡರು.

Leave A Reply

Your email address will not be published.